ಶಿವಮೊಗ್ಗ ಲೈವ್.ಕಾಂ | 15 ಮಾರ್ಚ್ 2019
ಗಮನ ಬೇರೆಡೆ ಸೆಳೆದು ಹಾಲಿನ ವ್ಯಾಪಾರಿಯೊಬ್ಬರು ತಂದಿದ್ದ ಮೂರು ಲಕ್ಷ ರೂಪಾಯಿಯನ್ನು ದರೋಡೆ ಮಾಡಲಾಗಿದೆ. ಶಿವಮೊಗ್ಗ ಬಿ.ಹೆಚ್.ರಸ್ತೆಯಲ್ಲಿ ಘಟನೆ ನಡೆದಿದೆ. ಇನ್ನು, ಇಡೀ ಘಟನೆ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
![]() |
ಪೆನ್ಷನ್ ಮೊಹಲ್ಲಾದ ಹಾಲಿನ ವ್ಯಾಪಾರಿ ಕುಮಾರ್, ಬಿ.ಹೆಚ್.ರಸ್ತೆಯಲ್ಲಿರುವ ಬ್ಯಾಂಕ್’ನಿಂದ ಮೂರು ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ಹಿಂತಿರುಗುತ್ತಿದ್ದರು. ಈ ವೇಳೆ, ಬಿ.ಹೆಚ್.ರಸ್ತೆಯಲ್ಲಿ ದಿಢೀರ್ ಬಂದ ನಾಲ್ವರು, ಕುಮಾರ್ ಗಮನ ಬೇರೆಡೆ ಸೆಳೆದು ಮೂರು ಲಕ್ಷ ರೂ. ದರೋಡೆ ಮಾಡಿದ್ದಾರೆ.
ಹತ್ತು ರೂಪಾಯಿಯ ನೋಟುಗಳಿಗಾಗಿ ಹೋಯ್ತು ಮೂರು ಲಕ್ಷ

ಬಿ.ಹೆಚ್.ರಸ್ತೆಯಲ್ಲಿ ಕುಮಾರ್ ಬೈಕ್’ನಲ್ಲಿ ಮರಳುತ್ತಿದ್ದರು. ಈ ವೇಳೆ ಹಿಂಬದಿ ಬೈಕ್’ನಲ್ಲಿ ಬಂದ ಇಬ್ಬರು, ಹತ್ತತ್ತು ರೂಪಾಯಿ ನೋಟುಗನ್ನು ಕೆಳಗೆ ಹಾಕಿ, ಕುಮಾರ್ ಅವರಿಗೆ ನಿಮ್ಮ ದುಡ್ಡು ರಸ್ತೆಯಲ್ಲಿ ಬಿದ್ದಿದೆ ಅಂತಾ ತಿಳಿಸಿದರು. ಇದನ್ನು ನಂಬಿದ ಕುಮಾರ್ ಬೈಕ್ ಪಕ್ಕಕ್ಕೆ ನಿಲ್ಲಿಸಿ, ತಮ್ಮದೇ ದುಡ್ಡಿರಬೇಕು ಎಂದು ನೋಟುಗಳನ್ನು ಆರಿಸಿಕೊಳ್ಳುತ್ತಿದ್ದರು. ಇದೇ ಸಮಯಕ್ಕೆ ಹೊಂಚು ಹಾಕಿದ್ದ ಗ್ಯಾಂಗ್’ನ ಮತ್ತಿಬ್ಬರು, ಕುಮಾರ್ ಅವರ ಬೈಕ್’ನಲ್ಲಿದ್ದ ಹಣದ ಬ್ಯಾಗ್ ದರೋಡೆ ಮಾಡಿ ಪರಾರಿಯಾಗುತ್ತಾರೆ.
ಈ ಕುರಿತು ಕೊಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200
ಸುದ್ದಿಗಾಗಿ ಮೊಬೈಲ್ ನಂಬರ್ | 9964634494
ಈ ಮೇಲ್ | shivamoggalive@gmail.com
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200