ರಾತ್ರೋರಾತ್ರಿ ಸರಣಿ ಕಳ್ಳತನ, ಲಕ್ಷ ಲಕ್ಷದ ಚಿನ್ನಾಭರಣ, ಹಣ ಹೊತ್ತೊಯ್ದ ಖದೀಮರು

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿಕಾರಿಪುರ : ಸಿಟಿಯ ಚನ್ನಕೇಶವ ನಗರದಲ್ಲಿ ಸರಣಿ ಮನೆಗಳ್ಳತನವಾಗಿದೆ (theft). ಲಕ್ಷಾಂತರ ರೂಪಾಯಿ ಮೌಲ್ಯದ ಬಂಗಾರ, ನಗದು ಕಳವುವಾಗಿದೆ ಎಂದು ಆರೋಸಪಿಸಲಾಗಿದೆ. ಸೋಮವಾರ ರಾತ್ರಿ ಘಟನೆ ಸಂಭವಿಸಿದೆ.

ಚನ್ನಕೇಶವ ನಗರದ 15ನೇ ಅಡ್ಡರಸ್ತೆ ನಿವಾಸಿ ನಂದ ಬಣಕಾರ್ ಅವರು ಧಾರ್ಮಿಕ ಕಾರ್ಯಕ್ರಮಕ್ಕೆ ತೆರಳಿದ್ದರು. ಕಳ್ಳರು ಅವರ ಮನೆ ಬಾಗಿಲು ಮುರಿದು ಮಾಂಗಲ್ಯ ಸರ ಸೇರಿದಂತೆ ಅಂದಾಜು 14 ಲಕ್ಷ ರೂ. ಮೌಲ್ಯದ ಒಡವೆ ಹಾಗೂ 50 ಸಾವಿರ ರೂ. ನಗದು ಕಳವು ಮಾಡಿದ್ದಾರೆ. 

ಇದೇ ಕೇರಿಯಲ್ಲಿರುವ ಮೆಸ್ಕಾಂ ಲೈನ್‌ಮನ್ ಹಾಲೇಶಪ್ಪ ಅವರ ಮನೆ ಬಾಗಿಲು ಮುರಿದು ಕಳ್ಳತನ (theft) ಮಾಡಲಾಗಿದೆ. ಈ ವೇಳೆ ಪಕ್ಕದ ಮನೆಯವರು ಹೊರಗೆ ಬಂದಾಗ ಕಳ್ಳರು ಕಾಣಿಸಿಕೊಂಡಿದ್ದಾರೆ. ಅವರನ್ನು ಹಿಡಿಯುವ ಪ್ರಯತ್ನ ಮಾಡಿದಾಗ, ಬೆಳ್ಳಿ ವಸ್ತುಗಳಿದ್ದ ಚೀಲ ಸಿಕ್ಕಿದೆ.

ಚನ್ನಕೇಶವ ನಗರದ ತಿಪ್ಪೇಶಪ್ಪ ಹಾಗೂ ಇದೇ ಕೇರಿಯಲ್ಲಿರುವ ವೆಂಕಟೇಶ್ ಅವರ ಮನೆಯಲ್ಲೂ ಕಳ್ಳತನವಾಗಿದೆ. ಶಿಕಾರಿಪುರ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ಶಿವಮೊಗ್ಗ ಡಿಸಿ ಕಚೇರಿ ಮುಂದಿನ ಖಾಲಿ ಜಾಗಕ್ಕೆ ಬೇಲಿ, ಹಿಂದು ಕಾರ್ಯಕರ್ತರು ಗರಂ, ಬಿಗುವಿನ ವಾತಾವರಣ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment