ಸಾನಿಯಾ ಕಪೂರ್‌ ಮೆಸೇಜ್‌ಗೆ ಶಿವಮೊಗ್ಗದ ವ್ಯಕ್ತಿ ಕಳೆದುಕೊಂಡಿದ್ದು ಬರೋಬರಿ ₹55 ಲಕ್ಷ, ಏನಿದು ಕೇಸ್‌?

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಷೇರು ಮಾರುಕಟ್ಟೆಯಲ್ಲಿ (Share Market) ಹಣ ಹೂಡಿಕೆ ಮಾಡಿ ಅಧಿಕ ಲಾಭಾಂಶ ಗಳಿಸಬಹುದು ಎಂದು ನಂಬಿಸಿ ಲಕ್ಷ ಲಕ್ಷ ವಂಚಿಸುತ್ತಿರುವ ಪ್ರಕರಣ ಮತ್ತಷ್ಟು ವರದಿಯಾಗುತ್ತಿವೆ. ಶಿವಮೊಗ್ಗದ ವ್ಯಕ್ತಿಯೊಬ್ಬರಿಗೆ ಷೇರು ಮಾರುಕಟ್ಟೆ ಮತ್ತು ಲಾಭಾಂಶದ ಹೆಸರಿನಲ್ಲಿ ₹55 ಲಕ್ಷ ವಂಚಿಸಲಾಗಿದೆ.

ಹೇಗಾಯ್ತು ವಂಚನೆ?

ಸಾನಿಯಾ ಕಪೂರ್‌ ಎಂಬ ಹೆಸರಿನಲ್ಲಿ ಶಿವಮೊಗ್ಗದ ವ್ಯಕ್ತಿಗೆ ವಾಟ್ಸಪ್‌ ಮೆಸೇಜ್‌ ಬಂದಿತ್ತು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಅಧಿಕ ಲಾಭ ಗಳಿಸಬಹುದು ಎಂದು ತಿಳಿಸಲಾಗಿತ್ತು. ಇದನ್ನು ನಂಬಿದ ವ್ಯಕ್ತಿ ಹಣ ಹೂಡಿಕೆ ಮಾಡಿದ್ದರು. ನಂತರ ಹೂಡಿಕೆ ಹಣ ಸೇರಿ ಒಟ್ಟು ₹5.79 ಕೋಟಿ ಲಾಭಾಂಶ ಗಳಿಸಿದ್ದೀರ ಎಂದು ತೋರಿಸಲಾಗಿತ್ತು. ಹಾಗಾಗಿ ಶಿವಮೊಗ್ಗದ ವ್ಯಕ್ತಿ ಹಣ ವಿತ್‌ ಡ್ರಾ ಮಾಡಲು ಮುಂದಾಗಿದ್ದರು. ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ಹಣ ವಿತ್‌ ಡ್ರಾ ಮಾಡಲು ಸರ್ವಿಸ್‌ ಟ್ಯಾಕ್ಸ್‌ ಕಟ್ಟಬೇಕು ಎಂದು ಹೂಡಿಕೆ ಮಾಡಿಸಿಕೊಂಡವರು ತಿಳಿಸಿದ್ದರು. ಇದನ್ನು ನಂಬಿದ ಶಿವಮೊಗ್ಗದ ವ್ಯಕ್ತಿ ₹20 ಲಕ್ಷ ಹಣ ಕಟ್ಟಿದ್ದರು. ಸರ್ವಿಸ್‌ ಟ್ಯಾಕ್ಸ್‌ನ ಬಿಲ್‌ ನೋಡಿದಾಗ ತಾನು ಮೋಸ ಹೋಗಿರುವುದಾಗಿ ಶಿವಮೊಗ್ಗದ ವ್ಯಕ್ತಿಗೆ ಅರಿವಾಗಿದೆ. ₹55.30 ಲಕ್ಷ ಹಣ ಕಳೆದುಕೊಂಡಿದ್ದಾಗಿ ವ್ಯಕ್ತಿ ದೂರು ನೀಡಿದ್ದಾರೆ. ಶಿವಮೊಗ್ಗ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

JNNCE-Admission-Advt-scaled

ಇದನ್ನೂ ಓದಿ » ಅಡಿಕೆ ಧಾರಣೆ | 18 ಸೆಪ್ಟೆಂಬರ್‌ 2025‌ | ಇವತ್ತು ಯಾವ್ಯಾವ ಅಡಿಕೆಗೆ ಎಷ್ಟಿದೆ ರೇಟ್?

Share Market Scam

Leave a Comment