ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 21 MAY 2023
SHIMOGA : ಯಾರದ್ದೋ ಸೈಟನ್ನು (Site Selling) ತಮ್ಮದೆಂದು ಮಾರಾಟ ಮಾಡಿ ಹಣ ಪಡೆದು ವಂಚಿಸಿರುವ ಸಂಬಂಧ ಶಿವಮೊಗ್ಗ ನಗರದಲ್ಲಿ ಪ್ರಕರಣ ದಾಖಲಾಗಿದೆ. ಸೈಟ್ ಖರೀದಿಗೆ ಮುಂದಾಗಿದ್ದ ವ್ಯಕ್ತಿ 25 ಲಕ್ಷ ರೂ. ಹಣ ಕಡೆದುಕೊಂಡಿದ್ದಾರೆ. ಈಗ ಸೈಟು ಇಲ್ಲದೆ, ಹಣವು ಸಿಗದೆ ಕಂಗಾಲಾಗಿದ್ದಾರೆ.
ಏನಿದು ಪ್ರಕರಣ?
ಶಿವಮೊಗ್ಗದಲ್ಲಿ ಉದ್ಯಮಿಯೊಬ್ಬರು ಸೈಟ್ ಖರೀದಿಗೆ (Site Selling) ಮುಂದಾಗಿದ್ದಾರೆ. ವ್ಯಕ್ತಿಯೊಬ್ಬರು ತಾನು ಸೈಟ್ ಕೊಡಿಸುತ್ತೇನೆ ಎಂದು ತಿಳಿಸಿದ್ದು, ಶುಭ ಮಂಗಳ ಕಲ್ಯಾಣ ಮಂಟಪ ಸಮೀಪ 20X30 ಅಳತೆಯ ಸೈಟ್ ತೋರಿಸಿದ್ದಾರೆ. ಈ ಸೈಟ್ ತನ್ನ ಹೆಸರಿನಲ್ಲಿಯೇ ಇದೆ ಎಂದು ಪಾಲಿಕೆಯ ಪಿಐಡಿ ನಂಬರ್ ತೋರಿಸಿದ್ದಾರೆ.
ಇದನ್ನೂ ಓದಿ – ತಾಳಗುಪ್ಪ – ಬೆಂಗಳೂರು ಇಂಟರ್ ಸಿಟಿ ರೈಲು ಮೇ 23ರಂದು ತುಮಕೂರಿನ ತನಕ ಮಾತ್ರ ಸಂಚರಿಸಲಿದೆ, ಇಲ್ಲಿದೆ ಕಾರಣ
ಉದ್ಯಮಿಗೆ ಸೈಟ್ ಒಪ್ಪಿಗೆಯಾಗಿದ್ದು 50 ಸಾವಿರ ರೂ. ಮುಂಗಡ ಹಣ ಪಾವತಿಸಿದ್ದಾರೆ. ಬಳಿಕ ಬ್ಯಾಂಕ್ನಿಂದ ಸಾಲ ಪಡೆದು 24.50 ಲಕ್ಷ ರೂ. ಹಣದ ಡಿಡಿಯನ್ನು ಆ ವ್ಯಕ್ತಿಗೆ ಹಸ್ತಾಂತರಿಸಿದ್ದಾರೆ. ಆದರೆ ಬಹು ಸಮಯದವರೆಗೆ ಸೈಟಿನ ಖಾತೆ ಉದ್ಯಮಿ ಹೆಸರಿಗೆ ವರ್ಗವಾಗಿರಲಿಲ್ಲ. ಮಹಾನಗರ ಪಾಲಿಕೆಯಲ್ಲಿ ವಿಚಾರಿಸಿದಾಗ ಅಸಲಿ ವಿಚಾರ ಗೊತ್ತಾಗಿದೆ.
ನಕಲಿ ಸೈಟ್, ನಕಲಿ ಪಿಐಡಿ ನಂಬರ್
ಉದ್ಯಮಿಗೆ ಮಾರಾಟ ಮಾಡಿದ್ದ ಸೈಟ್ ವಾಸ್ತವದಲ್ಲಿ ಮಹಾನಗರ ಪಾಲಿಕೆಯ ಸ್ವತ್ತಾಗಿತ್ತು. ಇದೆ ಕಾರಣಕ್ಕೆ ಮಾರಾಟ ಮಾಡಿದ್ದ ವ್ಯಕ್ತಿಯ ಹೆಸರಿನಿಂದ ಉದ್ಯಮಿ ಹೆಸರಿಗೆ ಖಾತೆ ವರ್ಗಾವಣೆಯಾಗಿರಲಿಲ್ಲ. ಪಾಲಿಕೆಯಲ್ಲಿ ನಕಲಿ ಪಿಐಡಿ ನಂಬರ್ ಹಾಕಿ ಸೈಟ್ ಮಾರಾಟ ಮಾಡಲು ಮುಂದಾಗಿದ್ದ ವ್ಯಕ್ತಿಯ ಹೆಸರಿನಲ್ಲಿಯೇ ಖಾತೆ ಚಾಲ್ತಿಯಲ್ಲಿದೆ ಎಂಬಂತೆ ಬಿಂಬಿಸಲಾಗಿತ್ತು ಎಂದು ಉದ್ಯಮಿ ದೂರಿನಲ್ಲಿ ಆರೋಪಿಸಿದ್ದಾರೆ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ನಿಜ ಸಂಗತಿ ತಿಳಿಯುತ್ತಿದ್ದಂತೆ, ಉದ್ಯಮಿ ಕೂಡಲೆ ಸೈಟ್ ಮಾರಾಟ ಮಾಡಿದ ವ್ಯಕ್ತಿಯನ್ನು ಸಂಪರ್ಕಿಸಿ ಹಣ ವಾಪಸ್ ಕೇಳಿದ್ದಾರೆ. ಆದರೆ ಆ ವ್ಯಕ್ತಿ ಹಣ ಹಿಂತಿರುಗಿಸಲು ವಿಳಂಬ ಮಾಡಿ, ಫೋನ್ ರಿಸೀವ್ ಮಾಡದೆ ಇದ್ದಿದ್ದರಿಂದ ವಿನೋಬನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422