ಶಿವಮೊಗ್ಗ ಜೈಲಿನಲ್ಲಿ ಆರೋಪಿ ಭೇಟಿಗೆ ಬಂದಿದ್ದವರು 6 ಪ್ಯಾಕೆಟ್‌ ಹುದುಗಿಸಿ ಎಸ್ಕೇಪ್‌, ಏನಿದು ಕೇಸ್‌?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ : ಆರೋಪಿಯೊಬ್ಬನ ಭೇಟಿಗೆ ಜೈಲಿಗೆ (Jail) ಬಂದಿದ್ದ ಇಬ್ಬರು ಯುವಕರು ಆರು ಪೊಟ್ಟಣಗಳನ್ನು ಜೈಲು ಆವರಣದಲ್ಲಿ ಹುದುಗಿಸಿಟ್ಟಿದ್ದಾರೆ. ಅವರನ್ನು ತಡೆಯಲು ಭದ್ರತಾ ಸಿಬ್ಬಂದಿ ಯತ್ನಿಸಿದಾಗ ಬೈಕ್‌ ಅನ್ನು ಗೇಟಿಗೆ ಗುದ್ದಿಸಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಆರೋಪಿಯ ಭೇಟಿಗೆ ಬಂದಿದ್ದರು

ಚಂದನ್‌ ಮತ್ತು ದರ್ಶನ್‌ ಎಂಬುವವರು ವಿಚಾರಣಾಧೀನ ಖೈದಿ ಚೇತನ್‌ ಎಂಬಾತನ ಭೇಟಿಗೆ ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ (Jail) ಬಂದಿದ್ದರು. ಖೈದಿಯ ಭೇಟಿಯ ವೇಳೆ ಇವರು ಅನುಮಾನಾಸ್ಪದವಾಗಿ ವರ್ತಿಸಿದ್ದನ್ನು ಗಮನಿಸಿದ ಕೆಎಸ್‌ಐಎಸ್‌ಎಫ್‌ ಭದ್ರತಾ ಸಿಬ್ಬಂದಿ ಇಬ್ಬರ ಮೇಲೆ ನಿಗಾ ಇರಿಸಿದ್ದರು.

Shimoga-Central-Jail-Building

ಆರು ಪೊಟ್ಟಣ ಹುದುಗಿಸಲು ಯತ್ನ

ಖೈದಿಯನ್ನು ಭೇಟಿಯಾಗಿ ಹಿಂತಿರುಗುವಾಗ ಇನ್ಸುಲೇಷನ್‌ ಟೇಪ್‌ನಿಂದ ಸುತ್ತಿರುವ ಆರು ಪೊಟ್ಟಣಗಳನ್ನು ಗಿಡದ ಬಳಿ, ಕಸದ ರಾಶಿ ಬಳಿ ಹುದುಗಿಸಿಡಲು ಯತ್ನಿಸಿದ್ದಾರೆ. ಇದನ್ನು ಗಮನಿಸಿದ ಕೆಎಸ್‌ಐಎಸ್‌ಎಫ್‌ ಸಿಬ್ಬಂದಿ ದರ್ಶನ್‌ ಮತ್ತು ಚಂದನ್‌ನನ್ನು  ಹಿಡಿಯಲು ಯತ್ನಿಸಿದ್ದಾರೆ. ಆಗ ಇಬ್ಬರು ಬೈಕಿನಲ್ಲಿ ಎಸ್ಕೇಪ್‌ ಆಗಿದ್ದಾರೆ. ಈ ಸಂದರ್ಭ ಅವರು ಜೈಲಿನ ಗೇಟಿಗೆ ಗುದ್ದಿ ಪರಾರಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.

NFC-Chicken-Kabab

ಆರು ಅನುಮಾನಾಸ್ಪದ ಪೊಟ್ಟಗಳನ್ನು ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ. ಘಟನೆ ಸಂಬಂಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

https://parishramaneetacademy.com/landing-page/
ಹೆಚ್ಚಿನ ಮಾಹಿತಿಗೆ ಈ ಫೋಟೊ ಮೇಲೆ ಕ್ಲಿಕ್‌ ಮಾಡಿ

ಇದನ್ನೂ ಓದಿ » ಹೊಟೇಲ್‌ನಲ್ಲಿ ಮುದ್ದೆ, ಮಟನ್‌ ತಿಂದು, ಮಾಲೀಕನ ಕುತ್ತಿಗೆಗೆ ಚಾಕು ಇರಿದ ಗ್ರಾಹಕ, ಆಗಿದ್ದೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment