ಶಿವಮೊಗ್ಗ ಲೈವ್.ಕಾಂ | SHIMOGA NEWS | 20 ಜುಲೈ 2021
ಸ್ಮಾರ್ಟ್ ಸಿಟಿ ಕಾಮಗಾರಿಯ ಬಳಕೆಗಾಗಿ ಇರಿಸಿದ್ದ ಕಬ್ಬಿಣದ ಸರಳು, ನೀರಿನ ಟ್ಯಾಂಕರ್ ನಾಪತ್ತೆಯಾಗಿವೆ. ರಾತ್ರೋ ರಾತ್ರಿ ಕಳ್ಳರು ಇವುಗಳನ್ನು ಹೊತ್ತೊಯ್ದಿದ್ದು ದೂರು ದಾಖಲಾಗಿದೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಕಾಮಗಾರಿಗಾಗಿ 1500 ಕೆ.ಜಿ. ತೂಕದ ಕಬ್ಬಿಣದ ಸರಳುಗಳು ನಾಪತ್ತೆಯಾಗಿವೆ. ಇದರ ಮೌಲ್ಯ 67 ಸಾವಿರ ರೂ. ಎಂದು ಅಂದಾಜಿಸಲಾಗಿದೆ. ಇನ್ನು, ನೀರಿನ ಟ್ಯಾಂಕರ್ ಕೂಡ ನಾಪತ್ತೆಯಾಗಿದೆ. ಅದರ ಮೌಲ್ಯ ಒಂದು ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಕೃಷಿನಗರ ಮತ್ತು ಬಸವೇಶ್ವರ ನಗರದ ರಾಜಾಕಾಲುವೆ ಕೆಲಸಕ್ಕಾಗಿ ಸರಳು ಮತ್ತು ಟ್ಯಾಂಕರ್ ತರಿಸಲಾಗಿತ್ತು. ಇಲ್ಲಿನ ಡಾಲರ್ಸ್ ಕಾಲೋನಿ ಸೇತುವೆ ಬಳಿ ಇವುಗಳನ್ನು ಇರಿಸಲಾಗಿತ್ತು. ರಾತ್ರೋ ರಾತ್ರಿ ಕಳ್ಳರು ಇವುಗಳನ್ನು ಹೊತ್ತೊಯ್ದಿದ್ದಾರೆ.
ಈ ಸಂಬಂಧ ಗುತ್ತಿಗೆದಾರ ಸಂಸ್ಥೆ ವತಿಯಿಂದ ದೂರು ನೀಡಾಗಿದೆ. ಶಿವಮೊಗ್ಗ ಗ್ರಾಮಾಂತರ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್‍ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್‍ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್‍ನಲ್ಲಿ ಸುದ್ದಿಗಾಗಿ 7411700200