ಶಿವಮೊಗ್ಗದ ಬೈಕ್‌ ಮಾಲೀಕರೆ ಎಚ್ಚರ, ದೊಡ್ಡಪೇಟೆ ಠಾಣೆಯಲ್ಲಿ ದಾಖಲಾಯ್ತು ಪ್ರಕರಣ

ಶಿವಮೊಗ್ಗ:‌ ನಗರದ ಎನ್.ಟಿ ರಸ್ತೆಯಲ್ಲಿರುವ ಅರಸು ವೆಜ್ ಹೋಟೆಲ್ ಪಕ್ಕದ ಅಂಗಡಿಯೊಂದರ ಮುಂದೆ ನಿಲ್ಲಿಸಿದ್ದ ಹೀರೊ ಸ್ಪ್ಲೆಂಡರ್ ಬೈಕ್ (Splendor bike) ಕಳ್ಳತನವಾಗಿದೆ. ಆನಂದರಾವ್ ಬಡಾವಣೆಯ ಇಮ್ರಾನ್ ಬೇಗ್ ಎಂಬುವವರಿಗೆ ಸೇರಿದ ಬೈಕ್‌ ಕಳುವಾಗಿದೆ. (ಈ ಸುದ್ದಿಯನ್ನು ಇನ್ನು 34 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಇದನ್ನೂ ಓದಿ »  ₹1.20 ಲಕ್ಷ ಮೌಲ್ಯದ ಅಡಿಕೆ ಕಳ್ಳತನ, ಎಲ್ಲಿ? ಹೇಗಾಯ್ತು ಘಟನೆ?

Doddapete-Police-Station-General-Image.

ಕೆಲಸದ ನಿಮಿತ್ತ ತಮ್ಮ ಬೈಕನ್ನು ಅರಸು ವೆಜ್ ಹೋಟೆಲ್ ಪಕ್ಕದ ಅಂಗಡಿಯ ಮುಂದೆ ನಿಲ್ಲಿಸಿದ್ದರು. ಸ್ನೇಹಿತನ ಬೈಕ್‌ನಲ್ಲಿ ಮಾಚೇನಹಳ್ಳಿಗೆ ಹೋಗಿದ್ದರು. ನಂತರ ರಾತ್ರಿ ವಾಪಸ್ ಬಂದು ನೋಡಿದಾಗ ನಿಲ್ಲಿಸಿದ್ದ ಜಾಗದಲ್ಲಿ ಬೈಕ್ ಇರಲಿಲ್ಲ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಕಳ್ಳತನವಾದ ಬೈಕ್ ₹20,000 ಮೌಲ್ಯದ ಕಪ್ಪು ಬಣ್ಣದ 2012ರ ಮಾಡೆಲ್ ಬೈಕ್‌ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ:

Leave a Comment