100 ರುಪಾಯಿ ವಿಚಾರಕ್ಕೆ ಎದೆಗೆ ಚಾಕು ಹಾಕಿದ ಆರೋಪಿಗಳು

Published On : ಡಿಸೆಂಬರ್ 17, 2022

Published By : ನಿತಿನ್‌ ಆರ್‌.ಕೈದೊಟ್ಲು 

SHIVAMOGGA LIVE NEWS | 17 DECEMBER 2022

ಶಿವಮೊಗ್ಗ : ಗಾಂಧಿ ಬಜಾರ್ ಚೋರ್ ಬಜಾರ್ ನಲ್ಲಿ ಚಾಕು ಇರಿತ (stabbing) ಪ್ರಕರಣ ಸಂಬಂಧ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 100 ರೂ.ಗಾಗಿ ಗಲಾಟೆಯಾಗಿ, ಚಾಕುವಿನಿಂದ ಇರಿಯಲಾಗಿದೆ ಎಂದು ಗಾಯಾಳು ಫಯಾಜ್ ಅಹಮದ್ ಆರೋಪಿಸಿದ್ದಾನೆ.

Shimoga Nanjappa Hospital

ಫಯಾಜ್ ಅಹಮದ್, ಗಾಂಧಿ ಬಜಾರ್ ನ ಚೋರ್ ಬಜಾರ್ ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾಗ ಹರ್ಬಾಜ್ ಮತ್ತು ಶೊಯಬ್ ಎಂಬುವವರು ಬಂದಿದ್ದಾರೆ. 100 ರೂ. ಕೊಡು ಯಾರಿಗೋ ಕೊಡಬೇಕಿದೆ ಎಂದು ಕೇಳಿದ್ದಾರೆ. ಆಗ ಫಯಾಜ್ ಅಹಮದ್ ತನ್ನ ಬಳಿ ಹಣವಿಲ್ಲ ಎಂದು ತಿಳಿದ್ದಾನೆ. ಇದೆ ವಿಚಾರವಾಗಿ ಜಗಳವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. (stabbing)

ಇದನ್ನೂ ಓದಿಲು ಕ್ಲಿಕ್ ಮಾಡಿ – ಮೈಸೂರಿನ ಮಕ್ಕಳಿದ್ದ ಬಸ್ ಸಿಗಂದೂರು ಬಳಿ ಅಪಘಾತ, ಇಡೀ ದ್ವೀಪ ನೆರವಿಗೆ ನಿಂತಿದ್ದು ಹೇಗೆ ಗೊತ್ತಾ?

ದುಡ್ಡು ಕೊಡಲೆಬೇಕು ಎಂದು ಪಟ್ಟು ಹಿಡಿದ ಆರೋಪಿಗಳು ಅವಾಚ್ಯವಾಗಿ ನಿಂದಿಸಿದ್ದಾರೆ. ಬಳಿಕ ಶೋಹೆಬ್ ಬಳಿ ಇದ್ದ ಚಾಕುವಿನಿಂದ ಹರ್ಬಾಜ್ ಫಯಾಜ್ ಅಹಮದ್ ಎದೆಯ ಎಡ ಭಾಗಕ್ಕೆ ಚುಚ್ಚಿದ್ದಾನೆ ಎಂದು ಆರೋಪಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

Shimoga Nanjappa hospital

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : ಡಿಸೆಂಬರ್ 17, 2022

Leave a Comment