BREAKING NEWS – ಹಾಸ್ಟೆಲ್‌ ಟೆರೇಸ್‌ ಮೇಲೆ ನೇಣು ಬಿಗಿದ ಸ್ಥಿತಿಯಲ್ಲಿ ವಿದ್ಯಾರ್ಥಿನಿ ಮೃತದೇಹ

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ಹಾಸ್ಟೆಲ್‌ನ (Hostel) ಟೆರೇಸ್‌ ಮೇಲೆ ವಿದ್ಯಾರ್ಥಿನಿಯೊಬ್ಬರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಶಿವಮೊಗ್ಗದ ಕೋಟೆ ರಸ್ತೆಯ ಸರ್ಕಾರಿ ಬಾಲಕೀಯರ ವಸತಿ ನಿಲಯದಲ್ಲಿ ಇಂದು ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದಿದೆ.

ಭದ್ರಾವತಿ ತಾಲೂಕು ಗಂಗೂರಿನ ವನಿಷಾ (21) ಮೃತಳು. ಹಾಸ್ಟೆಲ್‌ನ ಟೆರೇಸ್‌ನಲ್ಲಿರುವ ನೀರಿನ ಟ್ಯಾಂಕ್‌ ಪಕ್ಕದಲ್ಲಿ ವನಿಷಾ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಟೆರೇಸ್‌ ಮೇಲೆ ಹೋದ ವಿದ್ಯಾರ್ಥಿನಿಯರು ಇದನ್ನು ಗಮನಿಸಿ ಕೂಡಲೆ ವಾರ್ಡನ್‌ಗೆ ಮಾಹಿತಿ ನೀಡಿದ್ದಾರೆ.

ಘಟನೆಗೆ ಕಾರಣ ತಿಳಿದು ಬಂದಿಲ್ಲ. ವನಿಷಾ, ಡಿವಿಎಸ್‌ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎಸ್ಸಿ ಪದವಿ ಓದುತ್ತಿದ್ದರು. ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

Kote-Road-Government-Ladies-Hostel-new.

ಇದನ್ನೂ ಓದಿ » ಶಿವಮೊಗ್ಗಕ್ಕೆ ಡಿಜಿ ಐಜಿಪಿ ಭೇಟಿ, ಮಹತ್ವದ ಮೀಟಿಂಗ್‌, ಪೊಲೀಸರಿಗೆ ಖಡಕ್‌ ಸೂಚನೆ

Hostel

Leave a Comment