SHIVAMOGGA LIVE NEWS | 9 APRIL 2023
SHIMOGA : ರಸ್ತೆ ದಾಟುತ್ತಿದ್ದ ಯುವಕನಿಗೆ ಟಾಟಾ ಸುಮೋ (Tata Sumo) ಕಾರು ಡಿಕ್ಕಿ ಹೊಡದಿದ್ದು ಕಾಲು, ಹೊಟ್ಟೆ, ಕೈಗೆ ಗಾಯವಾಗಿದೆ. ಮಲವಗೊಪ್ಪ ಗ್ರಾಮದ ಯಲವಟ್ಟಿ ಕ್ರಾಸ್ ಬಳಿ ಘಟನೆ ಸಂಭವಿಸಿದೆ. ಭದ್ರಾವತಿಯ ಪ್ರವೀಣ್ ಎಂಬಾತ ಗಾಯಗೊಂಡಿದ್ದಾನೆ. ಶಿವಮೊಗ್ಗದ ಎಂಎಸ್‍ಐಎಲ್‍ನಲ್ಲಿ ಕೆಲಸ ಮುಗಿಸಿ ಶ್ರೀಕಾಂತ್ ಎಂಬುವವರ ಜೊತೆಗೆ ಬೈಕಿನಲ್ಲಿ ಮನೆಗೆ ತೆರಳುತ್ತಿದ್ದರು. ಯಲವಟ್ಟಿ ಕ್ರಾಸ್ ಬಳಿ ಅಂಗಡಿಯಲ್ಲಿ ಟೀ ಕುಡಿಯುಲು ಬೈಕ್ ನಿಲ್ಲಿಸಿದ್ದರು.
ಸುದ್ದಿಯ ಮುಂದಿನ ಭಾಗ ಕೆಳಗಿದೆ
ಇದನ್ನೂ ಓದಿ – ದೇವರ ಕಾರ್ಯಕ್ಕೆ ಊರಿಗೆ ಹೋದವರಿಗೆ ಎದುರು ಮನೆಯವರಿಂದ ಬಂತು ಆಘಾತಕಾರಿ ಫೋನ್ ಕರೆ
ಎದುರುಗಡೆಯ ಅಂಗಡಿಯಿಂದ ಬನ್ ತರಲು ಪ್ರವೀಣ್ ರಸ್ತೆ ದಾಟುತ್ತಿದ್ದರು. ಈ ವೇಳೆ ಮಾಚೇನಹಳ್ಳಿ ಕಡೆಯಿಂದ ವೇಗವಾಗಿ ಬಂದ ಟಾಟಾ ಸುಮೋ ಕಾರು ಡಿಕ್ಕಿ ಹೊಡೆದಿದೆ. ಅದೇ ಕಾರಿನಲ್ಲಿ ಪ್ರವೀಣನನ್ನು ಕರೆದೊಯ್ದು ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕಾರು ಚಾಲಕ ಭರತ್ ಎಂಬಾತನ ವಿರುದ್ಧ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


CLICK HERE TO JOIN SHIVAMOGGA LIVE WHATSAPP GROUP