ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ
SHIVAMOGGA LIVE NEWS | 8 JUNE 2024
BHADRAVATHI : ಮಾಲೀಕ ಹೊರ ಹೋಗಿದ್ದ ಸಂದರ್ಭ ಅಡಿಕೆ ತಟ್ಟೆ (Adike Plate) ತಯಾರಿಸುವ ಫ್ಯಾಕ್ಟರಿಯಲ್ಲಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳ್ಳತನ ಮಾಡಿ ನೌಕರರು ಪರಾರಿಯಾಗಿದ್ದಾರೆ.
ನೇಪಾಳ ದೇಶದ ಕಾರ್ಮಿಕರು
ಚಿದಾನಂದ ಎಂಬುವವರು ಭದ್ರಾವತಿ ತಾಲೂಕು ಗೌಡರಹಳ್ಳಿಯ ತೋಟವೊಂದರಲ್ಲಿ ಅಡಿಕೆ ತಟ್ಟೆ ತಯಾರಿಸುವ ಫ್ಯಾಕ್ಟರಿ ನಡೆಸುತ್ತಿದ್ದಾರೆ. ನೇಪಾಳ ದೇಶದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಈಚೆಗೆ 40 ಸಾವಿರ ರೂ. ಹಣ ನೀಡುವಂತೆ ಕಾರ್ಮಿಕರು ಚಿದಾನಂದ ಬಳಿ ಕೇಳಿದ್ದರು. ಹಣಕಾಸು ಸಮಸ್ಯೆಯಿಂದ ಚಿದಾನಂದ ಹಣ ನೀಡಿರಲಿಲ್ಲ. ಇನ್ನೊಂದೆಡೆ ಕರೆಂಟ್ ಬಿಲ್ ಪಾವತಿಸದ ಹಿನ್ನೆಲೆ ಜೂ.5ರಂದು ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಕಡಿತಗೊಳಿಸಿದ್ದರು.
ಭದ್ರಾವತಿಗೆ ಹೋಗಿ ಬರುವಷ್ಟರಲ್ಲಿ ಎಲ್ಲ ಮಾಯ
ಕರೆಂಟ್ ಬಿಲ್ ಪಾವತಿಸಲು ಹಣ ಹೊಂದಿಸಿಕೊಂಡು ಜೂ.5ರ ರಾತ್ರಿ 10 ಗಂಟೆಗೆ ಹಿಂತಿರುಗಿದಾಗ, ಯಾವುದೋ ವಾಹನ ಫ್ಯಾಕ್ಟರಿ ಬಳಿ ಬಂದು ಹೋಗಿರುವುದು ಚಿದಾನಂದಗೆ ಗೊತ್ತಾಗಿದೆ. ಫ್ಯಾಕರಿಗೆ ತೆರಳಿ ಮೊಬೈಲ್ ಟಾರ್ಚ್‌ನಲ್ಲಿ ಪರಿಶೀಲಿಸಿದಾಗ ಒಂದು ಲ್ಯಾಪ್‌ಟಾಪ್, 10 ಬ್ಯಾಗ್ ಅಡಿಕೆ ತಟ್ಟೆ, ಅಡಿಕೆ ಹಾಳೆ ತಯಾರಿಸುವ 12 ಅಚ್ಚುಗಳು ನಾಪತ್ತೆಯಾಗಿದ್ದವು. ಕೆಲಸ ಮಾಡುತ್ತಿದ್ದ ನೇಪಾಳ ಮೂಲದ ದಿನೇಶ, ಆತನ ಪತ್ನಿ ನಿರ್ಮಲಾ, ಪ್ರಕಾಶ್, ಆತನ ಪತ್ನಿ ಮನ್ಸೂರ ಕಾಣೆಯಾಗಿದ್ದರು. ಘಟನೆ ಸಂಬಂಧ ಭದ್ರಾವತಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ – ಶಿವಮೊಗ್ಗದ ವಾಹನ ಸವಾರರೆ ಹುಷಾರ್, ಸ್ವಲ್ಪ ಯಾಮಾರಿದರೂ ಕೈ, ಕಾಲು ಮುರಿದುಕೊಳ್ಳುವುದು ಫಿಕ್ಸ್, ಕಾರಣವೇನು?


