ತಿಥಿ ಕಾರ್ಯಕ್ಕೆ ಹೋಗಿದ್ದ ಗುತ್ತಿಗೆದಾರರ ಮನೆಯಲ್ಲಿ ಲಕ್ಷ ಲಕ್ಷ ಮೌಲ್ಯದ ಆಭರಣ, ನಗದು ಕಳವು

ಶಿವಮೊಗ್ಗದ ಲೈವ್.ಕಾಂ | SHIMOGA NEWS | 18 ಫೆಬ್ರವರಿ 2022 ಸುದ್ದಿಯ ಮುಂದಿನ 6 ಪ್ಯಾರಾಗಳು ಕೆಳಗಿವೆ.

ಶಿವಮೊಗ್ಗದಲ್ಲಿ ಗುತ್ತಿಗೆದಾರರೊಬ್ಬರ ಮನೆಯ ಬಾಲ್ಕನಿಯ ಕಿಟಕಿ ಮುರಿದು ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ಕಳ್ಳತನ ಮಾಡಲಾಗಿದೆ. ಗುತ್ತಿಗೆದಾರರ ಕುಟುಂಬದವರು ಊರಿನಲ್ಲಿ ಇಲ್ಲದ ವೇಳೆ ಘಟನೆ ಸಂಭವಿಸಿದೆ.

Shimoga Nanjappa Hospital Cancer Care

ಬಸವನಗುಡಿಯಲ್ಲಿ ಇರುವ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಘಟನೆ ಸಂಭವಿಸಿದೆ. ಮಹಡಿ ಮನೆಯವರು ಮತ್ತು ಮನೆ ಕೆಲಸದಾಕೆ ಮೇಲೆ ಅನುಮಾನವಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಏನಿದು ಪ್ರಕರಣ?

ಗುತ್ತಿಗೆದಾರರು ತಮ್ಮ ತಾಯಿಯ ತಿಥಿ ಕಾರ್ಯಕ್ಕೆ ಕುಟುಂಬ ಸಹಿತ ಗೋಕರ್ಣಕ್ಕೆ ತೆರಳಿದ್ದರು. ಮನೆ ಕೆಲಸದಾಕೆ ಬರಲಿದ್ದು, ಆಕೆಗೆ ಕೀ ಕೊಡುವಂತೆ ತಿಳಿಸಿ, ತಮ್ಮ ಮನೆಯ ಮಹಡಿ ಮನೆಯವರಿಗೆ ಬೀಗ ಕೊಟ್ಟಿದ್ದರು.

ಗೋಕರ್ಣದಿಂದ ಹಿಂತಿರುಗಿದಾಗ ಮನೆಯಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಪರಿಶೀಲನೆ ನಡೆಸಿದಾಗ ಮನೆಯ ಬಾಲ್ಕನಿಯ ಕಿಟಕಿ ಸರಳು ಮುರಿದು ಕಳ್ಳರು ಒಳಪ್ರವೇಶ ಮಾಡಿರುವುದು ಕಂಡು ಬಂದಿದೆ.

ಏನೇನೆಲ್ಲ ಕಳವಾಗಿದೆ?

ಗುತ್ತಿಗೆದಾರರ ಮನೆಯಲ್ಲಿದ್ದ 263 ಗ್ರಾಂ ತೂಕದ 5.26 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳುವಾಗಿದೆ. ಅಲ್ಲದೆ ಮನೆಯಲ್ಲಿ ಇಟ್ಟಿದ್ದ 1.50 ಲಕ್ಷ ರೂ. ನಗದು ಕೂಡ ಕಣ್ಮರೆಯಾಗಿದೆ. ಕಳ್ಳರು ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಮಹಡಿ ಮನೆಯವರು ಮತ್ತು ಮನೆ ಕೆಲಸದಾಕೆ ಮೇಲೆ ಗುತ್ತಿಗೆದಾರರು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ.

Shimoga Live Total reach in January

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Shivamogga Live Promotion

Leave a Comment