ಶಿವಮೊಗ್ಗದ ಎಂಆರ್‌ಎಸ್‌ ಬಳಿ ಕಳ್ಳತನ, ₹2.5 ಲಕ್ಷ ಮೌಲ್ಯದ ವಸ್ತುಗಳು ನಾಪತ್ತೆ, ಆಗಿದ್ದೇನು?

ಶಿವಮೊಗ್ಗ: ಎಂಆರ್‌ಎಸ್ ವೃತ್ತದ ಬಳಿ ಕೆಪಿಟಿಸಿಎಲ್ ಆವರಣದ ಇಂಜಿನಿಯರ್ಸ್ ಅಸೋಸಿಯೇಷನ್ ಕಟ್ಟಡದ ಬಾಗಿಲು ಒಡೆದು ವಿದ್ಯುತ್ ಉಪಕರಣ ಹಾಗೂ ತಾಮ್ರದ ವೈರ್ ಕಳತನ ಮಾಡಲಾಗಿದೆ. (ಈ ಸುದ್ದಿಯನ್ನು ಇನ್ನು 31 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಕಳ್ಳರು ಅಸೋಸಿಯೇಷನ್ ಕಟ್ಟಡದ ಬಾಗಿಲು ಮೀಟಿ ಒಳಗೆ ನುಗ್ಗಿದ್ದಾರೆ. ಕಟ್ಟಡಕ್ಕೆ ಅಳವಡಿಸಿದ್ದ ವಿದ್ಯುತ್ ಮೀಟರ್ ಬೋರ್ಡ್ ಕಿತ್ತು ಹಾಕಿ, ಅದರಲ್ಲಿದ್ದ ₹40,000 ಮೌಲ್ಯದ ತಾಮ್ರದ ವೈರ್ ಕಳವು ಮಾಡಿದ್ದಾರೆ. ಅಲ್ಲದೆ ವಿದ್ಯುತ್ ಮೀಟರ್, ಎಂಸಿಬಿ, ಸ್ವಿಚ್ ಬೋರ್ಡ್ ಹಾಗೂ ವೈರ್‌ಗಳನ್ನು ಕಿತ್ತುಹಾಕಿ ಹಾನಿಗೊಳಿಸಿದ್ದಾರೆ. ಕಳ್ಳತನ ಹಾಗೂ ಹಾನಿಯಿಂದ ಸಂಸ್ಥೆಗೆ ಸುಮಾರು ₹2.5 ಲಕ್ಷ ಮೌಲ್ಯದ ನಷ್ಟವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Crime-News-General-Image

ಮೆಸ್ಕಾಂ ಸಂಸ್ಥೆಯ ಎಇಇ ವಿಜಯ್ ಕುಮಾರ್ ಅವರು ದೂರು ನೀಡಿದ್ದಾರೆ. ಘಟನೆ ಸಂಬಂಧ ಕೋಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.