ನಗದು, ಬೆಳ್ಳಿ ವಿಗ್ರಹದ ಜೊತೆಗೆ ಸಾಕ್ಷಿ ನಾಶಕ್ಕೆ ಸಿಸಿಟಿವಿ ಡಿವಿಆರ್ ಕದ್ದೊಯ್ದ ಕಳ್ಳರು

ನಿಮ್ಮೂರ ಸುದ್ದಿ ಕೆಲವೇ ನಿಮಿಷದಲ್ಲಿ ಸಾವಿರ ಸಾವಿರ ಜನರನ್ನು ತಲುಪುತ್ತೆ!

ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ನಮಗೆ ಕಳುಹಿಸಬಹುದು. ನಮ್ಮ ವಾಟ್ಸಪ್‌ ನಂಬರ್ 7411700200.

ನಮ್ಮ ಗ್ರೂಪ್‌ ಸೇರಿಲು ಇಲ್ಲಿ ಕ್ಲಿಕ್‌ ಮಾಡಿ
NEWS HIGHLIGHTS

SHIVAMOGGA LIVE NEWS | 30 DECEMBER 2022

ಹೊಸನಗರ  : ಕೃಷಿ ಪತ್ತಿನ ಸಹಕಾರ ಸಂಘದ ಬಾಗಿಲಿನ ಬೀಗ (theft at society) ಮುರಿದು ನಗದು, ದೇವರ ಬೆಳ್ಳಿ ವಿಗ್ರಹ, ಸಿಸಿಟಿವಿ ಡಿವಿಆರ್ ಕಳ್ಳತನ ಮಾಡಲಾಗಿದೆ.

➤ ಸುದ್ದಿಯ ಮುಂದಿನ 5 ಪ್ಯಾರಾಗಳು ಕೆಳಗಿವೆ.

Shimoga Nanjappa Hospital

ಹೊಸನಗರ ತಾಲೂಕು ನಗರದ ನೀಲಕಂಠೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಬಾಗಿಲಿನ ಬೀಗ ಮುರಿದು ಕಳ್ಳತನ ಮಾಡಲಾಗಿದೆ. ಬೆಳಗ್ಗೆ ಸ್ವಚ್ಛತಾ ಕಾರ್ಯ ನಡೆಸಲು ಸಿಬ್ಬಂದಿ ಬಂದಾಗ ಕಳ್ಳತನ ಬೆಳಕಿಗೆ (theft at society) ಬಂದಿದೆ.

ಇದನ್ನೂ ಓದಿ – ಮದುವೆಯಾಗಿ ಏಳು ತಿಂಗಳು, ಗಂಡನ ಮನೆಯಲ್ಲಿ ಗೃಹಿಣಿ ನೇಣಿಗೆ ಶರಣು

ಡಿ.28ರಂದು ಸಂಜೆ ಸಂಘದ ಸೇಲ್ಸ್ ಮನ್ ಅವರು ಕಚೇರಿಯ ಬೀಗ ಹಾಕಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಕೀ ತಲುಪಿಸಿದ್ದರು. ಮರುದಿನ ಬೆಳಗ್ಗೆ ಸಂಘದ ಸ್ವಚ್ಛತೆ ಮಾಡುವ ಮಹಿಳೆ ಬಂದಾಗ ಬಾಗಿಲಿನ ಬೀಗ ಮುರಿದಿರುವುದು ಗೊತ್ತಾಗಿದೆ. ಕೂಡಲೆ ಸಿಬ್ಬಂದಿಗೆ ವಿಚಾರ ತಿಳಿಸಿದ್ದಾರೆ.

ಸಂಘದ ಕಚೇರಿಯಲ್ಲಿದ್ದ 25 ಸಾವಿರ ರೂ. ನಗದು, 3 ಸಾವಿರ ರೂ. ಮೌಲ್ಯದ ಬೆಳ್ಳಿಯ ಗಣಪತಿ ಮೂರ್ತಿ, 20 ಸಾವಿರ ರೂ. ಮೌಲ್ಯದ ಸಿಸಿಟಿವಿ ಕ್ಯಾಮರಾ ಡಿವಿಆರ್ ಕಳ್ಳತನ ಮಾಡಲಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Shimoga nanjappa hospital

Leave a Comment