SHIVAMOGGA LIVE | 3 AUGUST 2023
SORABA : ಪುರಾಣ ಪ್ರಸಿದ್ಧ ಮತ್ತು ಐತಿಹಾಸಿಕ ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಸ್ಥಾನದ ಕಾಣಿಕೆ ಹುಂಡಿ ಮತ್ತು ದೇವರ ಮೂರ್ತಿ ಕಳ್ಳತನಕ್ಕೆ (Theft Attempt) ಯತ್ನಿಸಲಾಗಿದೆ. ಬಾಗಿಲಿನ ಬೀಗ ಒಡೆಯಲು ಸಾಧ್ಯವಾಗದೆ ಕಳ್ಳರು ಎಲ್ಲವನ್ನು ಬಿಟ್ಟು ಪರಾರಿಯಾಗಿದ್ದಾರೆ.
ಬುಧವಾರ ಸಂಜೆ 6 ಗಂಟೆಗೆ ಪುರೋಹಿತರು ಎಂದಿನಂತೆ ಪೂಜೆ ಮುಗಿಸಿ ಬೀಗ ಹಾಕಿ ತೆರಳಿದ್ದರು. ಆ ನಂತರ ಕಳ್ಳರು ದೇವಸ್ಥಾನಕ್ಕೆ ನುಗ್ಗಿದ್ದು ಕಳ್ಳತನಕ್ಕೆ (Theft Attempt) ಪ್ರಯತ್ನಿಸಿದ್ದಾರೆ.
ಏನೆಲ್ಲ ಕೃತ್ಯ ಎಸಗಿದ್ದಾರೆ?
ಕಳ್ಳರು ಮೊದಲು ಸೂಲದ ಭೀರಪ್ಪ ದೇವಸ್ಥಾನದ ಬಾಗಿಲ ಬೀಗ ಒಡೆದು ಕಳ್ಳತನಕ್ಕೆ ಮುಂದಾಗಿದ್ದಾರೆ. ಅಲ್ಲಿ ಏನು ಸಿಗದಿದ್ದಾಗ ಗುಡ್ಡದ ಮೇಲಿರುವ ರೇಣುಕಾಂಬ ದೇವಿ ದೇವಸ್ಥಾನಕ್ಕೆ ನುಗ್ಗಿದ್ದಾರೆ. ಪೂರ್ವದಲ್ಲಿರುವ ಬಾಗಿಲಿನ ಬೀಗ ಒಡೆದು ಒಳಗೆ ನುಗ್ಗಿದ್ದಾರೆ. ಕಾಣಿಕೆ ಹುಂಡಿ ಹೊತ್ತೊಯ್ಯಲು ಪ್ರಯತ್ನಿಸಿದ್ದಾರೆ.
ಪಶ್ಚಿಮದ ಬಾಗಿಲಲ್ಲಿ ಹೊರಹೋಗಲು ಯತ್ನ
ಪೂರ್ವದ ಬಾಗಿಲಿನಿಂದ ಒಳನುಗ್ಗಿದ್ದ ಕಳ್ಳರು ಪಶ್ಚಿಮದ ಬಾಗಿಲಿನಿಂದ ಹುಂಡಿ ಹೊರಗೆ ಕೊಂಡೊಯ್ಯಲು ಯತ್ನಿಸಿದ್ದಾರೆ. ಪೂರ್ವದ ಬಾಗಿಲಿನಿಂದ ಹುಂಡಿ ಕೊಂಡೊಯ್ದರೆ ಮೆಟ್ಟಿಲು ಹತ್ತಿ ಬಂದವರಿಗೆ ಕಾಣಿಸಬಹುದು ಎಂದು ಕಳ್ಳರು ಯೋಚಿಸಿದ್ದಾರೆ. ಹಾಗಾಗಿ ಪೂಶ್ಚಿಮದ ಬಾಗಿಲಿನ ಬೀಗ ಮುರಿಯಲು ಮುಂದಾಗಿದ್ದಾರೆ.
ಇದನ್ನೂ ಓದಿ – 25 ಕೆ.ಜಿ ಅಕ್ಕಿ, 5 ಕೆ.ಜಿ ಟೊಮೆಟೊ, ದಿನಸಿ ಪೂರೈಸುವಂತೆ ಪ್ರಾಂಶುಪಾಲರಿಗೆ ಅತಿಥಿ ಉಪನ್ಯಾಸಕರ ಮನವಿ, ಕಾರಣವೇನು?
ಮೆಟ್ಟಿಲು ಹತ್ತಿ ಬಂದ ವ್ಯಕ್ತಿ
ಪ್ರತಿ ರಾತ್ರಿ ದೇವಸ್ಥಾನದ ಮುಂಭಾಗ ಮಲಗುವ ಮಂಜಪ್ಪ ಎಂಬುವವರು ಮೆಟ್ಟಿಲು ಹತ್ತಿ ಬಂದಿದ್ದಾರೆ. ಇದನ್ನು ಗಮನಿಸಿದ ಕಳ್ಳರು ಹುಂಡಿ ಬಿಟ್ಟು, ದೇವಿಯ ಬೆಳ್ಳಿ ವಿಗ್ರಹವನ್ನು ಹೊರ ಆವರಣದಲ್ಲಿ ಇಟ್ಟು ಪರಾರಿಯಾಗಿದ್ದಾರೆ. ದೇವಸ್ಥಾನದ ಸಮೀಪಕ್ಕೆ ಬಂದ ಮಂಜಪ್ಪ ಅವರಿಗೆ ಕಳ್ಳತನದ ಯತ್ನ ಗೊತ್ತಾಗಿದೆ. ಕೂಡಲೆ ಸಂಬಂಧಿಸಿದವರಿಗೆ ವಿಚಾರ ತಿಳಿಸಿದ್ದಾರೆ. ತಹಶೀಲ್ದಾರ್ ಹುಸೇನ್ ಸರಕಾವತ್, ದೇವಾಲಯ ಸಮಿತಿ ಸದಸ್ಯರು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ದರ್ಶನಕ್ಕೆ ಸಾವಿರ ಸಾವಿರ ಭಕ್ತರು
ಅಧಿಕ ಮಾಸದ ಹಿನ್ನೆಲೆ ಮಂಗಳವಾರ ಚಂದ್ರಗುತ್ತಿ ರೇಣುಕಾಂಬೆ ದೇವಸ್ಥಾನಕ್ಕೆ ಸಾವಿರಾರು ಭಕ್ತರು ಭೇಟಿ ನೀಡಿದ್ದರು. ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದರು. ಈ ಹಿನ್ನೆಲೆ ದೇವಸ್ಥಾನದ ಹುಂಡಿಯಲ್ಲಿ ಹೆಚ್ಚಿನ ಕಾಣಿಕೆ ಹಣ ಸಂಗ್ರಹವಾಗಿರುತ್ತದೆ ಎಂದು ಭಾವಿಸಿ ಕಳ್ಳರು ಹುಂಡಿ ಕಳ್ಳತನಕ್ಕೆ ಮುಂದಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ.
ಕೋಟಿ ಆದಾಯವಿದ್ದರು ರಕ್ಷಣೆ ಇಲ್ಲ
ಚಂದ್ರಗುತ್ತಿ ದೇವಸ್ಥಾನ ಪ್ರತಿ ವರ್ಷ ಸರ್ಕಾರಕ್ಕೆ 1.5 ಕೋಟಿ ರೂ. ಅದಾಯ ತಂದುಕೊಡಲಿದೆ. ಆದರೆ ಈ ದೇವಸ್ಥಾನಕ್ಕೆ ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲ. ಭದ್ರತಾ ಸಿಬ್ಬಂದಿ ನೇಮಿಸಿಲ್ಲ, ಸಿಸಿಟಿವಿಗಳನ್ನು ಅಳವಡಿಸಿಲ್ಲ. ಇದೆಲ್ಲವು ಗೊತ್ತಿರುವುದರಿಂದಲೆ ಹುಂಡಿ ಕಳ್ಳತನಕ್ಕೆ ಯತ್ನಿಸಲಾಗಿದೆ ಎಂದು ಭಕ್ತರು ಆಕ್ರೋಶ ವ್ಯಕ್ತಪಡಿಸುತ್ತಾರೆ.
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200