ಶಿವಮೊಗ್ಗ ಲೈವ್.ಕಾಂ | SORABA NEWS | 4 ಜುಲೈ 2021
ಸ್ವಸಹಾಯ ಸಂಘದಲ್ಲಿ ಮಾಡಿದ ಸಾಲ ತೀರಿಸಲು ಮನೆಯ ಬೀಗ ಒಡೆದು ಕಳವು ಮಾಡಿದ್ದ ಆರೋಪಿಯನ್ನು ಚಿನ್ನಾಭರಣ ಸಮೇತ ಸೊರಬ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ತಾಲ್ಲೂಕಿನ ಛತ್ರದಹಳ್ಳಿ ಗ್ರಾಮದ ಚಂದ್ರಪ್ಪ ಗಣೇಶಪ್ಪ (30) ಬಂಧಿತ ಆರೋಪಿ. ಸಾಲ ತೀರಿಸಲು ಕಳವು ಮಾಡಿದ್ದ ಚಂದ್ರಪ್ಪ, ಅದೆ ಸಾಲ ತೀರಿಸಿ ಪೊಲೀಸರ ಅತಿಥಿಯಾಗಿದ್ದಾನೆ.
ಆರಿದ್ರ ಮಳೆಗೆ ಹಬ್ಬಕ್ಕೆ ಹೋದಾಗ ಕಳ್ಳತನ
ಜೂನ್ 29ರಂದು ಛತ್ರದಹಳ್ಳಿಯ ರಮೇಶ್ ಅವರು ಕುಟುಂಬ ಸಮೇತ ಆರಿದ್ರಾ ಮಳೆ ಹಬ್ಬಕ್ಕೆಂದು ನೆರೆಯ ಗ್ರಾಮಕ್ಕೆ ತೆರಳಿದ್ದರು. ಈ ಬಗ್ಗೆ ಮಾಹಿತಿ ಹೊಂದಿದ್ದ ಆರೋಪಿ ಚಂದ್ರಪ್ಪ ಮನೆಯಲ್ಲಿ ಯಾರು ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡು, ಮನೆಯ ಬೀಗ ಒಡದು ಕಳವು ಮಾಡಿದ್ದ .
ತೀರಿಸಿದ ಸಾಲವೇ ಪ್ರಮುಖ ಸಾಕ್ಷಿಯಾಯ್ತು..!
ಮನೆ ಕಳ್ಳತನ ಮಾಡಿದ್ದ ಚಂದ್ರಪ್ಪ ಯಾರಿಗೂ ಗೊತ್ತಾಗದೆ ಹಾಗೆ ಸಹಜವಾಗಿದ್ದ. ಪೊಲೀಸರು ತನಿಖೆ ನಡೆಸುತ್ತಿದ್ದ ವೇಳೆ ಚಂದ್ರಪ್ಪ, ಸ್ವಸಹಾಯ ಸಂಘದ 60 ಸಾವಿರ ಸಾಲವನ್ನು ಒಮ್ಮೆಗೆ ತೀರಿಸಿದ್ದು ಗೊತ್ತಾಗಿತ್ತು. ವಿಚಾರಣೆ ನಡೆಸಿದಾಗ ಕಳ್ಳತನ ವಿಚಾರ ಬಾಯಿಬಿಟ್ಟಿದ್ದಾನೆ.
ಪೊಲೀಸರಿಂದ ಚಿನ್ನಾಭರಣ ವಶಕ್ಕೆ
ಆರೋಪಿ ಚಂದ್ರಪ್ಪನಿಂದ 10 ಗ್ರಾಂ ತೂಕದ ಚೈನ್, 8 ಗ್ರಾಂ ತೂಕದ ಎರಡು ಕೆನ್ನೆ ಸರಪಳಿ, 6 ಗ್ರಾಂ ತೂಕದ ಉಂಗುರು ಹಾಗೂ 2 ಗ್ರಾಂ ತೂಕದ ಒಂದು ಬಟನ್ ಅಂದಾಜು 92 ಸಾವಿರ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆಯಲಾಗಿದೆ.
ಡಿವೈಎಸ್ಪಿ ಶಿವಾನಂದ ಮದರಕಂಡಿ, ಇನ್ಸ್ಪೆಕ್ಟರ್ ಆರ್.ಡಿ. ಮರುಳಸಿದ್ದಪ್ಪ ಮಾರ್ಗದರ್ಶನದಲ್ಲಿ ಪಿಎಸ್ಐ ಟಿ.ಬಿ. ಪ್ರಶಾಂತ್ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಚಿನ್ನಾಭರಣ ಸಮೇತ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿಯಲ್ಲಿ ಎಎಸ್ಐಗಳಾದ ಶಬ್ಬೀರ್ ಖಾನ್, ಚಿನ್ನಪ್ಪ, ಸಿಬ್ಬಂದಿ ಪರಮೇಶ ನಾಯ್ಕ್, ಸಲ್ಮಾನ್ಖಾನ್ ಹಾಜಿ, ಸಿದ್ದನ ಗೌಡ ಬಣಕಾರ, ಶಶಿಧರ, ಸಂದೀಪ, ಎಂ.ಜಿ. ಮೋಹನ, ಸುಧಾಕರ, ಜಗದೀಶ ಬೇಲೂರಪ್ಪನವರ್ ಪಾಲ್ಗೊಂಡಿದ್ದರು.
(ಶಿವಮೊಗ್ಗ ಲೈವ್.ಕಾಂ ನಮ್ಮೂರ ನ್ಯೂಸ್ ವಿಭಾಗ – ನಿಮ್ಮೂರ ನ್ಯೂಸ್ಗೆ ನೀವೇ ವರದಿಗಾರರು. ನಿಮ್ಮೂರ ಪ್ರಮುಖ ಘಟನೆಗಳನ್ನು ನೀವೇ ವರದಿ ಮಾಡಬಹುದು. ಫೋಟೊ, ವಿಡಿಯೋ ಸಹಿತ ವರದಿಯನ್ನು ವಾಟ್ಸಪ್ ಅಥವಾ ಈ ಮೇಲ್ ಮಾಡಬಹುದು)
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200