ಶಿವಮೊಗ್ಗ: ಬಾಪೂಜಿನಗರದ ಮನೆಯೊಂದರಲ್ಲಿ ಬೀರು ಒಡೆದು ಸುಮಾರು ₹4.36 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರು ದೋಚಿರುವ ಘಟನೆ ನಡೆದಿದೆ.
ಬಾಪೂಜಿನಗರ 2ನೇ ತಿರುವಿನ ಮೆಕ್ಯಾನಿಕ್ ಜಬಿವುಲ್ಲಾ ಎಂಬುವವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಹಿನ್ನೆಲೆ ಮನೆಯನ್ನು ಲಾಕ್ ಮಾಡಿದ್ದ ಜಬಿವುಲ್ಲಾ ಅವರು ತಮ್ಮ ಕುಟುಂಬದವರೊಂದಿಗೆ ಊರಿಗೆ ತೆರಳಿದ್ದರು. ಸಂಜೆ ವಾಪಸ್ ಬಂದು ನೋಡಿದಾಗ ಮನೆಯ ಬೀಗ ತೆಗೆದಿರುವುದು ಕಂಡುಬಂದಿದೆ. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಬೆಡ್‌ರೂಮ್‌ನಲ್ಲಿದ್ದ ಬೀರು ಒಡೆದು, ಅದರಲ್ಲಿದ್ದ 31 ಗ್ರಾಂ ತೂಕದ ಲಾಂಗ್ ನೆಕ್ಲೇಸ್, 15 ಗ್ರಾಂ ತೂಕದ ಹ್ಯಾಂಗಿಂಗ್ಸ್ ಹಾಗೂ 10 ಗ್ರಾಂ ತೂಕದ 5 ಚಿನ್ನದ ಉಂಗುರಗಳು ಸೇರಿದಂತೆ ಒಟ್ಟು 56 ಗ್ರಾಂ ತೂಕದ ಅಂದಾಜು ₹4,36,800 ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಜಬಿವುಲ್ಲಾ ಅವರು ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:➤ ಮಾಚೇನಹಳ್ಳಿ ಫ್ಲೈ ಓವರ್ ಮೇಲೆ ಬೈಕುಗಳು ಡಿಕ್ಕಿ, KSRP ಸಿಬ್ಬಂದಿ ಸೇರಿ ಇಬ್ಬರಿಗೆ ಗಾಯ, ಹೇಗಾಯ್ತು ಘಟನೆ?