ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ ಲೈವ್.ಕಾಂ | THIRTHAHALLI NEWS | 2 APRIL 2021
ತುಂಗಾ ನದಿಯಲ್ಲಿ ಈಜಲು ಹೋಗಿದ್ದ ವಕೀಲರೊಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಕುಶಾವತಿ ಪಾರ್ಕ್ ಹಿಂಭಾಗ ತುಂಗಾ ನದಿಯಲ್ಲಿ ಘಟನೆ ಸಂಭವಿಸಿದೆ.
ತೀರ್ಥಹಳ್ಳಿ ಜೆಎಂಎಫ್ಸಿ ಕೋರ್ಟ್ನಲ್ಲಿ ವಕೀಲರಾಗಿದ್ದ ಸಂದೇಶ್ ಕುಮಾರ್ ಮೃತರು. ಗುರುವಾರ ಸಂದೇಶ್ ಅವರು ತುಂಗಾ ನದಿಯಲ್ಲಿ ಈಜಲು ತೆರಳಿದ್ದರು. ಈ ವೇಳೆ ಅವಘಡ ಸಂಭವಿಸಿದೆ.
ವರ್ಷದ ಹಿಂದಿನ ಪೋಸ್ಟ್ ವೈರಲ್
ಸಂದೇಶ್ ಅವರು ಮೃತರಾದ ವಿಚಾರ ತಿಳಿಯುತ್ತಿದ್ದಂತೆ ವಕೀಲರ ಸಮೂಹ ಕಂಬನಿ ಮಿಡಿಯಿತು. ಈ ನಡುವೆ ಸಂದೇಶ್ ಅವರು ಕಳೆದ ವರ್ಷ ಏಪ್ರಿಲ್ 1ರಂದು ಫೇಸ್ಬುಕ್ನಲ್ಲಿ ಮಾಡಿದ್ದ ಪೋಸ್ಟ್ ವೈರಲ್ ಆಗಿದೆ. ‘ನೀರು ಬಿಟ್ಟು ಮೇಲೆ ಬರೋಕೆ ಮನಸಾಗುತ್ತಿಲ್ಲ’ ಎಂದು ಸಂದೇಶ್ ಅವರು ಬರೆದುಕೊಂಡಿದ್ದರು. ಸರಿಯಾಗಿ ಒಂದ ವರ್ಷಕ್ಕೆ ತುಂಗಾ ನದಿಯಲ್ಲಿ ಮುಳುಗಿ ಮೃತರಾಗಿದ್ದಾರೆ.

ಸಂದೇಶ್ ಅವರು ಪತ್ನಿ, ಇಬ್ಬರು ಮಕ್ಕಳನ್ನು ಬಿಟ್ಟು ಅಗಲಿದ್ದಾರೆ.
ಶಿವಮೊಗ್ಗ ಲೈವ್ಗೆ ಸುದ್ದಿ ನೀಡಲು ಕರೆ ಮಾಡಿ 9964634494
ವಾಟ್ಸಪ್ನಲ್ಲಿ ಸುದ್ದಿಗಾಗಿ 7411700200
ಶಿವಮೊಗ್ಗ ಲೈವ್ ಈ ಮೇಲ್ shivamoggalive@gmail.com







