ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 OCTOBER 2023
AYANURU : ಮೂರು ಬೈಕುಗಳ (BIKES) ನಡುವೆ ಡಿಕ್ಕಿಯಾಗಿ ಮಹಿಳೆ ಸೇರಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ವೀರಣ್ಣನ ಬೆನವಳ್ಳಿ ಬಳಿ ಶಿವಮೊಗ್ಗ ಕಡೆಯಿಂದ ಬರುತ್ತಿದ್ದ 2 ಬೈಕ್ ಹಾಗೂ ಆಯನೂರಿನಿಂದ ಶಿವಮೊಗ್ಗದ ಕಡೆ ಹೋಗುತ್ತಿದ್ದ ಬೈಕುಗಳ ನಡುವೆ ಡಿಕ್ಕಿಯಾಗಿದೆ.
ಹಾರನಹಳ್ಳಿ ಗ್ರಾಮದವನೆಂದು ಹೇಳಲಾದ ವ್ಯಕ್ತಿ ಹಾಗೂ ಶಿವಮೊಗ್ಗದಿಂದ ಆಯನೂರು ಕಡೆಗೆ ಹೋಗುತ್ತಿದ್ದ ಬೈಕುಗಳು ಪರಸ್ಪರ ಹೊಡೆದುಕೊಂಡಿದೆ. ಎದುರಗಡೆಯಿಂದ ಬರುತ್ತಿದ್ದ ಬೈಕ್ನವನು ಇದನ್ನು ನೋಡಿ ಬ್ರೇಕ್ ಹಾಕಿದ್ದು ಸ್ಕಿಡ್ ಆಗಿ ಬಿದ್ದಿದ್ದಾನೆ. ಒಂದು ಬೈಕಿನಲ್ಲಿ ದಂಪತಿ ಬರುತ್ತಿದ್ದು ಇನ್ನೊಂದು ಬೈಕ್ನಲ್ಲಿ ಹಾರನಹಳ್ಳಿ ಗ್ರಾಮದ ವ್ಯಕ್ತಿ ಹೋಗುತ್ತಿದ್ದರು.
ಇದನ್ನೂ ಓದಿ – ಶಿವಮೊಗ್ಗದಲ್ಲಿ ವಾಟ್ಸಪ್ನಲ್ಲಿ ವಿಡಿಯೋ ಶೇರ್ ಮಾಡಿದವನ ವಿರುದ್ಧ ಕೇಸ್, ಏನದು ವಿಡಿಯೋ?
ಅಪಘಾತದ ತೀವ್ರತೆಗೆ ಮಹಿಳೆ ಗಂಭೀರ ಗಾಯಗೊಂಡು ಪ್ರಜ್ಞೆಹೀನ ಸ್ಥತಿಯಲ್ಲಿ ಚರಂಡಿಯಲ್ಲಿ ಬಿದ್ದಿದ್ದಾರೆ. ಮತ್ತೊಬ್ಬನಿಗೆ ಕಾಲಿಗೆ ಗಂಭೀರ ಗಾಯವಾಗಿದೆ. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422