ಶಿವಮೊಗ್ಗದ ಬಿದಿರೆಯಲ್ಲಿ ಸೈಟ್ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559ಸೈಟ್ ಮಾರಾಟಕ್ಕಿದೆ
ಶಿವಮೊಗ್ಗ : ಮನೆ ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಎರಡು ಬೈಕುಗಳನ್ನು ರಾತ್ರೋರಾತ್ರಿ ಕಳ್ಳತನ (Theft) ಮಾಡಲಾಗಿದೆ. ಎಲ್.ಬಿ.ಎಸ್ ನಗರದಲ್ಲಿ ಘಟನೆ ಸಂಭವಿಸಿದೆ. ರಾಜ್ಕಮಲ್ ಮತ್ತು ರಾಜೇಶ್ ಎಂಬುವವರ ಬೈಕುಗಳು ಕಳ್ಳತನವಾಗಿವೆ.
ಇದನ್ನೂ ಓದಿ » ಸರ್ಕಾರಿ ಶಾಲೆ ಕಾಂಪೌಂಡ್ ನಿರ್ಮಾಣಕ್ಕೆ ಕೂಲಿ ಕೆಲಸ ಮಾಡಿದ ಶಿಕ್ಷಣ ಸಚಿವ
ರಾಜ್ಕಮಲ್ ಅವರ ಮನೆಯ ಕೆಳಗೆ ರಾಜೇಶ್ ಎಂಬುವವರು ಬಾಡಿಗೆಗೆ ವಾಸವಾಗಿದ್ದಾರೆ. ಇಬ್ಬರ ಬೈಕುಗಳನ್ನು ಮನೆಯ ಕಾಂಪೌಂಡ್ನ ಒಳಗೆ ರಾತ್ರಿ ನಿಲ್ಲಿಸಲಾಗಿತ್ತು. ರಾಜ್ಕಮಲ್ ಬೆಳಗ್ಗೆ ಜಿಮ್ಗೆ ತೆರಳಲು ಹೊರ ಬಂದಾಗ ಎರಡು ಬೈಕುಗಳು ಇರಲ್ಲಿಲ್ಲ ಎಂದು ಆರೋಪಿಸಲಾಗಿದೆ.

ರಾಜ್ಕಮಲ್ಗೆ ಸೇರಿದ ಆರ್.ಎಕ್ಸ್ 100 ಮತ್ತು ರಾಜೇಶ್ಗೆ ಸೇರಿದ ಆರ್.ಎಕ್ಸ್. 135 ಬೈಕುಗಳು ಕಳ್ಳತನವಾಗಿವೆ (Theft). ಘಟನೆ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







