ಪೊಲೀಸ್‌ ಸಿಬ್ಬಂದಿ ಬ್ಯಾಂಕ್‌ ಖಾತೆಯಿಂದಲೆ ₹6.78 ಲಕ್ಷ ದೋಚಿದ ಸೈಬರ್‌ ವಂಚಕರು, ಹೇಗಾಯ್ತು ಘಟನೆ?

ಶಿವಮೊಗ್ಗ: ಸಂಚಾರ ನಿಯಮ ಉಲ್ಲಂಘನೆಯ ದಂಡ ಪಾವತಿಸುವ ಆರ್‌ಟಿಒ ಇ-ಚಲನ್ ಹೆಸರಿನಲ್ಲಿ ಬಂದ ನಕಲಿ ಎಪಿಕೆ ಫೈಲ್ ಲಿಂಕ್ ಕ್ಲಿಕ್ ಮಾಡಿದ ಪೊಲೀಸ್‌ ಸಿಬ್ಬಂದಿಯೇ (ಹೆಸರು, ಊರು ಗೌಪ್ಯ) ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣ ಕಳೆದುಕೊಂಡಿದ್ದಾರೆ. ➤ ಸುದ್ದಿಯ ಮುಂದಿನ 3 ಪ್ಯಾರಾಗಳು ಕೆಳಗಿವೆ.

ವಾಟ್ಸಪ್‌ಗೆ ಆರ್‌ಟಿಒ ಇ-ಚಲನ್

ಪೊಲೀಸ್‌ ಸಿಬ್ಬಂದಿ ವಾಟ್ಸಾಪ್‌ಗೆ ಆರ್‌ಟಿಒ ಇ-ಚಲನ್‌ ಎಪಿಕೆ ಎಂಬ ಫೈಲ್ ಬಂದಿತ್ತು. ಅದನ್ನು ಆರ್‌ಟಿಒ ಇಲಾಖೆಯಿಂದ ಬಂದಿರಬಹುದೆಂದು ನಂಬಿದ ಅವರು, ಫೈಲ್ ಓಪನ್ ಮಾಡಿದ್ದಾರೆ. ಆದರೆ ಅದರಲ್ಲಿ ಯಾವುದೇ ಮಾಹಿತಿ ಕಾಣಿಸದ ಕಾರಣ ಅವರು ಆಪ್‌ನಿಂದ ಹೊರಬಂದಿದ್ದರು. ಮರುದಿನ ತಮ್ಮ ಮೊಬೈಲ್ ಗಮನಿಸಿದಾಗ, ಕೆನರಾ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಒಟ್ಟು ₹6,78,759 ಹಣ ಕಡಿತವಾಗಿರುವ ಮೆಸೇಜ್‌ಗಳು ಬಂದಿದ್ದವು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

Shivamogga-CEN-Police-Station

ವೈಯಕ್ತಿಕ ಮಾಹಿತಿ ಕದ್ದು ಹಣ ವರ್ಗ

ಅಪರಿಚಿತರು ನಕಲಿ ಫೈಲ್ ಕಳುಹಿಸಿ, ಪೊಲೀಸ್‌ ಸಿಬ್ಬಂದಿಯ ವೈಯಕ್ತಿಕ ಮಾಹಿತಿ ಕದ್ದು ಆನ್‌ಲೈನ್ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಶಿವಮೊಗ್ಗ ಸೈಬರ್‌ ಕ್ರೈಮ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಲಿಕ್‌ ಮಾಡುವ ಮುನ್ನ ಎಚ್ಚರ

ಅಪರಿಚಿತ ನಂಬರ್‌ಗಳಿಂದ ಬರುವ ಆರ್‌ಟಿಒ ಚಲನ್‌ ಎಪಿಕೆ ಫೈಲ್‌ಗಳು ಅಥವಾ ಸಂಶಯಾಸ್ಪದ ಲಿಂಕ್‌ಗಳನ್ನು ಯಾವುದೇ ಕಾರಣಕ್ಕೂ ಕ್ಲಿಕ್ ಮಾಡಬೇಡಿ. ಇವುಗಳ ಮೂಲಕ ಸೈಬರ್ ಕಳ್ಳರು ನಿಮ್ಮ ಮೊಬೈಲ್ ಮೇಲೆ ನಿಯಂತ್ರಣ ಸಾಧಿಸಿ ಬ್ಯಾಂಕ್ ಖಾತೆಗಳನ್ನು ಖಾಲಿ ಮಾಡುವ ಸಾಧ್ಯತೆ ಇರುತ್ತದೆ. ಅಧಿಕೃತ ಕೆಲಸಗಳಿಗಾಗಿ ಯಾವಾಗಲೂ ಸರ್ಕಾರಿ ವೆಬ್‌ಸೈಟ್‌ಗಳನ್ನೇ ಬಳಸಿ. ಸೈಬರ್ ವಂಚನೆಗೊಳಗಾದಲ್ಲಿ ತಕ್ಷಣ 1930 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ತಿಳಿಸಿಬೇಕು ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
ಮುಂದಿನ ಸುದ್ದಿ ಓದಿ TRENDING

ಕೊಡಚಾದ್ರಿ ಟ್ರೆಕ್ಕಿಂಗ್‌: ಹೃದಯಾಘಾತದಿಂದ ಸಿನಿಮಾ ನಿರ್ಮಾಪಕನ ಪುತ್ರ ಸಾವು