ಶಿವಮೊಗ್ಗ ಲೈವ್.ಕಾಂ | 04 AUGUST 2021
ಚಾಲಕನ ನಿಯಂತ್ರಣ ತಪ್ಪಿದ ಹೊಸ ಕ್ಯಾಂಟರ್ ಲಾರಿಯೊಂದು ಡಿವೈಡರ್ ಮೇಲೆ ಹಾರಿ ನಿಂತಿದೆ. ಅದೃಷ್ಟವಶಾತ್ ಯಾವುದೆ ಹಾನಿ ಸಂಭವಿಸಿಲ್ಲ.
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422
ಶಿವಮೊಗ್ಗ ರೈಲ್ವೆ ನಿಲ್ದಾಣ ಸಮೀಪ, ಅಮೀರ್ ಅಹಮದ್ ಕಾಲೋನಿ ಮುಂಭಾಗ ಘಟನೆ ಸಂಭವಿಸಿದೆ. ಚಾಲಕ ಗಾಯಗೊಂಡಿದ್ದು, ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಉಷಾ ನರ್ಸಿಂಗ್ ಹೋಂ ಕಡೆಯಿಂದ ಬಂದ ಕ್ಯಾಂಟರ್ ಲಾರಿ, ಅಪಘಾತಕ್ಕೀಡಾಗಿದೆ. ಅತಿ ವೇಗವಾಗಿದ್ದಿದ್ದರಿಂದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿದೆ. ಡಿವೈಡರ್‌ನ ಮಧ್ಯದಲ್ಲಿ ಲಾರಿ ಸಿಕ್ಕಿಬಿದ್ದಿದೆ. ಹೊಸ ಲಾರಿಗೆ ಇನ್ನೂ ನೋಂದಣಿ ಅಗಿಲ್ಲ.
ಹೊಸ ರಸ್ತೆ, ಲೈಟ್ ಇಲ್ಲ
ರೈಲ್ವೆ ನಿಲ್ದಾಣ ಮುಂಭಾಗ ರಿಂಗ್ ರಸ್ತೆ ನಿರ್ಮಾಣವಾಗುತ್ತಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ರಸ್ತೆ ನಡುವೆ ದೀಪ ಅಳವಡಿಸುವ ಕಾರ್ಯ ಬಾಕಿ ಇದೆ.