ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
ಶಿವಮೊಗ್ಗ ಲೈವ್.ಕಾಂ | SHIMOGA | 9 ಏಪ್ರಿಲ್ 2020
ಸಂಚರಿಸುತ್ತಿದ್ದ ಲಾರಿಯೊಂದರ ಮುಂದಿನ ಚಕ್ರದ ರಿಮ್ ಕಳಚಿಕೊಂಡು ಟ್ರಾವಲ್ಸ್ ಏಜೆನ್ಸಿಯೊಂದರ ರೋಲಿಂಗ್ ಶಟರ್’ಗೆ ಅಪ್ಪಳಿಸಿದೆ. ಅಂಗಡಿಯ ಬಾಗಲಿ ಬೆಂಡ್ ಆಗಿದ್ದು, ಅದೃಷ್ಟವಶಾತ್ ಭಾರಿ ಅನಾಹುತ ತಪ್ಪಿದೆ.
ಶಿವಮೊಗ್ಗ ಕೆಎಸ್ಆರ್’ಟಿಸಿ ಬಸ್ ನಿಲ್ದಾಣದ ಸಮೀಪ ಇವತ್ತು ಬೆಳಗ್ಗೆ ಘಟನೆ ಸಂಭವಿಸಿದೆ. ಭದ್ರಾವತಿಯಿಂದ ಗೊಬ್ಬರ ತುಂಬಿಕೊಂಡು ಬರುತ್ತಿದ್ದ ಲಾರಿಯ ಮುಂದಿನ ಚಕ್ರದ ರಿಮ್ ಕಳಚಿಕೊಂಡಿದೆ. ರಸ್ತೆ ಪಕ್ಕದ ಟ್ರಾವಲ್ ಏಜೆನ್ಸಿಯೊಂದರ ರೋಲಿಂಗ್ ಶೆಟರ್’ಗೆ ಅಪ್ಪಳಿಸಿದೆ. ರಿಮ್ ಗುದ್ದಿದ ರಭಸಕ್ಕೆ ರೋಲಿಂಗ್ ಶೆಟರ್ ಬೆಂಡ್ ಆಗಿದೆ.
ಸಾಮಾನ್ಯ ದಿನವಾಗಿದ್ದರೆ ಈ ರಸ್ತೆ ಮತ್ತು ಅಂಗಡಿಗಳಲ್ಲಿ ಜನ ಇರುತ್ತಿದ್ದರು. ಲಾಕ್’ಡೌನ್ ಇದ್ದಿದ್ದರಿಂದ ರಸ್ತೆಯಲ್ಲಿ ವಾಹನ ಸಂಚಾರ ಕಡಿಮೆ ಇತ್ತು. ಟ್ರಾವಲ್ಸ್ ಸಂಸ್ಥೆಯು ಬಂದ್ ಆಗಿತ್ತು. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು.
ಶಿವಮೊಗ್ಗ ಲೈವ್.ಕಾಂನಲ್ಲಿ ಸುದ್ದಿಗಾಗಿ ಕರೆ ಮಾಡಿ 9964634494
ವಾಟ್ಸಪ್ ನಂಬರ್ | 7411700200
ಈ ಮೇಲ್ ಐಡಿ | [email protected]
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422