ಶಿವಮೊಗ್ಗ: ನಗರದ ರೈಲ್ವೆ ಗೂಡ್ಸ್ ಶೆಡ್ ಫ್ಲೈ ಓವರ್ ಕೆಳಗಿನ ಚೌಡೇಶ್ವರಿ ಕಾಲೋನಿ ಬಳಿ ಬಾಡಿಗೆಗಾಗಿ ಸರತಿ ಸಾಲಿನಲ್ಲಿ ನಿಲ್ಲಿಸಿದ್ದ ಲಾರಿಯೊಂದು ಕಳ್ಳತನವಾಗಿದೆ.
ಆದಿಶಂಕರಾಚಾರ್ಯ ಬಡಾವಣೆಯ ನಿವಾಸಿ, ಲಾರಿ ಚಾಲಕ ಸುಧೀಂದ್ರ (43) ಎಂಬುವವರಿಗೆ ಸೇರಿದ ₹4.50 ಲಕ್ಷ ಮೌಲ್ಯದ ಕಳ್ಳತನವಾಗಿದೆ. ಜುಲೈ 8ರಂದು ಸಂಜೆ 5 ಗಂಟೆಗೆ ಬಾಡಿಗೆ ಮುಗಿಸಿಕೊಂಡು ಬಂದಿದ್ದ ಸುಧೀಂದ್ರ ಅವರು, ಮುಂದಿನ ಬಾಡಿಗೆಯ ಸರದಿಗಾಗಿ ಎಂದಿನಂತೆ ಚೌಡೇಶ್ವರಿ ಕಾಲೋನಿ ಫ್ಲೈ ಓವರ್ ಕೆಳಗಡೆ ಲಾರಿ ನಿಲ್ಲಿಸಿ ಮನೆಗೆ ತೆರಳಿದ್ದರು. ಸುದ್ದಿಯ ಮುಂದಿನ 1 ಪ್ಯಾರಾಗಳು ಕೆಳಗಿವೆ.
ಮರುದಿನ ಬೆಳಿಗ್ಗೆ ಬಂದು ನೋಡಿದಾಗ ಲಾರಿ ನಾಪತ್ತೆಯಾಗಿತ್ತು ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಲಾರಿ ಕಳ್ಳತನ ಆಗಿರುವ ಕುರಿತು ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:➤ ಮಾಚೇನಹಳ್ಳಿ ಫ್ಲೈ ಓವರ್ ಮೇಲೆ ಬೈಕುಗಳು ಡಿಕ್ಕಿ, KSRP ಸಿಬ್ಬಂದಿ ಸೇರಿ ಇಬ್ಬರಿಗೆ ಗಾಯ, ಹೇಗಾಯ್ತು ಘಟನೆ?