ಭದ್ರಾವತಿ, ತೀರ್ಥಹಳ್ಳಿಯಲ್ಲಿ ಪೊಲೀಸರಿಂದ ಪ್ರತ್ಯೇಕ ದಾಳಿ, ನಾಲ್ವರು ಅರೆಸ್ಟ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 19 AUGUST 2023

BHADRAVATHI / THIRTHAHALLI : ಪ್ರತ್ಯೇಕ ಪ್ರಕರಣಗಳಲ್ಲಿ ಭದ್ರಾವತಿ (Bhadravathi) ಮತ್ತು ತೀರ್ಥಹಳ್ಳಿಯಲ್ಲಿ (Thirthahalli) ಪೊಲೀಸರು ದಾಳಿ ನಡೆಸಿ ಗಾಂಜಾ ಸಹಿತ ಆರೋಪಿಗಳನ್ನು ಬಂಧಿಸಲಾಗಿದೆ.

ಹಳೆ ಬಾರಂದೂರಿನಿಂದ ಭದ್ರಾವತಿಗೆ ಗಾಂಜಾ

ಹಳೆ ಬಾರಂದೂರು ಕಡೆಯಿಂದ ಭದ್ರಾವತಿಗೆ ಗಾಂಜಾ ಸಾಗಣೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ವೀರಾಪುರದ ಇಬ್ರಾಹಿಂ ಅಲಿಯಾಸ್‌ ಇಬ್ಬು ಮೀರಾ ಅಲಿಯಾಸ್‌ ಟಕ್ಕರ್‌ (21), ಕಡದಕಟ್ಟೆಯ ಸಂತೋಷ್‌ ಕುಮಾರ್‌ (30) ಬಂಧಿತರು. ಇವರಿಂದ 10 ಸಾವಿರ ರೂ. ಮೌಲ್ಯದ 161 ಗ್ರಾಂ ತೂಕದ ಒಣ ಗಾಂಜಾ ವಶಕ್ಕೆ ಪಡೆಯಲಾಗಿದೆ. ಪೇಪರ್‌ ಟೌನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭದ್ರಾವತಿ ಡಿವೈಎಸ್‌ಪಿ ನಾಗರಾಜ್‌ ಮಾರ್ಗದರ್ಶನದಲ್ಲಿ ಪಿಎಸ್‌ಐ ಕವಿತಾ, ಪೇಪರ್‌ ಟೌನ್‌ ಠಾಣೆ ಪೊಲೀಸರು ದಾಳಿಯಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ- ಶಿವಮೊಗ್ಗದಲ್ಲಿ ಸಂಚಾರ ಪೊಲೀಸರಿಂದ ಮತ್ತೆ ದಿಢೀರ್‌ ಕಾರ್ಯಾಚರಣೆ, ಖುದ್ದು ಫೀಲ್ಡಿಗಿಳಿದ ರಕ್ಷಣಾಧಿಕಾರಿ

bhadravati%20two%20arrest

ತೀರ್ಥಹಳ್ಳಿಯಲ್ಲಿ ಗಾಂಜಾ ಮಾರುತ್ತಿದ್ದಾಗ ದಾಳಿ

ಎಡೆಹಳ್ಳಿ ಕೆರೆ ಬಳಿ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ತೀರ್ಥಹಳ್ಳಿ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ. ಡಿವೈಎಸ್‌ಪಿ ಗಜಾನನ ವಾಮನ ಸುತಾರ ಮಾರ್ಗದರ್ಶನದಲ್ಲಿ  ಪಿಎಸ್‌ಐ ಗಾದಲಿಂಗಪ್ಪ ಮತ್ತು ಸಿಬ್ಬಂದಿ ದಾಳಿ ನಡೆಸಿದರು. ತೀರ್ಥಹಳ್ಳಿಯ ಶಿವರಾಜಪುರದ ಸಂಜಯ್‌ ಅಲಿಯಾಸ್‌ ಪೋತ (25), ಕುರುವಳ್ಳಿಯ ಸುದೀಪ್‌ (21) ಬಂಧಿತರು. ಇವರಿಂದ 9 ಸಾವಿರ ರೂ. ಮೌಲ್ಯದ 190 ಗ್ರಾಂ ಗಾಂಜಾ (ganja drugs) ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ- ಶಿವಮೊಗ್ಗದಲ್ಲಿ ಮಳೆ ಮಾಯ, ಭತ್ತ ನಾಟಿಗೆ ನೀರಿಲ್ಲ, ಹೊಲದಲ್ಲೆ ಒಣಗಿದ ಮೆಕ್ಕೆಜೋಳ, ಈ ಮಧ್ಯೆ ರೈತರಿಗೀಗ ಹೊಸ ಸಂಕಷ್ಟ

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment