ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 18 MAY 2023
SORABA : ವಾಹನ ತಪಾಸಣೆ ವೇಳೆ ದಾಖಲೆ ಸರಿ ಇಲ್ಲದ ಎರಡು ಬೈಕುಗಳ ಸವಾರರನ್ನು ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆ ನಡೆಸಿದಾಗ ವಿವಿಧೆಡೆ ದ್ವಿಚಕ್ರ ವಾಹನ ಕಳ್ಳತನ ಪ್ರಕರಣ ಬಯಲಿಗೆ ಬಂದಿದೆ. ಇಬ್ಬರನ್ನು ಬಂಧಿಸಿದ್ದು (Arrest), ನಾಲ್ಕು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಹಾವೇರಿ ಜಿಲ್ಲೆ ಸವಣೂರು ಗ್ರಾಮದ ಜುಂಜಪ್ಪ ಮತ್ತು ಹಲಗೂರು ಗ್ರಾಮದ ಗದಿಗೆಪ್ಪ ಬಂಧಿತರು. ಮೇ.15ರಂದು ಸೊರಬ ಠಾಣೆ ಪೊಲೀಸರು ಪಟ್ಟಣದ ಹೊಸಪೇಟೆ ಬಡಾವಣೆಯ ಸರ್ಕಲ್ನಲ್ಲಿ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಆನವಟ್ಟಿ ಕಡೆಯಿಂದ ಬಂದ ಎರಡು ಬೈಕ್ ತಡೆದು ದಾಖಲೆ ಪರಿಶೀಲನೆ ವೇಳೆ ಅನುಮಾನ ಬಂದಿದೆ.
ಆರೋಪಿಗಳು ವಿವಿಧ ತಾಲೂಕುಗಳಲ್ಲಿ ಬೈಕ್ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದರು ಎನ್ನಲಾಗಿದೆ. ಇಬ್ಬರನ್ನು ಬಂಧಿಸಿ (Arrest) ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ – ರಾತ್ರಿ ಹೊತ್ತು ಮನೆಗಳ ಮೇಲೆ ಬೀಳುತ್ತಿವೆ ಕಲ್ಲು, ಕೋರ್ಟ್ ಮೊರೆ ಹೋದ ಮಹಿಳೆ
ಸಿಪಿಐ ಭಾಗ್ಯವತಿ ಭಂತಿ, ಪಿಎಸ್ಐ ನಾಗರಾಜ್, ಸಿಬ್ಬಂದಿ ಸಂದೀಪ್, ರಾಘವೇಂದ್ರ, ಉಮೇಶ್, ಪರಮಪ್ಪ ಲಮಾಣಿ, ಕುಮಾರ ಅರಳಿಕಟ್ಟೆ, ಮಹಮ್ಮದ್ ತಾಹೀರ್, ಪ್ರಭುಗೌಡ, ಜಗದೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ – ಹೊಸಮನೆಯಲ್ಲಿರುವ ಮಗನ ಮನೆಯಲ್ಲಿ ರಾತ್ರಿ ಉಳಿದಿದ್ದ ತಂದೆ, ಬೆಳಗೆದ್ದು ಬಾಗಿಲು ತೆಗೆದಾಗ ಕಾದಿತ್ತು ಶಾಕ್
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422