ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 6 SEPTEMBER 2023
BHADRAVATHI : ಡ್ರಾಪ್ ಕೊಡುವ ನೆಪದಲ್ಲಿ ವ್ಯಕ್ತಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಗದು, ಎಟಿಎಂ ಕಾರ್ಡ್, ಮೊಬೈಲ್ ಕಸಿದು ಪರಾರಿಯಾಗಿದ್ದ ಇಬ್ಬರನ್ನು ಪೊಲೀಸರು (Police) ಬಂಧಿಸಿದ್ದಾರೆ.
ಭದ್ರಾವತಿ ಸುಲ್ತಾನ್ ಮಟ್ಟಿಯ ಎಸ್.ಚೇತನ್ (21) ಮತ್ತು ಕೆ.ಕೀರ್ತನ್ (21) ಬಂಧಿತರು. ಆರೋಪಿಗಳಿಂದ 11,300 ರೂ. ನಗದು, 50 ಸಾವಿರ ರೂ. ಮೌಲ್ಯದ ಎರಡು ಮೊಬೈಲ್ ಫೋನ್, ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ – ಕುಂಸಿ ಬಳಿಯಿಂದ ಕುಮಟಾಗೆ ತೆರಳಿ ಬಾಕ್ಸ್ ತೆಗೆದ ಶಿಕ್ಷಕಿ, ನರ್ಸ್‌ಗೆ ಕಾದಿತ್ತು ಬಿಗ್ ಶಾಕ್, ಮಹಾ ವಂಚನೆ ವಿರುದ್ಧ ಕೇಸ್
ಏನಿದು ಪ್ರಕರಣ?
ಸೆ.1ರಂದು ಸಂಜೆ ಮಾಚೇನಹಳ್ಳಿಗೆ ತೆರಳಲು ಭದ್ರಾವತಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದ ಉತ್ತರ ಪ್ರದೇಶದ ರವೀಂದ್ರ ಯಾದವ್‌ನನ್ನು ಆರೋಪಿಗಳು ಡ್ರಾಪ್ ಕೊಡುವುದಾಗಿ ಬೈಕಿನಲ್ಲಿ ಕರೆತಂದಿದ್ದರು. ಜೇಡಿಕಟ್ಟೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ದರೋಡೆ ಮಾಡಿದ್ದರು. ಘಟನೆ ಸಂಬಂಧ ಭದ್ರಾವತಿ ನ್ಯೂ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಡಿವೈಎಸ್‌ಪಿ ಕೆ.ಆರ್.ನಾಗರಾಜ್, ಸಿಪಿಐ ಜೆ.ಶ್ರೀಶೈಲಕುಮಾರ್ ಮೇಲ್ವಿಚಾರಣೆಯಲ್ಲಿ ನ್ಯೂ ಟೌನ್ ಠಾಣೆಯ ಪಿಎಸ್‌ಐಗಳಾದ ಟಿ.ರಮೇಶ್ ಮತ್ತು ಭಾರತಿ, ಸಿಬ್ಬಂದಿ ಟಿ.ನವೀನ್ ಮತ್ತು ಪ್ರವೀಣ್ ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
LATEST NEWS
- ಆಲ್ಕೊಳ ಬಳಿ ಪೊಲೀಸರ ಕಾರ್ಯಾಚರಣೆ, ಬೈಕ್ ಸಹಿತ ಇಬ್ಬರು ಅರೆಸ್ಟ್, ಕಾರಣವೇನು?

- ಶರಾವತಿ ನಗರದಲ್ಲಿ ಕಾರು ಗಾಜು ಪೀಸ್ ಪೀಸ್ ಕೇಸ್, ಮೂವರು ಅರೆಸ್ಟ್, ಘಟನೆಗೆ ಕಾರಣ ಮನೆ

- ಶಿವಮೊಗ್ಗದಲ್ಲಿ ಏರ್ಟೆಲ್ ಮೊಬೈಲ್ ಟವರ್ನ ಉಪಕರಣ ಕಳವು, ಆಗಿದ್ದೇನು?

- ಶಿವಮೊಗ್ಗ ಕಾಂಗ್ರೆಸ್ ಕಾರ್ಯದರ್ಶಿ ಸೇರಿ ಇಬ್ಬರು 6 ವರ್ಷ ಪಕ್ಷದಿಂದ ಉಚ್ಛಾಟನೆ, ಕಾರಣವೇನು?

- ಬೇಡರ ಹೊಸಹಳ್ಳಿ ಬಳಿ ಚಲಿಸುತ್ತಿದ್ದ ಬಸ್ಸಿನ ಸೀಟಿನಿಂದಲೇ ಹೊರಗೆ ಬಿದ್ದ ಪ್ರಯಾಣಿಕ

About The Editor
ನಿತಿನ್ ಆರ್.ಕೈದೊಟ್ಲು






