ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
SHIVAMOGGA LIVE NEWS | 24 MAY 2024
AYANURU : ಕೃಷಿ ಹೊಂಡದಲ್ಲಿ (Farm Pond) ಮುಳುಗಿ ಇಬ್ಬರು ಸಾವಿಗೀಡಾಗಿದ್ದಾರೆ. ಆಯನೂರು ಸಮೀಪದ ಚೆನ್ನಳ್ಳಿ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಗ್ರಾಮದ ಮಹೇಶ್ ಅವರ ಪುತ್ರ ಅಭಯ್ (16), ಮಾಲತೇಶ್ (28) ಮೃತ ದುರ್ದೈವಿಗಳು.

ಗ್ರಾಮದಲ್ಲಿ ಜಮೀನಿನಲ್ಲಿ ಟ್ರ್ಯಾಕ್ಟರ್ನಲ್ಲಿ ಮಾಲತೇಶ್ ಉಳುಮೆ ಮಾಡುತ್ತಿದ್ದ. ಜತೆಗೆ ಮಹೇಶ್ ಅವರ ಮಗ ಅಭಯ್ ಕೂಡ ಅಲ್ಲಿಗೆ ಹೋಗಿದ್ದ. ಕೃಷಿ ಹೊಂಡದ ಪಕ್ಕ ನಿಂತಿದ್ದ ಅಭಯ್ ಆಯತಪ್ಪಿ ಹೊಂಡಕ್ಕೆ ಬಿದ್ದು ಮೇಲೆ ಬರಲಾಗದೆ ಒದ್ದಾಡುತ್ತಿದ್ದರು. ಕೂಡಲೆ ಮಾಲತೇಶ್ ರಕ್ಷಣೆಗೆ ಧಾವಿಸಿದ್ದರು. ಸುಮಾರು 10 ಅಡಿಯ ಕೃಷಿ ಹೊಂಡದಿಂದ ಮೇಲೆ ಬರಲಾಗದೆ ಇಬ್ಬರು ಮುಳುಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ – ಆಯನೂರು ಬಳಿ ಮುಖಾಮುಖಿ ಡಿಕ್ಕಿ, ಒಬ್ಬನ ಕಾಲು ಕಟ್, ಹೇಗಾಯ್ತು ಘಟನೆ?
ವಿಷಯ ತಿಳಿದು ಗ್ರಾಮಸ್ಥರು ಇಬ್ಬರ ಮೃತದೇಹಗಳನ್ನು ಮೇಲೆತ್ತಿದ್ದಾರೆ. ಗಿರಿದೀಪಂ ಶಾಲೆಯ ವಿದ್ಯಾರ್ಥಿ ಅಭಯ್ ಈ ಬಾರಿ 9ನೇ ತರಗತಿಗೆ ಹೋಗಬೇಕಿತ್ತು. ಮಾಲತೇಶ್ಗೆ ಎಂಟು ತಿಂಗಳ ಹಿಂದೆ ಮದುವೆಯಾಗಿತ್ತು. ಘಟನೆ ಸಂಬಂಧ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
LATEST NEWS
- ಶಿವಮೊಗ್ಗ ವಿಮಾನ ನಿಲ್ದಾಣ, ಮಹತ್ವದ ಟೆಸ್ಟ್ನಲ್ಲಿ ಪಾಸ್, DoVR ಕೆಲಸ ಶುರು, ಏನಿದು? ಪ್ರಯೋಜನ ಏನು?

- ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯು ಹೆಚ್ಚಿದ ತಾಪಮಾನ? ಇವತ್ತು ಎಷ್ಟಿರುತ್ತೆ?

- ಭಟ್ಕಳದ ಮಹಿಳೆ ಸೇರಿ ನಾಲ್ವರು ನಗರ ಠಾಣೆ ಪೊಲೀಸರ ಬಲೆಗೆ, ಕಾರಣವೇನು? ಏನೇನೆಲ್ಲ ಸಿಕ್ತು?

- ಇಂದಿನ ಪಂಚಾಂಗ – ಯಾವ್ಯಾವ ಸಮಯ ಯಾವಾಗಿದೆ?

- ಶಿವಮೊಗ್ಗದ ದೇಗುಲಗಳಿಗೆ ಸಂಜೆ ಬಳಿಕ ಹೆಚ್ಚಿದ ಭಕ್ತರು, ವಿಶೇಷ ಪೂಜೆ

About The Editor
ನಿತಿನ್ ಆರ್.ಕೈದೊಟ್ಲು






