SHIMOGA, 21 AUGUST 2024 : ಖಾಸಗಿ ಶಾಲೆಯ ಆವರಣದಲ್ಲಿ ನಿಲ್ಲಿಸಿದ್ದ ಶಾಲಾ ಬಸ್ಸುಗಳಲ್ಲಿ (School Bus) ಟೈರ್ ಸೇರಿದಂತೆ ವಿವಿಧ ಉಪಕರಣ ಕಳ್ಳತನ ಮಾಡಲಾಗಿದೆ. ಕೃತ್ಯದ ಹಿಂದೆ ಶಾಲೆಯ ಮಾಜಿ ಉದ್ಯೋಗಿಗಳ ಕೈವಾಡದ ಶಂಕೆ ಇದೆ.
ಶಿವಮೊಗ್ಗದ ಗುರುಪುರದಲ್ಲಿರುವ ಡೆಲ್ಲಿ ಇಂಟರ್ನ್ಯಾಷನಲ್ ಸ್ಕೂಲ್ನಲ್ಲಿ ಘಟನೆ ಸಂಭವಿಸಿದೆ. ಆ.13ರ ರಾತ್ರಿ ಶಾಲೆ ಆವರಣದಲ್ಲಿ 11 ಬಸ್ಸುಗಳನ್ನು ನಿಲ್ಲಿಸಲಾಗಿತ್ತು. ಈ ಪೈಕಿ ಏಳೆಂಟು ಬಸ್ಸುಗಳಿಂದ ಟೈರ್, ಸ್ಟೆಪ್ನಿ, ಜಾಕ್, ಲಿವರ್, ಬೆಂಕಿ ಆರಿಸುವ ಟ್ಯಾಂಕ್, ಕಳೆ ಕಟ್ ಮಾಡುವ ಯಂತ್ರ ಸೇರಿ ಒಟ್ಟು 56 ಸಾವಿರ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸುದ್ದಿಯ ಮುಂದಿನ 2 ಪ್ಯಾರಾಗಳು ಕೆಳಗಿವೆ.
ಶಾಲೆಯಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದವರೆ ಕೃತ್ಯ ಎಸಗಿರುವ ಶಂಕೆ ವ್ಯಕ್ತಪಡಿಸಲಾಗಿದೆ. ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ ⇒ ನಮ್ಮೂರಲ್ಲೇ ರೆಡಿಯಾಗುತ್ತವೆ ಈ ಬಟ್ಟೆ, ಇದನ್ನು ಧರಿಸಿದರೆ ಆರೋಗ್ಯವು ಉತ್ತಮವಾಗಿರುತ್ತೆ, ಎಲ್ಲಿದೆ ಅಂಗಡಿ?