ಕಿಟಕಿ ಪಕ್ಕ ಮಲಗುವವರೆ ಹುಷಾರ್‌, ಶಿವಮೊಗ್ಗದಲ್ಲಿ ದಾಖಲಾಯ್ತು ಕೇಸ್‌, ಏನಿದು?

ಶಿವಮೊಗ್ಗ: ಮನೆ ಬೆಡ್‌ರೂಂನ ಕಿಟಕಿಯಿಂದ ಕೈಹಾಕಿ ಮಹಿಳೆಯ ಕೊರಳಿನಲ್ಲಿದ್ದ ₹4.95 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಸರವನ್ನು ಕಳ್ಳತನ ಮಾಡಲಾಗಿದೆ. ನಗರದ ಜೆ.ಹೆಚ್. ಪಟೇಲ್ ಬಡಾವಣೆಯ ಬಡಾವಣೆಯ ಸಿ ಬ್ಲಾಕ್ ನಿವಾಸಿ ಲತಾ ಎಂಬುವರ ಸರ ಕಳ್ಳತನವಾಗಿದೆ. (ಈ ಸುದ್ದಿಯನ್ನು ಇನ್ನು 35 ಸೆಕೆಂಡ್‌ಗಳಲ್ಲಿ ಓದಿ ಮುಗಿಸಬಹುದು)

ಲತಾ ಅವರ ಮನೆಯ ಬೆಡ್‌ರೂಂನ ಕಿಟಕಿಗೆ ಲಾಕ್ ಇರಲಿಲ್ಲ. ರಾತ್ರಿ ಕಿಟಕಿಯ ಪಕ್ಕದಲ್ಲೇ ಲತಾ ಹಾಗೂ ಅವರ ಪತಿ ಮಲಗಿದ್ದರು. ಮರುದಿನ ಬೆಳಿಗ್ಗೆ ಲತಾ ಅವರು ಎಚ್ಚರವಾದಾಗ ಕೊರಳಿನಲ್ಲಿದ್ದ 40 ಗ್ರಾಂ ತೂಕದ ಎರಡು ಎಳೆಯ ಬಂಗಾರದ ಮಾಂಗಲ್ಯ ಸರ ನಾಪತ್ತೆ ಆಗಿರುವುದು ಗೊತ್ತಾಗಿದೆ.

Vinobanagara-Police-Station-Shimoga

ಕಿಟಕಿ ಲಾಕ್ ಇರದಿದ್ದನ್ನು ಗಮನಿಸಿದ ಕಳ್ಳರು, ಹೊರಗಿನಿಂದ ಕೈಹಾಕಿ ಕೊರಳಿನಲ್ಲಿದ್ದ ಸರವನ್ನು ಕದ್ದಿದ್ದಾರೆ. ಅಕ್ಕಪಕ್ಕದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಲತಾ ಅವರು ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.

ಗೂಗಲ್‌ನಲ್ಲಿ ಶಿವಮೊಗ್ಗ ಲೈವ್ ಸುದ್ದಿಗಳು ನಿಮಗೆ ಮೊದಲು ಸಿಗಬೇಕೆ? ಕೆಳಗಿನ ಬಟನ್ ಒತ್ತಿ: