ಶಿವಮೊಗ್ಗದ ಸೆಂಟ್ರಲ್‌ ಜೈಲಿಗೆ ಚೌ ಚೌ ತಂದವನೆ ಜೈಲುಪಾಲು

ನಿಮ್ಮ ಊರಿನ ಸುದ್ದಿಗಳನ್ನು ನಮಗೆ ವಾಟ್ಸಪ್ ಮಾಡಿ 7411700200

ಶಿವಮೊಗ್ಗ: ಸೋಗಾನೆಯಲ್ಲಿರುವ ಶಿವಮೊಗ್ಗ ಕೇಂದ್ರ ಕಾರಾಗೃಹದ ಬಂದಿಯೊಬ್ಬನಿಗೆ ನೀಡಲು ತಂದಿದ್ದ ಬೇಕರಿ ಪದಾರ್ಥದಲ್ಲಿ (bakery snacks) ಮಾದಕ ವಸ್ತು ಪತ್ತೆಯಾಗಿದೆ. ಈ ಸಂಬಂಧ ಓರ್ವ ಸಂದರ್ಶಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಭದ್ರಾವತಿಯ ವೀರಾಪುರದ ಮೊಹಮ್ಮದ್ ಇಬ್ರಾಹಿಂ ಮೀರಾ ಬಂಧಿತ ಆರೋಪಿ. ಈತ ಜೈಲಿನಲ್ಲಿರುವ ಸೈಯದ್ ಸಮೀರ್ ಎಂಬುವವರನ್ನು ಭೇಟಿ ಮಾಡಲು ಬಂದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

Shimoga-Central-Jail-Prison

ಇದನ್ನೂ ಓದಿ : ಶಿವಮೊಗ್ಗದ ಸೆಂಟ್ರಲ್‌ ಜೈಲ್‌ ಒಳಗೆ ರಾತ್ರಿ ತೂರಿ ಬಂತು ಪೊಟ್ಟಣ, ತೆಗೆದು ನೋಡಿದ ಸಿಬ್ಬಂದಿಗೆ ಶಾಕ್

ಸೋಮವಾರ ಬೆಳಗ್ಗೆ ಆರೋಪಿಯು ಸೈಯದ್‌ ಸಮೀರ್‌ನ ಭೇಟಿಗೆ ಬಂದಾಗ ಕಾರಾಗೃಹದ ತಪಾಸಣಾ ಕೇಂದ್ರದಲ್ಲಿ ಸಿಬ್ಬಂದಿ ಆತನನ್ನು ಪರೀಕ್ಷಿಸಿದ್ದಾರೆ. ಆತ ಸೈಯದ್‌ ಸಮೀರ್‌ಗೆ ನೀಡಲು ತಂದಿದ್ದ ಚೌಚೌ ಪೊಟ್ಟಣವನ್ನು ಪರಿಶೀಲಿಸಿದಾಗ, ಅದರಲ್ಲಿ ಬಿಳಿ ಬಣ್ಣದ ಹರಳು ರೂಪದ ಅನುಮಾನಾಸ್ಪದ ಮಾದಕ ವಸ್ತು ಇರುವುದು ಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.

Shimoga-Central-Jail-Building

ತಕ್ಷಣ ಎಚ್ಚೆತ್ತ ಜೈಲು ಸಿಬ್ಬಂದಿ ಮೊಹಮ್ಮದ್ ಇಬ್ರಾಹಿಂನನ್ನು ಮಾದಕ ವಸ್ತು ಸಮೇತ ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಅವರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹೆಚ್ಚಿನ Shimoga News, Shivamogga News ಮತ್ತು CRIME DIARY ಸುದ್ದಿಗಳಿಗಾಗಿ ಶಿವಮೊಗ್ಗ ಲೈವ್ ನೋಡಿ.

© ಶಿವಮೊಗ್ಗ ಲೈವ್‌ : ಏಪ್ರಿಲ್ 15, 2026

Leave a Comment