ಗೋಪಿ ಸರ್ಕಲ್‌ ಬಳಿ ಬಸ್‌ ಅಡ್ಡಗಟ್ಟಿ ಡ್ರೈವರ್‌ನನ್ನು ಕೆಳಗೆಳೆದು ಹಲ್ಲೆ, ಪೆಟ್ರೋಲ್‌ ಹಾಕಿ ಸುಡುವ ಬೆದರಿಕೆ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಗೋಪಿ ಸರ್ಕಲ್ ಬಳಿ ಖಾಸಗಿ ಬಸ್ ಚಾಲಕ (bus driver) ಹಾಗೂ ನಿರ್ವಾಹಕರ ನಡುವೆ ನಡೆದ ಗಲಾಟೆ ನಡೆದು ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿ ಜೀವಬೆದರಿಕೆ ಹಾಕಲಾಗಿದೆ. ಈ ಸಂಬಂಧ ಬಸ್ಸಿನ ಚಾಲಕ ಸೇರಿದಂತೆ ನಾಲ್ವರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?

ಮಂಜುನಾಥ್ ಎಂಬುವರು ತಮ್ಮ ಬಸ್ಸನ್ನು ಕಂಡಕ್ಟರ್ ವಿಜಯಕುಮಾರ್ ಜೊತೆ ಚಾಲನೆ ಮಾಡಿಕೊಂಡು ಗೋಪಿ ಸರ್ಕಲ್ ಬಳಿ ಬರುತ್ತಿದ್ದರು. ಈ ವೇಳೆ ಮತ್ತೊಂದು ಸಿಟಿ ಬಸ್ ಚಾಲಕ ಮಂಜುನಾಥ್ ಅವರ ಬಸ್ಸನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ನಂತರ ಮಂಜುನಾಥ್ ಅವರ ಕೊರಳಪಟ್ಟಿ ಹಿಡಿದು ಬಸ್ಸಿನಿಂದ ಕೆಳಕ್ಕೆ ಎಳೆದು ಮುಖಕ್ಕೆ ಬಲವಾಗಿ ಗುದ್ದಿದ್ದಾನೆ ಎಂದು ಆರೋಪಿಸಲಾಗಿದೆ.

Crime-News-General-Image

ಸಿಟಿ ಬಸ್‌ ಚಾಲಕನ ಜೊತೆಗೆ ಇತರೆ ಮೂವರು ಸೇರಿಕೊಂಡು ಚಾಲಕ ಮಂಜುನಾಥ್‌ ಮೇಲೆ ಹಲ್ಲೆ ನಡೆಸಿದ್ದಾರೆ. ಪೆಟ್ರೋಲ್‌ ಸುರಿದು ಚಾಲಕ ಮಂಜುನಾಥ್‌ ಮತ್ತು ಆತನ ಬಸ್ಸನ್ನು ಸುಡುವುದಾಗಿ ಬೆದರಿಕೆ ಒಡ್ಡಿದ್ದಾರೆ ಎಂದು ದೂರಿನಲ್ಲಿ ಅಪಾದಿಸಲಾಗಿದೆ. ಚಾಲಕ ಮಂಜುನಾಥ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ – ಗಾಂಧಿ ಬಜಾರ್‌ ಮುಂದೆ ಮಹಾಕಾಳಿಯ ಅಬ್ಬರ, ಬೃಹತ್‌ ಕಲಾಕೃತಿಯ ವಿಶೇಷತೆ ಏನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

LATEST NEWS

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment