ಮಾರಿಕಾಂಬ ಜಾತ್ರೆಗೆ ಕ್ಷಣಗಣನೆ, ಗಾಂಧಿ ಬಜಾರ್‌ನಲ್ಲಿ ದೇವಿ ದರ್ಶನಕ್ಕೆ ಹೇಗಿದೆ ವ್ಯವಸ್ಥೆ? ಇಲ್ಲಿದೆ ಕಂಪ್ಲೀಟ್‌ ಡಿಟೇಲ್ಸ್‌

ಶಿವಮೊಗ್ಗ: ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬ (Kote Marikamba) ದೇವಿ ಜಾತ್ರೆಗೆ ಕ್ಷಣಗಣನೆ ಆರಂಭವಾಗಿದೆ. ಮೊದಲ ದಿನ ಗಾಂಧಿ ಬಜಾರ್‌ನ ತವರು ಮನೆಯಲ್ಲಿ ದೇವಿ ದರ್ಶನ ನೀಡಲಿದ್ದಾಳೆ. ➤ ಸುದ್ದಿಯ ಮುಂದಿನ 18 ಪ್ಯಾರಾಗಳು ಕೆಳಗಿವೆ.

ಮೊದಲ ದಿನವೇ ಮಾರಿಕಾಂಬೆಯನ್ನು ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯ ಭಕ್ತರು ಆಗಮಿಸುವ ಸಾಧ್ಯತೆ ಇದೆ. ಹಾಗಾಗಿ ಸೂಕ್ತ ವ್ಯವಸ್ಥೆ ಮಾಡಲಾಗಿದೆ.

Kote-Marikamba-Jathre-German-Tent-at-gandhi-bazaar

ಏನೇನೆಲ್ಲ ವ್ಯವಸ್ಥೆ ಆಗಿದೆ?

ಗಾಂಧಿ ಬಜಾರ್‌ನಲ್ಲಿ ಭಕ್ತರು ಸರತಿ ಸಾಲಿನಲ್ಲಿ ಹೋಗಿ ದೇವಿಯ ದರ್ಶನ ಪಡೆಯಬೇಕಾಗುತ್ತದೆ. ಇದಕ್ಕಾಗಿ ಬ್ಯಾರಿಕೇಡ್‌ಗಳನ್ನ ಅಳವಡಿಸಿ ಸುಲಭ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇನ್ನು, ಬಿಸಿಲಿನ ಅಬ್ಬರ ಜೋರಿದ್ದು, ಭಕ್ತರ ಅನುಕೂಲಕ್ಕೆ ಜರ್ಮನ್‌ ಟೆಂಟ್‌ ಅಳವಿಡಸಲಾಗಿದೆ ಎಂದು ಮಾರಿಕಾಂಬ ಸೇವಾ ಸಮಿತಿ ಅಧ್ಯಕ್ಷ ಎಸ್‌.ಕೆ.ಮರಿಯಪ್ಪ ತಿಳಿಸಿದ್ದಾರೆ.

Kote Marikamba Jathre at Gandhi Bazaar

ಶಿವಪ್ಪನಾಯಕ ಪ್ರತಿಮೆ ಮುಂಭಾಗದಿಂದ ಕರ್ನಾಟಕ ಸಂಘದ ವರೆಗೆ ಬಿ.ಹೆಚ್‌.ರಸ್ತೆಯ ಒಂದು ಬದಿಯಲ್ಲಿ ಪೆಂಡಾಲಾ ಹಾಕಲಾಗಿದೆ. ಸರತಿಯಲ್ಲಿ ಬರುವ ಭಕ್ತರು ನಿಲ್ಲಲು ಈ ವ್ಯವಸ್ಥೆ ಮಾಡಲಾಗಿದೆ.

ಭಕ್ತರ ದಣಿವಾರಿಸಲು ನೀರು, ಮಜ್ಜಿಗೆ, ಪಾನಕ ವಿತರಣೆ ಮಾಡಲು ವಿವಿಧ ಸಂಘಟನೆಗಳು ಸಿದ್ಧತೆ ಮಾಡಿಕೊಂಡಿವೆ.

ವಿಶೇಷ ದರ್ಶನಕ್ಕೆ ಟಿಕೆಟ್‌ ವ್ಯವಸ್ಥೆ

ಈ ಬಾರಿ ವಿಶೇಷ ಚೇತನರಿಗೆ ಹಾಗೂ ವಿಐಪಿಗಳಿಗೆ ಪ್ರತ್ಯೇಕವಾಗಿ ಎರಡು ಸಾಲು ನಿರ್ಮಿಸಲಾಗಿದೆ. ವಿಶೇಷ ದರ್ಶನಕ್ಕೆ ₹200 ಮತ್ತು ₹500 ಮೊತ್ತದ ಟಿಕೆಟ್ ಇರಲಿದೆ. ಗಾಂಧಿಬಜಾರಿನ ಕಾಳಿಕಾ ದೇವಿಯ ಮೂರ್ತಿಯ ಮಹಾದ್ವಾರದ ಬಳಿ ದೊರೆಯಲಿವೆ. ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು.ಎಸ್.ಕೆ.ಮರಿಯಪ್ಪ, ಕೋಟೆ ಮಾರಿಕಾಂಬ ದೇವಿ ಸೇವಾ ಸಮಿತಿ ಅಧ್ಯಕ್ಷ
Kote Marikamba Jathre at Gandhi Bazaar

ವಾಹನ ಸಂಚಾರ ನಿಷೇಧ

ತವರು ಮನೆಯಲ್ಲಿ ತಾಯಿಯ ದರ್ಶನದ ಹಿನ್ನೆಲೆ ಗಾಂಧಿ ಬಜಾರ್‌ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ‘ಫೆಬ್ರವರಿ 24 ರಂದು ಮುಂಜಾನೆ 3 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಗಾಂಧಿ ಬಜಾರ್‌ ಹಾಗೂ ಶಿವಪ್ಪ ನಾಯಕ ಸರ್ಕಲ್ ಸುತ್ತಮುತ್ತಲಿನ ರಸ್ತೆಗಳಲ್ಲಿ ವಾಹನ ಸಂಚಾರ ನಿರ್ಬಂಧ ವಿಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಆದೇಶಿಸಿದ್ದಾರೆ.

Kote Marikamba Jathre at Gandhi Bazaar

ವಾಹನ ಪಾರ್ಕಿಂಗ್‌ಗೆ 6 ಕಡೆ ವ್ಯವಸ್ಥೆ

ಇನ್ನು, ಮಾರಿಕಾಂಬ ಜಾತ್ರೆಗೆ ಆಗಮಿಸುವವರಿಗೆ ವಾಹನಗಳ ಪಾರ್ಕಿಂಗ್‌ಗೆ ನಗರದ ಆರು ಕಡೆ ವ್ಯವಸ್ಥೆ ಮಾಡಲಾಗಿದೆ ಎಂದು ಸಂಚಾರ ಠಾಣೆ ಇನ್ಸ್‌ಪೆಕ್ಟರ್‌ ಟಿ.ವಿ.ದೇವರಾಜ್‌ ತಿಳಿಸಿದ್ದರೆ.

ಪಾರ್ಕಿಂಗ್‌ 1: ಕರ್ನಾಟಕ ಸಂಘದ ಆವರಣ: ಬಿ.ಎಚ್. ರಸ್ತೆಯ ಎಸ್.ಎನ್. ಸರ್ಕಲ್ ಪಕ್ಕದಲ್ಲಿರುವ ಈ ಜಾಗದಲ್ಲಿ ಪಾರ್ಕಿಂಗ್‌ಗೆ ಅವಕಾಶ ನೀಡಲಾಗಿದೆ.

ಪಾರ್ಕಿಂಗ್‌ 2: ಸೇಕ್ರೆಡ್ ಹಾರ್ಟ್ ಚರ್ಚ್: ಚರ್ಚ್ ಆವರಣದ ವಿಶಾಲವಾದ ಜಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಬಹುದು.

ಪಾರ್ಕಿಂಗ್‌ 3: ಸರ್ಕಾರಿ ಪ್ರಥಮ ದರ್ಜೆ ಕಾಲೇಜು: ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಇದನ್ನೂ ಓದಿ – ಗಾಂಧಿ ಬಜಾರ್‌ ಮುಂದೆ ಮಹಾಕಾಳಿಯ ಅಬ್ಬರ, ಬೃಹತ್‌ ಕಲಾಕೃತಿಯ ವಿಶೇಷತೆ ಏನು?

ಪಾರ್ಕಿಂಗ್‌ 4: ಬಾಪೂಜಿ ನಗರದ ಮೈದಾನ: ಇಲ್ಲಿ ಭಕ್ತಾದಿಗಳು ತಮ್ಮ ವಾಹನಗಳನ್ನು ನಿಲ್ಲಿಸಲು ಸ್ಥಳಾವಕಾಶ ಕಲ್ಪಿಸಲಾಗಿದೆ.

ಪಾರ್ಕಿಂಗ್‌ 5: ಸೈನ್ಸ್ ಮೈದಾನ: ವಿಜ್ಞಾನ ಕಾಲೇಜು ಮೈದಾನವನ್ನು ಪಾರ್ಕಿಂಗ್‌ಗೆ ಬಳಸಿಕೊಳ್ಳಬಹುದು.

Kote-Marikamba-Jathre.webp

ಪಾರ್ಕಿಂಗ್‌ 6: ಮೀನಾಕ್ಷಿ ಭವನದ ಎದುರು: ನಗರದ ಮೀನಾಕ್ಷಿ ಭವನದ ಮುಂಭಾಗದಲ್ಲೂ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.

Leave a Comment

ಮುಂದಿನ ಸುದ್ದಿ ಓದಿ TRENDING

ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ, ಫಲಾನುಭವಿಗಳಿಗೆ ಮಹತ್ವದ ಸಲಹೆ, ಏನದು?