ಮಹಿಳೆಗೆ ದುರ್ಗಿಗುಡಿಯ ವಶೀಕರಣ ಜ್ಯೋತಿಷಿ ಕೊಟ್ಟ ಮಡಿಕೆ, ಮನೆಯಲ್ಲಿ ತೆಗೆದಾಗ ಕಾದಿತ್ತು ಶಾಕ್‌

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

ಶಿವಮೊಗ್ಗದಲ್ಲಿ ಬಿ.ಇಡಿ ಕೋರ್ಸ್‌ಗೆ ಪ್ರವೇಶಾತಿ ಆರಂಭ

⇒ ಪೂರ್ತಿ ಡಿಟೇಲ್ಸ್‌ಗೆ ಇಲ್ಲಿ ಕ್ಲಿಕ್‌ ಮಾಡಿ

ಶಿವಮೊಗ್ಗ: ವಶೀಕರಣದ ಮೂಲಕ ಗಂಡ – ಹೆಂಡತಿ (Wife) ಸಮಸ್ಯೆ ಪರಿಹಾರ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬ ಚಿನ್ನಾಭರಣ ಪಡೆದು ಪರಾರಿಯಾಗಿದ್ದಾನೆ.

ವಶೀಕರಣಕ್ಕೆ 61 ಗ್ರಾಂ ಚಿನ್ನ ತನ್ನಿʼ

ಶಿವಮೊಗ್ಗ ನಗರದ ಮಹಿಳೆಯೊಬ್ಬರು ತಮ್ಮ ಪತಿಯ ಸಮಸ್ಯೆ ಪರಿಹಾರಕ್ಕೆ ವಶೀಕರಣ ಜ್ಯೋತಿಷಿಯ ಮೊರೆ ಹೋಗಿದ್ದರು. ದುರ್ಗಿಗುಡಿಯಲ್ಲಿ ಕಚೇರಿ ಮಾಡಿಕೊಂಡಿದ್ದ ಈತ ಸಮಸ್ಯೆ ಪರಿಹಾರಕ್ಕೆ 61 ಗ್ರಾಂ ಚಿನ್ನಾಭರಣ ತರುವಂತೆ ತಿಳಿಸಿದ್ದ. ಅಂತೆಯೇ ಮಹಿಳೆ ತನ್ನ ಬಳಿ ಇದ್ದ 51 ಗ್ರಾಂ ಚಿನ್ನಾಭರಣ, ಆಕೆಯ ಸ್ನೇಹಿತೆ ಬಳಿಯಿಂದ 10 ಗ್ರಾಂ ಚಿನ್ನಾಭರಣ ಹೊಂದಿಸಿ ತಂದುಕೊಟ್ಟಿದ್ದರು.

ದಂಪತಿಯ ಫೋಟೊ, ಚಿನ್ನಾಭರಣವನ್ನು ಒಂದು ಮಡಿಕೆಯಲ್ಲಿ ಇರಿಸಿ, ಮಂತ್ರ ಪಠಿಸುವಂತೆ ಮಾಡಿ ಅದನ್ನು ಮುಚ್ಚಿ, ಕೆಂಪು ದಾರದಲ್ಲಿ ಕಟ್ಟಿದ ವಶೀಕರಣ ಜ್ಯೋತಿಷಿ ಸಾಹೇಬ್‌ ಸುಹಾನ್‌, ಅದನ್ನು ಮಹಿಳೆಯ ಕೈಗೆ ಕೊಟ್ಟಿದ್ದ. ಮಡಿಕೆಯನ್ನು ರಹಸ್ಯವಾಗಿ ಇಟ್ಟು ಐದು ದಿನ ಪೂಜೆ ಮಾಡಬೇಕು ಎಂದು ತಿಳಿಸಿದ್ದ. ಎರಡು ದಿನ ಪೂಜೆ ಬಳಿಕ ಅನುಮಾನಗೊಂಡು ಮಡಿಕೆ ತೆಗೆದ ಮಹಿಳೆಗೆ ಅದರೊಳಗೆ ಮಣ್ಣಿನ ಪೀಸುಗಳಿದ್ದವು. ಕೂಡಲೆ ಜ್ಯೋತಿಷ್ಯಾಲಯದ ಬಳಿ ಹೋದಾಗ ಕಚೇರಿಗೆ ಬೀಗ ಹಾಕಲಾಗಿತ್ತು ಎಂದು ಆರೋಪಿಸಲಾಗಿದೆ.  

ವಶೀಕರಣ ಜ್ಯೋತಿಷಿ ನಾಪತ್ತೆ

ಜ್ಯೋತಿಷ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದ ಸಿಬ್ಬಂದಿಯನ್ನು ವಿಚಾರಿಸಿದಾಗ ಜ್ಯೋತಿಷಿ ಸಾಹೇಬ್‌ ಸುಬಾನ್‌ ಲಕ್ನೋಗೆ ಹೋಗಿ ಬರುವುದಾಗಿ ಮೆಸೇಜ್‌ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ವಶೀಕರಣ, ಉದ್ಯೋಗ, ಪ್ರೇಮ ವಿಚಾರ, ಕೌಟುಂಬಿಕ ಕಲಹ ಪರಿಹಾರ ಎಂದು ನಂಬಿಸಿ ವಂಚಿಸಿದ್ದಾನೆ ಎಂದು ಆರೋಪಿಸಿ ಮಹಿಳೆ ದೂರು ನೀಡಿದ್ದಾರೆ. ಘಟನೆ ಸಂಬಂಧ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ » ಶಿವಮೊಗ್ಗದಲ್ಲಿ ಕಾಣೆಯಾದ ನಾಯಕರು, ರಾರಾಜಿಸಿದವು ಖಾಲಿ ಖಾಲಿ ಚೇರುಗಳು, ಮಕ್ಕಳಿಗೆ ಇದೇನಾ ಮಾದರಿ?

House Wife

Leave a Comment