ಕೆಲಸ ಹುಡುಕ್ತಿರೋರೆ ಹುಷಾರ್‌, ಯಾಮಾರಿದ್ರೆ ಶಿವಮೊಗ್ಗದ ಮಹಿಳೆಗಾದ ಸ್ಥಿತಿ ನಿಮಗೂ ಫಿಕ್ಸ್‌

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

SHIVAMOGGA LIVE NEWS | 26 APRIL 2024

SHIMOGA : ಪಾರ್ಟ್‌ ಟೈಮ್‌ ಉದ್ಯೋಗ ಕೊಡುವ ನೆಪದಲ್ಲಿ ಆನ್‌ಲೈನ್‌ ಮೂಲಕ ವಂಚನೆ ಮುಂದುವರೆದಿದೆ. ಉದ್ಯೋಗ ಆಕಾಂಕ್ಷಿಗಳು ಲಕ್ಷಾಂತರ ರೂ. ಕಳೆದುಕೊಳ್ಳುತ್ತಿದ್ದಾರೆ. ಇಂತಹ ಮತ್ತೊಂದು ಪ್ರಕರಣ ವರದಿಯಾಗಿದೆ.

ವಿದ್ಯಾಭ್ಯಾಸಕ್ಕೆ ತಕ್ಕ ಉದ್ಯೋಗ ಕೊಡುವುದಾಗಿ ಟೆಲಿಗ್ರಾಂನಲ್ಲಿ ಬಂದ ಮೆಸೇಜ್‌ ನಂಬಿ ಶಿವಮೊಗ್ಗದ ಮಹಿಳೆಯೊಬ್ಬರು (ಹೆಸರು ಗೌಪ್ಯ) ಲಕ್ಷಾಂತರ ರೂ. ಹಣ ಕಳೆದುಕೊಂಡಿದ್ದಾರೆ. ಏ.3ರಂದು ಶಿವಮೊಗ್ಗದ ಮಹಿಳೆಗೆ ಟೆಲಿಗ್ರಾಂನಲ್ಲಿ ಮೆಸೇಜ್‌ ಬಂದಿತ್ತು. ಹೊಟೇಲ್‌ ಒಂದರ ವೆಬ್‌ಸೈಟ್‌ ಲಿಂಕ್‌ ಕಳುಹಿಸಿ ಪ್ರಮೋಟ್‌ ಮಾಡುವಂತೆ ಸೂಚಿಸಲಾಯಿತು. ಇದಕ್ಕೆ 700 ರೂ. ಹಣವನ್ನ ಮಹಿಳೆಯ ಖಾತೆಗೆ ವರ್ಗಾಯಿಸಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಲಕ್ಷ ಲಕ್ಷ ನುಂಗಿದ ವಂಚಕರು

ಟಾಸ್ಕ್‌ಗಳನ್ನ ಪೂರೈಸಿ ಹೆಚ್ಚು ಹಣ ಸಾಂಪಾದಿಸಬಹುದು. ಟಾಸ್ಕ್‌ಗಳಿಗೆ ಹಣ ಪಾವತಿಸಬೇಕು ಎಂದು ಸೂಚಿಸಲಾಗಿತ್ತು. ಅದರಂತೆ ಶಿವಮೊಗ್ಗದ ಮಹಿಳೆ ವಿವಿಧ ಹಂತದಲ್ಲಿ 11.82 ಲಕ್ಷ ರೂ. ಹಣವನ್ನು ಆನ್‌ಲೈನ್‌ ಮೂಲಕ ವರ್ಗಾಯಿಸಿದ್ದರು. ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಾಗ ಸ್ನೇಹಿತರು, ಪರಿಚಿತರಿಗೆ ವಿಷಯ ತಿಳಿಸಿದ್ದರು. ವಂಚನೆಗೊಳಗಾದ ಅರಿವಾಗುತ್ತಿದ್ದಂತೆ ಮಹಿಳೆ ದೂರು ನೀಡಿದ್ದಾರೆ. ಸಿಇಎನ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ – ಗಾಜನೂರಿನಲ್ಲಿ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್‌ ಕಾರ್ಯಕರ್ತರ ಅಸಮಾಧಾನ ಸ್ಪೋಟ, ಕಾರಣವೇನು?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : April 26, 2024

Leave a Comment