ಶಿವಮೊಗ್ಗದಿಂದ ತರೀಕೆರೆಗೆ ಹೋಗಲು ಬಸ್‌ ಹತ್ತಿದ್ದ ‌ಮಹಿಳೆಗೆ ಕಾದಿತ್ತು ಆಘಾತ, ಆಗಿದ್ದೇನು?

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ: ಕೆಎಸ್ಆರ್‌ಟಿಸಿ ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಮಹಿಳೆಯೊಬ್ಬರ ವ್ಯಾನಿಟಿ ಬ್ಯಾಗ್‌ನಿಂದ ಸುಮಾರು ₹1.98 ಲಕ್ಷ ಮೌಲ್ಯದ ಚಿನ್ನದ ಸರ (Gold Chain) ಹಾಗೂ ನಗದು ಕಳ್ಳತನವಾಗಿರುವ ಘಟನೆ ನಡೆದಿದೆ.

ಶ್ವೇತಾ ಎನ್.ವಿ. ಅವರು ಶಿವಮೊಗ್ಗದ ತುಂಗಾನಗರದಲ್ಲಿರುವ ತಮ್ಮ ತವರು ಮನೆಯಲ್ಲಿ ನಡೆದ ನಾಮಕರಣ ಕಾರ್ಯಕ್ರಮ ಮುಗಿಸಿ, ವಾಪಸ್ ತರೀಕೆರೆಗೆ ಹೋಗಲು ಬಸ್ ನಿಲ್ದಾಣಕ್ಕೆ ಬಂದಿದ್ದರು. ಸಂಜೆ 6:10ರ ಸುಮಾರಿಗೆ ಬೆಂಗಳೂರು ಬಸ್ ಬಂದಾಗ, ಶ್ವೇತಾ ಅವರು ಬಸ್ ಹತ್ತಿದ್ದಾರೆ. ಈ ವೇಳೆ ಬಸ್‌ನಲ್ಲಿ ಭಾರಿ ಜನದಟ್ಟಣೆ ಇತ್ತು ಎಂದು ಆರೋಪಿಸಿದ್ದಾರೆ.

Shimoga-KSRTC-Bus-Stand.

ಬಸ್ ಹತ್ತಿದ ನಂತರ ಕಂಡಕ್ಟರ್ ಬಳಿ ಟಿಕೆಟ್ ಪಡೆಯಲು ವ್ಯಾನಿಟಿ ಬ್ಯಾಗ್ ಜಿಪ್ ತೆಗೆದಾಗ, ಅದರಲ್ಲಿದ್ದ ಸುಮಾರು 40 ಗ್ರಾಂ ತೂಕದ ಎರಡು ಎಳೆಯ ಚಿನ್ನದ ಸರ ಹಾಗೂ ₹6,000 ನಗದು ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ. ಕಳುವಾದ ಬಂಗಾರದ ಸರದ ಅಂದಾಜು ಬೆಲೆ ₹1,92,000 ಎಂದು ತಿಳಿಸಲಾಗಿದೆ.

ಘಟನೆ ನಡೆದ ಬಳಿಕ ಶ್ವೇತಾ ಅವರು ತಮ್ಮ ಊರಿಗೆ ತೆರಳಿ ಮನೆಯವರೊಂದಿಗೆ ಚರ್ಚಿಸಿ, ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ – ಶಿವಮೊಗ್ಗದ ಶೇ.90ರಷ್ಟು ಹೊಟೇಲ್‌ಗಳು ಬಂದ್‌, ಕಾರಣವೇನು?

Sunrise Facility Services, Sri sai Trust Shimoga

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

© ಶಿವಮೊಗ್ಗ ಲೈವ್‌ : March 12, 2026

Leave a Comment