ಶಿವಮೊಗ್ಗ: ಗೃಹಿಣಿಯೊಬ್ಬರ (ಹೆಸರು ಗೌಪ್ಯ) ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಲಾಗಿದೆ. ಇದರ ಬೆನ್ನಿಗೆ ಗೃಹಿಣಿಯ (woman’s photo) ಮೊಬೈಲ್ಗೆ ಅಪರಿಚಿತ ಮೊಬೈಲ್ ನಂಬರ್ಗಳಿಂದ ನಿರಂತರ ಕರೆ ಬರುತ್ತಿವೆ ಎಂದು ಆರೋಪಿಸಲಾಗಿದೆ. (ಈ ಸುದ್ದಿಯನ್ನು ಇನ್ನು 37 ಸೆಕೆಂಡ್ಗಳಲ್ಲಿ ಓದಿ ಮುಗಿಸಬಹುದು)
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?
ಗೃಹಿಣಿಯ ಮೊಬೈಲ್ ನಂಬರ್ಗೆ ಅಪರಿಚಿತ ನಂಬರ್ಗಳಿಂದ ನಿರಂತರವಾಗಿ ಕರೆಗಳು ಬರುತ್ತಿದ್ದವು. ರಿಸೀವ್ ಮಾಡಿದಾಗ ಕರೆ ಕಟ್ ಮಾಡಲಾಗುತ್ತಿತ್ತು. ಇದಾದ ಬಳಿಕ ಇನ್ಸ್ಟಾಗ್ರಾಂನಲ್ಲಿ ಗೃಹಿಣಿಯ ಹೆಸರಿನಲ್ಲಿ ಇನ್ಸ್ಟಾಗ್ರಾಂನಲ್ಲಿ ನಕಲಿ ಖಾತೆ ತೆರೆಯಲಾಗಿತ್ತು.
ಗೃಹಿಣಿಯ ಫೋಟೊವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅದರ ಮೇಲೆ ಅಶ್ಲೀಲ ಬರಹಗಳನ್ನು ಪ್ರಕಟಿಸಲಾಗಿತ್ತು. ಪತಿಯ ಫೋಟೊದ ಮೇಲು ಇದೇ ರೀತಿ ಬರಹಗಳು ಕಂಡು ಬಂದಿದ್ದವು. ಘಟನೆ ಸಂಬಂಧ ಗೃಹಿಣಿ ದೂರು ನೀಡಿದ್ದಾರೆ. ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ » ಶಿವಮೊಗ್ಗದ ಕೇಕ್ ತಯಾರಿಕಾ ಘಟಕಗಳ ಮೇಲೆ ದಾಳಿ, ಏನೇನೆಲ್ಲ ಸಿಕ್ತು?
