ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
SHIVAMOGGA LIVE NEWS | 10 APRIL 2023
SHIMOGA : ವರ್ಕ್ ಫ್ರಂ ಹೋಂ (Work From Home) ಜಾಹೀರಾತು ನಂಬಿ ರಿಜಿಸ್ಟರ್ ಮಾಡಿಕೊಂಡ ಗೃಹಿಣಿಯೊಬ್ಬರು 12.76 ಲಕ್ಷ ರೂ. ಹಣ ಕಳೆದುಕೊಂಡಿದ್ದಾರೆ. ಫೇಸ್ ಬುಕ್‍ನಲ್ಲಿ ಕಾಣಿಸಿದ ಜಾಹೀರಾತು ಲಿಂಕ್ ಕ್ಲಿಕ್ ಮಾಡಿ ಗೃಹಿಣಿ ಸಂಕಷ್ಟಕ್ಕೀಡಾಗಿದ್ದಾರೆ.
ಮತ್ತಷ್ಟು ಸುದ್ದಿ ಕೆಳಗಿದೆ ಸುಲಭ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ ಮೊಬೈಲ್ ನಂಬರ್ : 9972194422
ಏನಿದು ಪ್ರಕರಣ?
ಶಿವಮೊಗ್ಗದ ಗೃಹಣಿಯೊಬ್ಬರು (ಹೆಸರು ಗೌಪ್ಯ) ಫೇಸ್ ಬುಕ್‍ನಲ್ಲಿ ವರ್ಕ್ ಫ್ರಂ ಹೋಂ (Work From Home) ಜಾಹೀರಾತು ಗಮನಿಸಿದ್ದರು. ‘ಪಾರ್ಟ್ ಟೈಮ್ ಕೆಲಸ, ಹೆಚ್ಚು ಲಾಭ’ ಎಂದು ಜಾಹೀರಾತಿನಲ್ಲಿ ಪ್ರಕಟಿಸಲಾಗಿತ್ತು. ಇದನ್ನು ನಂಬಿ ತಮ್ಮ ಹೆಸರು, ಮೊಬೈಲ್ ನಂಬರ್ ರಿಜಿಸ್ಟರ್ ಮಾಡಿದ್ದರು. ಕೆಲವೇ ಹೊತ್ತಿನಲ್ಲಿ ಗೃಹಿಣಿಯ ವಾಟ್ಸಪ್ ನಂಬರ್‍ಗೆ ಒಂದು ಲಿಂಕ್ ಬಂದಿದ್ದು, ಪೂರ್ಣ ಮಾಹಿತಿ ದಾಖಲಿಸುವಂತೆ ಸೂಚಿಸಲಾಗಿತ್ತು. ಮಾಹಿತಿ ಒದಗಿಸಿ, ವೆಬ್ ಸೈಟ್ ಓಪನ್ ಮಾಡಿ ಆರ್ಡರ್ ಖರೀದಿಸಿದ್ದು, ಸೇಲ್ಸ್ ಕಮಿಷನ್ ಹಣ ಗೃಹಿಣಿಯ ಖಾತೆಗೆ ಬಂದಿತ್ತು.
» ವಾಟ್ಸಪ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
» ಫೇಸ್ಬುಕ್ ಮೆಸೆಂಜರ್ ಗ್ರೂಪ್ ಸೇರಲು ಇಲ್ಲಿ ಕ್ಲಿಕ್ ಮಾಡಿ |
ಇದನ್ನೂ ಓದಿ – ಶಿವಮೊಗ್ಗದಲ್ಲಿ ನಡುರಾತ್ರಿ ಚೆಕ್‌ಪೋಸ್ಟ್ ಬಳಿ ಕಾರು ಬಿಟ್ಟು ಇಬ್ಬರು ಎಸ್ಕೇಪ್, ಡೋರ್ ತೆಗೆದ ಪೊಲೀಸರಿಗೆ ಶಾಕ್
ಲಕ್ಷ ಲಕ್ಷ ಹಣ ವರ್ಗಾವಣೆ
ಕಮಿಷನ್ ಹಣ ಬಂದಿದ್ದರಿಂದ ಖುಷಿಯಾದ ಗೃಹಿಣಿ ಮುಂದಿನ ಟಾಸ್ಕ್‍ಗಳನ್ನು ಕಂಪ್ಲೀಟ್ ಮಾಡಲು ಅಣಿಯಾದರು. ವಿವಿಧ ಟಾಸ್ಕ್‍ಗಳಿಗೆ ಖಾತೆಯಿಂದ ಹಣ ವರ್ಗಾಯಿಸಿದ್ದರು. ತಮ್ಮ ಖಾತೆ, ಪತಿಯ ಅಕೌಂಟ್, ಸಹೋದರಿಯರ ಖಾತೆಗಳಿಂದಲೂ ಹಣ ವರ್ಗಾಯಿಸಿದ್ದರು. ಒಟ್ಟು 12.76 ಲಕ್ಷ ರೂ. ಹಣವನ್ನು ಗೃಹಿಣಿ ವರ್ಗಾಯಿಸಿದ್ದರು.
ಅನುಮಾನದಿಂದ ದೂರು
ಟಾಸ್ಕ್ ಪೂರೈಸಿದ್ದರೂ ಕಮಿಷನ್ ಹಣ ಪಡೆಯಲು ಶೇ.10ರಷ್ಟು ವೈಯಕ್ತಿಕ ತೆರಿಗೆ ಪಾವತಿಸಬೇಕು ಎಂದು ವಂಚಕರು ತಿಳಿಸಿದ್ದಾರೆ. ಇದರಿಂದ ಅನುಮಾನಗೊಂಡ ಗೃಹಿಣಿ ಪರಿಚಿತರಲ್ಲಿ ವಿಚಾರ ತಿಳಿಸಿದ್ದಾರೆ. ಆಗ ವಂಚನೆಗೊಳಗಾಗಿರುವುದು ಗೊತ್ತಾಗಿದೆ. ಈ ಹಿನ್ನೆಲೆ ಶಿವಮೊಗ್ಗ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ – ಶಿವಮೊಗ್ಗದಲ್ಲಿ KSRTC ಬಸ್ಸಿನಲ್ಲಿ ಟಿಕೆಟ್ ಮಾಡಿಸಲು ವ್ಯಾನಿಟಿ ಬ್ಯಾಗ್ ತೆಗೆದ ಮಹಿಳೆಗೆ ಆಘಾತ
ಮೋಸದ ಜಾಲಕ್ಕೆ ಬೀಳಬೇಡಿ
ವರ್ಕ್ ಫ್ರಂ ಹೋಂ, ಪಾರ್ಟ್ ಟೈಮ್ ಜಾಬ್ ಹೆಸರಿನಲ್ಲಿ ವಂಚನೆ ನಡೆಯುತ್ತಿದೆ. ವರ್ಕ್ ಫ್ರಂ ಹೋಂ ನೆಪದಲ್ಲಿ ಶಿವಮೊಗ್ಗದಲ್ಲಿ ಜನರನ್ನು ವಂಚಿಸುತ್ತಿರುವುದು ಇದೆ ಮೊದಲಲ್ಲ. ದೇಶಾದ್ಯಂತ ನಿತ್ಯ ಒಂದಿಲ್ಲೊಂದು ಪ್ರಕರಣ ದಾಖಲಾಗುತ್ತಿದೆ. ಹಣ ವರ್ಗಾಯಿಸುವ ಮುನ್ನ ಸ್ವಲ್ಪ ಎಚ್ಚರ ವಹಿಸಬೇಕಿದೆ. ಇಲ್ಲವಾದಲ್ಲಿ ಲಕ್ಷಾಂತರ ರೂ. ಹಣ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ.