OLXನಲ್ಲಿ ಜಾಹೀರಾತು ನೀಡಿ ಶಿವಮೊಗ್ಗದ ಜನರಿಗೆ ಟೋಪಿ ಹಾಕಲು ಯತ್ನಿಸಿದವನು ಅರೆಸ್ಟ್

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಶಿವಮೊಗ್ಗ ಲೈವ್.ಕಾಂ | ಶಿವಮೊಗ್ಗ | 19 ಆಗಸ್ಟ್ 2019

ಸಾಲ ಕೊಡಿಸುವುದಾಗಿ ಒಎಲ್ಎಕ್ಸ್’ನಲ್ಲಿ ಜಾಹೀರಾತು ನೀಡಿ, ಶಿವಮೊಗ್ಗದಲ್ಲಿ ಜನರಿಗೆ ಟೋಪಿ ಹಾಕಲು ಯತ್ನಿಸಿದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಶ್ರೀರಾಂಪುರದ ಮಂಜೂಶ (20) ಬಂಧಿತ. ಮಾರ್ಕ್ಸ್ ಕಾರ್ಡ್ ಆಧಾರದ ಮೇಲೆ ಸಾಲ ಕೊಡಿಸುವುದಾಗಿ ಒಎಲ್ಎಕ್ಸ್’ನಲ್ಲಿ ಜಾಹೀರಾತು ಪ್ರಕಟಿಸಿದ್ದ. ಜಾಹೀರಾತು ಆಧಾರದ ಮೇಲೆ ಮಂಜೂಶನನ್ನು ಸಂಪರ್ಕಿಸಿದರೆ, ತನ್ನನ್ನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಿಯಿಸಿಕೊಳ್ಳುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು ಗಮನಿಸಿ ಶಿವಮೊಗ್ಗದ ವೆಂಕಟೇಶ್ ಎಂಬುವವರು ಸಾಲಕ್ಕಾಗಿ ಕರೆ ಮಾಡಿದ್ದರು. 9 ಲಕ್ಷ ಸಾಲ ಕೊಡಿಸಲು ದಾಖಲೆಗಳನ್ನು ಸಿದ್ಧಪಡಿಸಿಬೇಕಿದೆ. ಅದಕ್ಕಾಗಿ 9 ಸಾವಿರ ರೂ. ಬೇಕು ಎಂದು ಹಣ ಪಡೆದು ವಂಚಿಸಿದ್ದ. ಈ ಸಂಬಂಧ ವೆಂಕಟೇಶ್ ಅವರು ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ನಡೆಸಿದ ಪೊಲೀಸರು ಮಂಜೂಶನನ್ನು ಬಂಧಿಸಿದ್ದಾರೆ.

ಶಿವಮೊಗ್ಗ ಲೈವ್.ಕಾಂ ವಾಟ್ಸಪ್ ನಂಬರ್ | 7411700200

ಸುದ್ದಿಗಾಗಿ ಮೊಬೈಲ್ ನಂಬರ್ | 9964634494

ಈ ಮೇಲ್ | shivamoggalive@gmail.com

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment