ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ
ಶಿವಮೊಗ್ಗ ಲೈವ್.ಕಾಂ | SHIMOGA NEWS | 19 ಅಕ್ಟೋಬರ್ 2021
ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ ಯುವಕರನ್ನು ಹಿಡಿದು ವಿಚಾರಣೆಗೆ ಒಳಪಡಿಸಲಾಗಿದೆ. ತಪಾಸಣೆ ವೇಳೆ ಇಬ್ಬರ ಬಳಿಯು ಹರಿತವಾದ ಕತ್ತಿಗಳಿರುವುದು ಬೆಳಕಿಗೆ ಬಂದಿದೆ.
ವಿನೋಬನಗರ 2ನೇ ಹಂತದಲ್ಲಿ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿದ್ದ ಸಂದರ್ಭ, ಪಲ್ಸರ್ ಬೈಕಿನಲ್ಲಿ ಬಂದಿದ್ದ ಇಬ್ಬರನ್ನು ತಡೆದಿದ್ದಾರೆ. ತಪಾಸಣೆಗೂ ಮುನ್ನ ವಿಚಾರಣೆ ಮಾಡುತ್ತಿದ್ದಂತೆ ಯುವಕರು ಪರಾರಿಯಾಗಲು ಯತ್ನಿಸಿದ್ದಾರೆ. ಹಿಡಿದು ಪರಿಶೀಲನೆ ನಡೆಸಿದಾಗ ಮಾರಕ ಆಯುಧಗಳು ಪತ್ತೆಯಾಗಿವೆ.
ಸೊಂಟದಲ್ಲಿದ್ದವು ಹರಿತ ಕತ್ತಿಗಳು
ಬೈಕ್’ನಲ್ಲಿ ಬಂದವರನ್ನು ಮೇಲಿನ ತುಂಗಾನಗರದ ಪ್ರವೀಣ್ ಮತ್ತು ತರಿಕೆರೆಯ ಸಂತೋಷ್ ಎಂದು ಗುರುತಿಸಲಾಗಿದೆ. ಪರಾರಿಯಾಗಲು ಯತ್ನಿಸಿದ ಇಬ್ಬರನ್ನು ಹಿಡಿದ ಪೊಲೀಸರು, ತಪಾಸಣೆ ನಡೆಸಿದ್ದಾರೆ.

ಒಬ್ಬನ ಸೊಂಟದಲ್ಲಿ 14 ಇಂಚಿನ ಹರಿತ ಕತ್ತಿ ಪತ್ತೆಯಾಗಿದೆ. ಮತ್ತೊಬ್ಬ ಸೊಂಟದಲ್ಲಿ ಸುಮಾರು 18 ಇಂಚು ಉದ್ದವಿದ್ದ ಮತ್ತೊಂದು ಕತ್ತಿ ಪತ್ತೆಯಾಗಿದೆ. ಈ ಆಯುಧಗಳನ್ನು ಇಟ್ಟುಕೊಂಡು ಓಡಾಡಲು ಕಾರಣ ಕೇಳಿದಾಗ ಉತ್ತರಿಸಲು ಇಬ್ಬರು ತಡಬಡಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕರನ್ನು ಬಂಧಿಸಲಾಗಿದೆ.
ಬಂಧಿತರಿಂದ ಪಲ್ಸರ್ ಬೈಕ್, ಎರಡು ಹರಿತ ಕತ್ತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LATEST NEWS
- ಕೂಡ್ಲಿಯಲ್ಲಿ ಸಾವಿರ ಸಾವಿರ ಜನರಿಂದ ಪುಣ್ಯ ಸ್ನಾನ, ಹೇಗಿದೆ ಈ ಬಾರಿ ಜಾತ್ರೆ?

- ಶಿವಮೊಗ್ಗದಲ್ಲಿ ಯುಗಾದಿ ಚಂದ್ರ ದರ್ಶನ, ಜನರಿಂದ ಪೂಜೆ, ಶುಭಾಶಯ ವಿನಿಮಯ

- ಇವತ್ತು ಎಲ್ಲೆಲ್ಲಿ ಎಷ್ಟಿದೆ ಅಡಿಕೆ ರೇಟ್ | 20 ಮಾರ್ಚ್ 2026 | ಅಡಿಕೆ ಧಾರಣೆ

- ಕಾರು, ಬೈಕ್ ಡಿಕ್ಕಿ, ಯುವಕ ದಾರುಣ ಸಾವು, ಹೇಗಾಯ್ತು ಘಟನೆ?

- ಉಷಾ ನರ್ಸಿಂಗ್ ಹೋಂ ಸಿಗ್ನಲ್ನಲ್ಲಿನ ಅಪಘಾತ, ಸಿಸಿಟಿವಿ ದೃಶ್ಯ ಲಭ್ಯ, ಇಲ್ಲಿದೆ ಡಿಕ್ಕಿಯ ಕಂಪ್ಲೀಟ್ ಡಿಟೇಲ್ಸ್

About The Editor
ನಿತಿನ್ ಆರ್.ಕೈದೊಟ್ಲು
















