ದಿನ ಭವಿಷ್ಯ | ಯಾವ್ಯಾವ ರಾಶಿಗೆ ಇವತ್ತು ಹೇಗಿದೆ? ಓದಲು ಕ್ಲಿಕ್‌ ಮಾಡಿ

ಶಿವಮೊಗ್ಗLIVE

ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಮ್ಮನ್ನು ಸೇರಿ

ಮೇಷ : ಕುಟುಂಬ ಸದಸ್ಯರ ಜೊತೆ ಸೌಹಾರ್ದ ವಾತಾವರಣ ಸೃಷ್ಟಿಸಿಕೊಳ್ಳಬೇಕಿದೆ. ಅನಗತ್ಯ ಅಲೋಚನೆಗಳಿಂದ ನೆಮ್ಮದಿ ಭಂಗ.

ವೃಷಭ : ಕಷ್ಟಕಾಲಕ್ಕೆ ಅನುಕೂಲವಾಗುವಂತೆ ಹಣ ಸಂಗ್ರಹಿಸಿಡುವುದು ಸೂಕ್ತ. ಮುಂದೆ ಉಪಯೋಗ ಆಗಲಿದೆ. ಸೃಜನಶೀಲ ವ್ಯಕ್ತಿತ್ವದಿಂದ ಅನಿರೀಕ್ಷಿತ ಫಲ ಸಿಗಲಿದೆ.

ಮಿಥುನ : ನಿತ್ಯ ವ್ಯಾಯಾಮ ಮಾಡುವುದು ಆರೋಗ್ಯಕರ. ಮನಸನ್ನು ಮುದವಾಗಿ ಇಡಲಿದೆ. ನಿತ್ಯ ವ್ಯಾಯಾಮದ ಕಡೆ ಯೋಚನೆ ಸೂಕ್ತ. ದುಡುಕಿನ ನಿರ್ಧಾರಿಂದ ಸಮಸ್ಯೆ ಉಂಟಾಗಲಿದೆ.

ಕರ್ಕಾಟಕ : ಧ್ಯಾನದಿಂದ ನೆಮ್ಮದಿ ಮತ್ತು ಮಾನಸಿಕ ಶಕ್ತಿ ವೃದ್ಧಿಯಾಗಲಿದೆ. ಹಣಕಾಸು ದುರ್ಬಲ. ಹೆಚ್ಚು ಚಿಂತೆ ಮಾಡಬೇಕಾಗುತ್ತದೆ.

ಸಿಂಹ : ಒತ್ತಡ ನಿವಾರಣೆಗೆ ಕುಟುಂಬದೊಂದಿಗೆ ಹೆಚ್ಚು ಸಮಯ ಕಳೆಯಬೇಕು. ಹಾಸ್ಯದ ಮಾತಿನಿಂದ ಸುತ್ತಲು ಇದ್ದವರಲ್ಲಿ ಉಲ್ಲಾಸ ಮೂಡಿಸಿ.

ಕನ್ಯಾ : ಕೆಲಸದ ಸ್ಥಳದಲ್ಲಿ ಮಹತ್ವದ ಬದಲಾವಣೆಯಿಂದ ಅನುಕೂಲ. ಹಣ ಹೂಡಿಕೆಯತ್ತ ಆಸಕ್ತಿ ಹೆಚ್ಚಳ.

ತುಲಾ : ಓದು ಮತ್ತು ಸಂಗೀತದಿಂದ ಮನಸಿಗೆ ಮುದ. ಚೈತನ್ಯ ಹೆಚ್ಚಲಿದೆ. ಉದ್ಯೋಗ ಮತ್ತು ಕುಟುಂಬದಲ್ಲಿ ಉಲ್ಲಾಸ.

ವೃಶ್ಚಿಕ : ಅನುಭವ ಮತ್ತು ಜ್ಞಾನ ಹಂಚಿಕೊಂಡರೆ ಮನ್ನಣೆ ಸಿಗುವುದು ನಿಶ್ಚಿತ. ಒತ್ತಡ ನಿವಾರಣೆಗೆ ಆಸಕ್ತಿಕರ ವಿಚಾರ ಓದುವುದು ಸೂಕ್ತ.

ಧನು : ವಾದಗಳಿಂದ ಸಾಧಿಸುವುದಕ್ಕಿಂತಲು ಕಳೆದುಕೊಳ್ಳುವುದು ಹೆಚ್ಚು. ವಾದಕ್ಕಿಳಿಯುವ ಮುನ್ನ ಮರು ಯೋಚಸುವುದು ಸೂಕ್ತ. ಪ್ರೀತಿಪಾತ್ರರೊಂದಿಗಿನ ಮಾತಿನಿಂದ ಸಂತೋಷ.

ಮಕರ : ಸಹೋದ್ಯೋಗಿಗಳ ಜೊತೆಗೆ ಬಾಂಧವ್ಯ ಉತ್ತಮವಾಗಿದ್ದರೆ ಕೆಲಸ ಸುಲಭ. ಆತುರದ ನಿರ್ಧಾರ, ಹೆಚ್ಚಿನ ನಂಬಿಕೆಗಳು ಭವಿಷ್ಯದಲ್ಲಿ ಕೆಡುಕು ಉಂಟು ಮಾಡಲಿವೆ.

ಕುಂಭ : ಸೂಕ್ತ ರೀತಿಯಲ್ಲಿ ಹಣಕಾಸು ನಿರ್ವಹಣೆ ಮಾಡಬೇಕು. ಸಂಪೂರ್ಣ ತಿಳಿವಳಿಕೆ ಗಳಿಸದೆ ವ್ಯಾಪಾರ, ವಹಿವಾಟಿನಲ್ಲಿ ಹೂಡಿಕೆ ಮಾಡುವುದು ಬೇಡ.

ಮೀನ : ಹಣ ಉಳಿಸುವ ಪ್ರಯತ್ನ ವಿಫಲ. ಸಣ್ಣಪುಟ್ಟದ್ದಕ್ಕು ದೊಡ್ಡ ಮಟ್ಟದ ಖರ್ಚು. ಮಾನಸಿಕ ನೆಮ್ಮದಿ ಇರುವುದಿಲ್ಲ. ಮಕ್ಕಳಿಗೆ ಅನಾರೋಗ್ಯ.

ಇದನ್ನೂ ಓದಿ – ಅಡಿಕೆ ಧಾರಣೆ | 11 ಸೆಪ್ಟೆಂಬರ್‌ 2023 | ಇವತ್ತು ಯಾವ್ಯಾವ ಮಾರುಕಟ್ಟೆಯಲ್ಲಿ ಎಷ್ಟಿದೆ ಅಡಿಕೆ ರೇಟ್‌?

ನಿಮ್ಮ ಕನಸಿನ ಮನೆ ಈಗ ನನಸು! 🏠

ಅತಿ ಕಡಿಮೆ ಬಡ್ಡಿ ದರದಲ್ಲಿ ಸುಲಭ ಗೃಹ ಸಾಲ


ಈಗಲೇ ಕರೆ ಮಾಡಿ
9972194422


 

About The Editor

ನಿತಿನ್‌ ಆರ್‌.ಕೈದೊಟ್ಲು

Nitin Kaidotlu - Editor - Shivamogga Live

Leave a Comment