ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA, 17 DECEMBER 2024
ಮೇಷ
ವ್ಯಾಜ್ಯಗಳ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲು ವಕೀಲರ ಜೊತೆ ಚರ್ಚೆ ಅತ್ಯಗತ್ಯ. ಮುಂದಿನ ಆಗು ಹೋಗು ಕುರಿತು ಹೆಚ್ಚು ಚಿಂತೆ ಮಾಡಬೇಡಿ.
ವೃಷಭ
ಕನಸು ಸಾಕಾರಕ್ಕೆ ಶ್ರಮ ಅತ್ಯಗತ್ಯ. ವಾಹನಕ್ಕೆ ಸಣ್ಣಪುಟ್ಟ ಅವಘಡ ಸಾಧ್ಯತೆ ಇದೆ. ಚಾಲನೆ ವೇಳೆ ಹೆಚ್ಚು ನಿಗಾ ವಹಿಸಿ. ನೀರಿನಿಂದ ಆರೋಗ್ಯ ಸಮಸ್ಯೆ ಉಂಟಾಗಬಹುದು.
ಮಿಥುನ
ಚಿನ್ನ ಸೇರಿ ದುಬಾರಿ ಲೋಹಗಳಿಗೆ ಹಣ ವಿನಿಯೋಗ. ಬಹು ಸಮಯದ ನಂತರ ಹವ್ಯಾಸಗಳತ್ತ ಗಮನ ಹರಿಸುವಿರಿ. ಮನಸು ಪ್ರಫುಲ್ಲವಾಗಲಿದೆ.
ಕರ್ಕಾಟಕ
ಭೂರಿ ಭೋಜನದಿಂದಾಗಿ ಅಜೀರ್ಣದ ಸಮಸ್ಯೆ ಉಂಟಾಗಲಿದೆ. ದೊಡ್ಡ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆಯುವ ಅವಕಾಶ ದೊರೆಯಲಿದೆ.
ಸಿಂಹ
ಮಂಗಳ ಕಾರ್ಯದ ಕುರಿತು ಹಿರಿಯರ ಜೊತೆ ಸಮಾಲೋಚನೆ ನಡೆಸಲಿದ್ದೀರಿ. ಸಂಸಾರದ ವಿಚಾರದಲ್ಲಿ ಹಿರಿಯರ ಮಾತು ಮೀರದೆ ಇರುವುದು ಒಳ್ಳೆಯದು.
ಕನ್ಯಾ
ಪರಿಸ್ಥಿತಿಗೆ ಹೊಂದಿಕೊಂಡು ಮುನ್ನಡೆಯುವ ನಿರ್ಧಾರ ಮಾಡುವಿರಿ. ಸಹೋದ್ಯೋಗಿಗಳ ಜೊತೆಗೆ ಸಹನೆ ಇರಲಿ. ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಉಂಟಾಗಲಿದೆ.
ತುಲಾ
ಸ್ನೇಹಿತನಿಗೆ ಸಾಂತ್ವನ ಹೇಳುವ ಸಂದರ್ಭ ಎದುರಾಗಲಿದೆ. ದೂರ ಪ್ರಯಾಣದ ಯೋಗ. ದೊಡ್ಡ ಆತಂಕ ದೂರಾಗಲಿದೆ. ಕೆಲಸದಲ್ಲಿ ಹೆಚ್ಚು ಆಸಕ್ತಿ.
ವೃಶ್ಚಿಕ
ವೃತ್ತಿಯಲ್ಲಿ ಪದೋನ್ನತಿಗಾಗಿ ಹೆಚ್ಚಿನ ಅಧ್ಯಯನ ಮಾಡಬೇಕಾಗುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಗತಿ. ಮನೆಯಲ್ಲಿ ಸಂತಸ.
ಧನು
ಆಪ್ತರ ಸಲಹೆಯಿಂದಾಗಿ ಸಮಸ್ಯೆಗಳು ಸುಲಭವಾಗಿ ಪರಿಹಾರವಾಗಲಿದೆ. ಮೇಲಧಿಕಾರಿಗಳಿಂದ ಒತ್ತಡ. ಕೆಲಸದ ಸ್ಥಳದಲ್ಲಿ ಆಯಾಸ.
ಮಕರ
ಸಹೋದರರಿಗೆ ಮನೆ ನಿರ್ಮಾಣದಲ್ಲಿ ಸಹಾಯ ಮಾಡುವ ಮನಸ್ಸಾಗಲಿದೆ. ಮಕ್ಕಳ ಜೊತೆಗೆ ಆತ್ಮೀಯ ಚರ್ಚೆ. ಕಲೆ ಮತ್ತು ಸಾಹಿತ್ಯ ವಲಯದಲ್ಲಿ ಮನ್ನಣೆ.
ಕುಂಭ
ಈ ಹಿಂದೆ ತೆಗೆದುಕೊಂಡಿದ್ದ ತೀರ್ಮಾನಕ್ಕೆ ಬದ್ಧವಾಗಿ ಮುನ್ನಡೆಯುವಿರಿ . ಆಧ್ಯಾತ್ಮಿಕ ವಿಷಯಗಳತ್ತ ಹೆಚ್ಚು ಆಸಕ್ತಿ ಮೂಡಲಿದೆ.
ಮೀನ
ಉದ್ಯೋಗದ ಕುರಿತ ಚಿಂತೆ ದೂರಾಗಲಿದೆ. ಕೆಲಸ ಸ್ಥಳದಲ್ಲಿ ಉತ್ತಮ ಸಾಧನೆಯಿಂದ ಉತ್ತಮ ಸ್ಥಾನಮಾನ ಒದಗಲಿದೆ.
ಇದನ್ನೂ ಓದಿ » ಶಿವಮೊಗ್ಗದಲ್ಲಿ ಸೂಪರ್ ಮಾರ್ಕೆಟ್ಗಳ ಟ್ರೆಂಡ್ ಜೋರು, ನಿತ್ಯ ಸಾವಿರ ಸಾವಿರ ಗ್ರಾಹಕರು, ಕಾರಣವೇನು?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422