SHIVAMOGGA LIVE NEWS | 18 DECEMBER 2023
ಮೇಷ
ಉತ್ತಮ ಗುರು ಸಿಗಲಿದ್ದಾರೆ. ಆಧ್ಯಾತ್ಮಿಕ ಮತ್ತು ದೇವರ ಕುರಿತ ಹಲವು ಗೊಂದಲಕ್ಕೆ ಉತ್ತರ. ಆಶ್ಚರ್ಯಕರ ಬೆಳವಣಿಗೆಗಳು ಘಟಿಸಲಿವೆ.
ವೃಷಭ
ಅನಿರೀಕ್ಷಿತವಾಗಿ ಬಂಧುಗಳ ಭೇಟಿ. ಧರ್ಮಕಾರ್ಯಗಳನ್ನು ಮಾಡುವಲ್ಲಿ ವಿಳಂಬ ಮಾಡದಿರಿ. ದೇಗುಲಗಳಿಗೆ ಭೇಟಿ, ದೇವರ ದರ್ಶನ.
ಮಿಥುನ
ಬಹು ಸಮಯದಿಂದ ಕೆಳೆದ ವಸ್ತು ಸಿಗಲಿದೆ. ಕೆಲಸದ ಸ್ಥಳದಲ್ಲಿ ಉತ್ತಮ ಸ್ಥಾನಮಾನ ದೊರೆಯಲಿದೆ.
ಕರ್ಕಾಟಕ
ಮಾತಿನ ಮೇಲೆ ಹಿಡಿತ ಮುಖ್ಯ. ನಿಮ್ಮ ಮಾತಿಗೆ ಮಾರು ಹೋಗುವವರು ಇದ್ದಾರೆ. ಉತ್ತಮ ಉದ್ದೇಶಕ್ಕಾಗಿ ಹೆಚ್ಚಿನ ಶ್ರಮ.
ಸಿಂಹ
ಮಕ್ಕಳು ನಿಮ್ಮ ಮಾತನ್ನು ಮೀರಿ ನಡೆಯಲಿದ್ದಾರೆ. ಮಕ್ಕಳ ಮೇಲಿನ ಅತಿ ಮೋಹದಿಂದಾಗಿ ಅವರ ಅಭಿವೃದ್ಧಿಗೆ ತೊಡಕು.
ಕನ್ಯಾ
ಗುರು ಮತ್ತು ಗಣಪತಿಯನ್ನು ಸ್ಮರಿಸಿ ಕೆಲಸ ಆರಂಭಿಸಿ. ಗುಪ್ತ ವಿಚಾರಗಳನ್ನು ಯಾರೊಂದಿಗು ಹಂಚಿಕೊಳ್ಳಬೇಡಿ.
ತುಲಾ
ಆಹಾರದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ. ಸಂಸಾರದಲ್ಲಿ ವಿರಸ. ಹೊರಗಿನವರಿಗೆ ಕೌಟುಂಬಿಕ ಸಂಗತಿ ತಿಳಿಯದಂತೆ ಜಾಗ್ರತೆ ವಹಿಸಿ.
ವೃಶ್ಚಿಕ
ಸಹಿ ನಕಲು ಮಾಡಿ ನಿಮಗೆ ಸಂಕಷ್ಟ ತಂದೊಡ್ಡಲಿದ್ದಾರೆ. ಮುಕ್ತ ಮಾತಿನಿಂದ ಸಂಕಷ್ಟಗಳಿಂದ ಪಾರಾಗುವಿರಿ.
ಧನು
ವ್ಯಾಪಾರ, ವಹಿವಾಟಿನಲ್ಲಿ ವಂಚನೆಗೆ ಒಳಗಾಗುವ ಸಾಧ್ಯತೆ. ಕೊಟ್ಟ ಮಾತಿನಂತೆ ಹೆಜ್ಜೆ ಹಾಕಲು ಹರಸಾಹಸ ಪಡುವಿರಿ.
ಮಕರ
ಕಾರ್ಯನಿಮಿತ್ತ ದೂರ ಪ್ರಯಾಣ ಸಾಧ್ಯತೆ. ಮಕ್ಕಳ ಆಟೋಟ ಕಂಡು ಖುಷಿ ಪಡುವಿರಿ.
ಕುಂಭ
ಕೆಲಸದ ಸ್ಥಳದಲ್ಲಿ ವಿಭಿನ್ನ ಸವಾಲು ಎದುರಾಗಲಿದೆ. ಸುಲಭವಾಗಿ ಸಮಸ್ಯೆ ಪರಿಹರಿಸುವಿರಿ.
ಮೀನ
ನಿಮ್ಮ ಸ್ಥಾನಮಾನದ ಕುರಿತು ಕುಹಕ ಆಡುವವರ ವಿರುದ್ಧ ಕೋಪ. ವಿವಾಹದ ವಿಚಾರದಲ್ಲಿ ಸಮಸ್ಯೆ ಉಂಟಾಗಲಿದೆ.
ಇದನ್ನೂ ಓದಿ – ಶಿವಮೊಗ್ಗ ಬೈಪಾಸ್ ರಸ್ತೆಯಲ್ಲಿ ಹೊಸ ಸೇತುವೆ ಉದ್ಘಾಟನೆ, ವಾಹನ ಸಂಚಾರ ಶುರು, ಹೇಗಿದೆ ಸೇತುವೆ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200