ಚೆಡ್ಡಿ ಜೇಬಲ್ಲಿ ದುಡ್ಡು ಇಟ್ಟರೂ ಬಿಡದ ಶಿವಮೊಗ್ಗ KSRTC ಬಸ್‌ ನಿಲ್ದಾಣದ ಖದೀಮರು

ಸೈಟ್‌ ಮಾರಾಟಕ್ಕಿದೆ

ಶಿವಮೊಗ್ಗದ ಬಿದಿರೆಯಲ್ಲಿ ಸೈಟ್‌ ಮಾರಾಟಕ್ಕಿದೆ. ಸಾಯಿ ಬಾಬಾ ದೇಗುಲ, ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ 30*50 ಅಳತೆಯ ಸೈಟು ಮಾರಾಟಕ್ಕಿದೆ. ಸಂಪರ್ಕಿಸಿ: 8073449559

SHIVAMOGGA LIVE NEWS | 18 DECEMBER 2023

SHIMOGA : ಬಸ್‌ ಹತ್ತುವ ಸಂದರ್ಭ ಕೂಲಿ ಕಾರ್ಮಿಕನೊಬ್ಬ ಚಡ್ಡಿ ಜೇಬಿನಲ್ಲಿದ್ದ 37 ಸಾವಿರ ರೂ. ಹಣ ಕಳವು ಮಾಡಲಾಗಿದೆ. ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಘಟನೆ ಸಂಭವಿಸಿದೆ. ವಿಜಯನಗರ ಜಿಲ್ಲೆ ಹರಪನಹಳ್ಳಿಯ ಆಲೂರು ಚೌಡಪ್ಪ ಎಂಬುವವರು ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಾಳೆಹೊನ್ನೂರಿನ ಕಾಫಿ ಎಸ್ಟೇಟ್‌ನಲ್ಲಿ ಆಲೂರು ಚೌಡಪ್ಪ ಅವರ ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಅವರನ್ನು ಭೇಟಿಯಾಗಿ ತಮ್ಮೂರಿಗೆ ಮರಳಲು ಪತ್ನಿ ಮತ್ತು ಸಂಬಂಧಿಯೊಂದಿಗೆ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಬಂದಿದ್ದರು. ಹೊಸಪೇಟೆ ಬಸ್‌ ಹತ್ತುವ ಸಂದರ್ಭ ರಶ್‌ ಹೆಚ್ಚಾಗಿತ್ತು. ಈ ವೇಳೆ ಚೌಡಪ್ಪ ಅವರ ಚೆಡ್ಡಿ ಜೇಬಿಗೆ ಯಾರೋ ಕೈ ಹಾಕಿದಂತಾಗಿದೆ. ಬಳಿಕ ಪರಿಶೀಲಿಸಿದಾಗ 37 ಸಾವಿರ ರೂ. ಹಣ ಇರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂಘದ ಸಾಲದ ಕಂತು ಮರುಪಾವತಿಗೆ ಚೌಡಪ್ಪ ಅವರ ಮಕ್ಕಳು ಹಣ ಕೊಟ್ಟಿದ್ದರು. ಆ ಹಣ ಕಳುವಾಗಿದೆ ಎಂದು ಆರೋಪಿಸಿ ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಇದನ್ನೂ ಓದಿ – ಬೈಕ್‌ ಶೋ ರೂಂನಲ್ಲಿ ಬೆಂಕಿ, 20ಕ್ಕೂ ಹೆಚ್ಚು ಬೈಕ್‌ಗಳಿಗೆ ಹಾನಿ

Leave a Comment