ಮೇಷ : ನಷ್ಟದ ದಿನ. ಸಣ್ಣ ಆರೋಗ್ಯ ಬಾಧೆ. ಲಾಭದ ಬಗ್ಗೆ ಕಾಯಬೇಕಾದ ಅನಿವಾರ್ಯತೆ. ಸುಬ್ರಹ್ಮಣ್ಯ ಭುಜಂಗ ಸ್ತೋತ್ರ ಓದಿ. ಉತ್ತಮ ಫಲ ಸಿಗುತ್ತದೆ. (Bhavishya)
ಶುಭ ಸಂಖ್ಯೆ : 1-5-8-9 ಬಣ್ಣ : ಕೆಂಪು-ಬಿಳಿ-ಹಳದಿ
ವೃಷಭ : ಆರೋಗ್ಯ ಸರಿ ಹೋಗುವುದು. ಸ್ನೇಹಿತರಿಂದ ತೊಂದರೆ. ಕೊಟ್ಟ ಹಣ ಹಿಂತಿರುಗುವುದಿಲ್ಲ. ನಮಃ ಶಿವಾಯ ಈದಿನ ಜಪ ಮಾಡಿ.
ಶುಭ ಸಂಖ್ಯೆ : 2-7-10-11 ಬಣ್ಣ : ಕೇಸರಿ- ಬಿಳಿ-ಕೆಂಪು-ಹಸಿರು
ಮಿಥುನ : ಇಂದು ಚೆನ್ನಾಗಿದೆ. ಮಕ್ಕಳಿಗೆ ವಿದ್ಯೆಯ ಫಲಿತಾಂಶ ಚೆನ್ನಾಗಿದೆ. ಆರೋಗ್ಯವೂ ಉತ್ತಮ. ಒಳ್ಳೆಯ ದಿನ.
ಶುಭ ಸಂಖ್ಯೆ : 5-6-10 ಬಣ್ಣ : ಹಳದಿ-ಕೆಂಪು-ಹಸಿರು
ಕರ್ಕ : ಮಕ್ಕಳಿಂದ ಮನಸ್ಸಿಗೆ ಮುದ. ಆಯಾಸ. ಮಾತಿನ ಭರವಸೆ. ಈದಿನ ಮಿಶ್ರ ಫಲ ಅಷ್ಟೆ. ಗಣೇಶನನ್ನು ಆರಾಧಿಸಿ.
ಶುಭ ಸಂಖ್ಯೆ : 4-5-1 ಬಣ್ಣ : ಬಿಳಿ-ಕೆಂಪು-ಕೇಸರಿ
ಸಿಂಹ : ದೃಷ್ಟಿ ಸಂಬಂಧ ಕಳವಳ. ಆಸ್ತಿ ವಿಚಾರ ಒಳ್ಳೆಯದಿದೆ. ಮಡದಿಯ ಆರೋಗ್ಯ ಏರು-ಪೇರು. ತಿರುಗಾಟ. ದೀಪದ ಎಣ್ಣೆ ಅಭಿಷೇಕ ಮಾಡಿಸಿ.
ಶುಭ ಸಂಖ್ಯೆ : 5-6-9-11 ಬಣ್ಣ : ಕೆಂಪು-ಬಿಳಿ
ಕನ್ಯಾ : ಬರೀ ಕಿರಿಕಿರಿ. ಹಿಂಸೆ. ಬೇಸರ. ಸಹೋದರರೇ ಸಂಪತ್ತು. ಸ್ವಲ್ಪ ಹಿತ. ಲಾಭ ನಷ್ಟ ಎರಡೂ ಇಲ್ಲ. ಗಣೇಶ ಸ್ತೋತ್ರ ಪಠಿಸಿ.
ಶುಭ ಸಂಖ್ಯೆ : 7-10-11-03 ಬಣ್ಣ : ಕೆಂಪು-ನೀಲಿ-ಬೂದು
ತುಲಾ : ಆದಾಯವಿದೆ. ಒತ್ತಡ. ಸಮಾಧಾನ ಅಗತ್ಯ. ಸತ್ಕರ್ಮಕ್ಕೆ ಹಣ ವ್ಯಯ. ಈಶ್ವರನ ನೆನೆಯಿರಿ.
ಶುಭ ಸಂಖ್ಯೆ :- 8-9-4 ಬಣ್ಣ :- ನೀಲಿ-ಬಿಳಿ-ಬೂದು
ವೃಶ್ಚಿಕ : ಇಂದು ತೊಂದರೆ ಇಲ್ಲ. ನಾಳೆಯ ಬಗ್ಗೆ ಯೋಚನೆ ಬೇಡ. ಪಂಚಮದ ರಾಹು ಭಾಧಿಸುತ್ತಾನೆ. ಹಣ ಅಧಿಕ ಖರ್ಚು. ಆಗತ್ಯ ವಸ್ತು ದಾನ ಮಾಡಿ. ಗುರು ಸ್ತ್ರೋತ್ರ ಓದಿ.
ಶುಭ ಸಂಖ್ಯೆ : 8-1-5 ಬಣ್ಣ : ಕೆಂಪು-ಬಿಳಿ-ಕೇಸರಿ
ಧನು : ಕೆಲಸದಲ್ಲಿ ಹಿನ್ನಡೆ. ಶಾರೀರಿಕ ಸೌಖ್ಯ. ಇಷ್ಟ ಬಂದಂತೆ ಇರುವಿಕೆ. ಬಂಧುಗಳು ದೂರ. ಕುಲದೇವರ ಪೂಜೆ ಮಾಡಿ.
ಶುಭಸಂಖ್ಯೆ : 9-12-04 ಬಣ್ಣ : ಕೇಸರಿ-ಬಿಳಿ
ಮಕರ : ಬುದ್ಧಿಯ ಯೋಚನೆ ಆಗುವುದಿಲ್ಲ. ಕುಟುಂಬಕ್ಕೆ ಹಣ ವ್ಯಯ. ಅನಗತ್ಯ ತಿರುಗಾಟ. ರಾಹು ಜಪ ಮಾಡಿಸಿ.
ಶುಭ ಸಂಖ್ಯೆ : 10-11-02 ಬಣ್ಣ : ನೀಲಿ-ಬೂದು-ಕಪ್ಪು
ಕುಂಭ : ಸೋಮಾರಿತನ ಕೈ ಬಿಡಿ. ಉದ್ಯೋಗ ಚೆನ್ನಾಗಿದೆ. ಆರೋಗ್ಯವಿದೆ. ಖರ್ಚು ಅಧಿಕ. ಎಳ್ಳು ಎಣ್ಣೆ ದಾನ ಮಾಡಿ.
ಶುಭ ಸಂಖ್ಯೆ : 11-03-06 ಬಣ್ಣ : ನೀಲಿ-ಬೂದು
ಮೀನ : ಬುದ್ಧಿಗೆ ಕೆಟ್ಟ ಯೋಚನೆ. ವ್ಯಯ ಕಡಿಮೆ. ವಿದ್ಯಾಭ್ಯಾಸ ಪ್ರಗತಿ. ಸಂಸಾರದಲ್ಲಿ ಸುಖ. ವೇದನೆ. ನಾಗನ ಆರಾಧನೆ ಮಾಡಿ.
ಶುಭ ಸಂಖ್ಯೆ : 12-1-8-5 ಬಣ್ಣ : ಕೇಸರಿ-ಬಿಳಿ-ಕೆಂಪು
ಇದನ್ನೂ ಓದಿ » ದಿನ ಪಂಚಾಂಗ | ಇವತ್ತು ಯಾವ್ಯಾವ ಸಮಯ ಶುಭ? ಯಾವ ಸಮಯ ಅಶುಭ?
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200