DINA BHAVISHYA, 23 AUGUST 2024
ಮೇಷ : ಈ ದಿನ ವಿದ್ಯಾರ್ಥಿಗಳಿಗೆ ಹಿನ್ನಡೆ. ಹನ್ನೆರಡರ ಚಂದ್ರ ರಾಹು ವ್ಯಯದೊಂದಿಗೆ ಬೇಸರವನ್ನೂ ನೀಡುತ್ತಾರೆ. ಆರೋಗ್ಯದ ಬಗ್ಗೆ ಗಮನ ವಿರಲಿ. ನಾಗನನ್ನು ವಿಶೇಷವಾಗಿ ಆರಾಧಿಸಿ. ಶುಭ ಸಂಖ್ಯೆ: 1-5-8-9
ವೃಷಭ : ಇಂದಿನ ಶುಕ್ರವಾರ ಶುಭವಾಗಿದೆ. ಕೇಂದ್ರದ ರವಿ-ಚಂದ್ರ ಅನುಕೂಲ ನೀಡಿದ್ದು. ಆದರೆ ಅಣ್ಣ ತಮ್ಮಂದಿರು ಮೌನದಿಂದಿರಿ. ತುಪ್ಪದ ದೀಪ ಹಚ್ಚಿ ಪ್ರಾರ್ಥಿಸಿ. ಶುಭ ಸಂಖ್ಯೆ 2-7-10-11
ಮಿಥುನ : ನಮ್ಮ ಯೋಚನೆಯಂತೆ ಕೆಲಸವಾದರೂ ಹಣದ ಆಗಮನ ಮನಸ್ಸಿನಂತೆ ಇಲ್ಲ. ಭಾಗ್ಯೋದಯದ ಶನಿ ಭಾಗ್ಯಲಕ್ಷ್ಮೀಯನ್ನು ತಡೆದಿದ್ದಾನೆ. ಉತ್ತಮವಿದೆ. ವಿಷ್ಣು ಸಹಸ್ರನಾಮ ಪಠಿಸಿ. ಶುಭ ಸಂಖ್ಯೆ : 5-6-10
ಕರ್ಕ : ಆರಕ್ಕೇರದ ಮೂರಕ್ಕೆ ಇಳಿದ ದಿನ ನಿಮ್ಮದು. ಯಾಕೋ ಬೇಸರ. ಯಾರ ಮಾತನ್ನೂ ಕೇಳಿ ಬೇಸರ ಬೇಡ. ಹಣ ಇಂದು ನೆಮ್ಮದಿ ನೀಡುತ್ತದೆ. ಶ್ರಮವಹಿಸಿ ವಿದ್ಯಾರ್ಥಿಗಳು ಓದಿ. ಆದಿತ್ಯ ಹೃದಯ ಪಠಿಸಿ. ಶುಭ ಸಂಖ್ಯೆ 4-5-1
ಸಿಂಹ : ನೀವು ಎಲ್ಲಿಗೂ ರಾಜ. ಆದರೆ ಹಣ ವಿಚಾರಕ್ಕೆ ಭೋಜ. ಯೋಚಿಸಿ ಖರ್ಚು ಮಾಡಿ. ನಿಮ್ಮ ಗತ್ತು ನಿಮಗೆ ತೊಂದರೆ. ಗಣೇಶನಿಗೆ 21 ಬಾರಿ ನಮಸ್ಕರಿಸಿ. ಶುಭ ಸಂಖ್ಯೆ : 5-6-9-11
ಕನ್ಯಾ : ಕೇತು ಅಶುಭನಾಗಿದ್ದಾನೆ. ಸುಮ್ಮನಿರಿ. ಅನಗತ್ಯ ವಿಚಾರಕ್ಕೆ ಕೈ ಹಾಕಬೇಡಿ. ದಂಪತಿಗಳಲ್ಲಿ ಕಿರಿ-ಕಿರಿ. ನಿಮ್ಮ ಕೆಲಸ ನಿಮಗೆ ಉತ್ತಮ. ಶುಭವೂ ಇದೆ. ಹುರಳಿ ಧಾನ್ಯ ದಾನ ಮಾಡಿ. ಶುಭ ಸಂಖ್ಯೆ : 7-10-11-03
ತುಲಾ : ಎಲ್ಲವನ್ನೂ ಎಲ್ಲರನ್ನು ಸಹಿಸುವ ತಾಳ್ಮೆ ನಿಮ್ಮದು. ಪಂಚಮದ ಶನಿ ಷಷ್ಠದ ರಾಹು. ಸ್ವಲ್ಪ ತೊಂದರೆ. ಆದರೆ ಶುಭವಿದೆ. ಲಾಭದ ದಿನಕರ ಈ ದಿನ ಶುಭಕರ. ಶುಭ ಸಂಖ್ಯೆ : 8-9-4
ವೃಶ್ಚಿಕ : ಮಂಗಳಮಯವಾದ ದಿನ. ಕಾರ್ಯ ಸ್ಥಾನ ಚೆನ್ನಾಗಿದೆ. ವಿವಾಹದ ಯೋಗ ಹತ್ತಿರ ಬಂದಿದೆ. ಲಕ್ಕು ನಿಮ್ಮ ಪುಕ್ಕ ಕೀಳುವುದಿದೆ. ದೇವಿಯ ಕೃಪೆಯಿಂದ ಆನುಕೂಲ. ಶುಭ ಸಂಖ್ಯೆ : 8-1-5
ಧನು : ರಾಹು ಕೇಂದ್ರದಲ್ಲಿ ಇದ್ದಾನೆ. ಪ್ರಯೋಜನವಿಲ್ಲ. ಊಟ ಮುಂದಿದ್ದರೂ ಮಾಡದ ಪರಿಸ್ಥಿತಿ. ಶ್ರದ್ಧೆಯಿಂದ ಆಂಜನೇಯನನ್ನು ಆರಾಧಿಸಿ. ಶುಭಸಂಖ್ಯೆ : 9-12-04
ಮಕರ : ದಂಪತಿಗಳಲ್ಲಿ ಮಾತಿನ ಗಲಾಟೆ. ಮನಸ್ಸಿಗೆ ನೋವು. ಸಹಾಯಕ್ಕೆ ಬಾರದ ಭ್ರಾತೃಗಳು. ಈದಿನ ಬರೀ ಅಶುಭ ಶನಿ ಸ್ತೋತ್ರ ಪಠಿಸಿ. ಶುಭ ಸಂಖ್ಯೆ : 10-11-02
ಕುಂಭ : ಮಂದಗತಿಯ ಕೆಲಸ. ಆರ್ಥಿಕದ ಅಭಾವ. ಕುಟುಂಬದ ಸಹಕಾರ. ಕಾರ್ಯ ಸಾಧು. ಒಟ್ಟಾರೆ ಮಿಶ್ರ ಫಲ. ಈದಿನ ರಾಯರ ಆರಾಧಿಸಿ. ಶುಭ ಸಂಖ್ಯೆ : 11-03-06
ಮೀನ : ಸುಮ್ಮನೆ ಇದ್ದರೆ ಈದಿನ ಒಳಿತು. ಖರ್ಚು ಕಡಿಮೆ. ವಿದ್ಯೆಯಲ್ಲಿ ಹಿನ್ನಡೆ. ಸರ್ಪದ ಆರಾಧನೆಯಲ್ಲಿ ಭಾಗವಹಿಸಿ . ಬುದ್ದಿವಂತರಾಗುತ್ತೀರ. ಶುಭ ಸಂಖ್ಯೆ : 12-1-8-5
ಇದನ್ನೂ ಓದಿ ⇒ ‘ರಕ್ತ ಕೊಟ್ಟೇವು, ನೀರು ಕೊಡುವುದಿಲ್ಲ’ ಅಂದವರು ಈಗ ಧ್ವನಿ ಎತ್ತಬೇಕು, ಮಾಜಿ ಮಿನಿಸ್ಟರ್ ಆಗ್ರಹ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200