ಶಿವಮೊಗ್ಗ ಲೈವ್.ಕಾಂ
ಶಿವಮೊಗ್ಗ ಜಿಲ್ಲೆಯ ನಂಬರ್ 1 ಸುದ್ದಿ ಮಾಧ್ಯಮ
DINA BHAVISHYA | 4 DECEMBER 2024
ಮೇಷ
ಕೋಪದ ಕೈಗೆ ಬುದ್ದಿ ಕೊಡುವುದು ಒಳ್ಳೆಯದಲ್ಲ. ಸ್ನೇಹಿತರೊಂದಿಗೆ ವಿರಸ ಸಾಧ್ಯತೆ. ಅನಗತ್ಯ ಸಮಯ ವ್ಯರ್ಥವಾಗಲಿದೆ. ಸಂಗಾತಿಯ ಅನಾರೋಗ್ಯದಿಂದ ಖರ್ಚು ಹೆಚ್ಚಲಿದೆ.
ವೃಷಭ
ವ್ಯರ್ಥ ಆಲೋಚನೆಗಳು ನಿಮ್ಮ ಮನಸನ್ನು ಆವರಿಸಲಿದೆ. ಕುಟುಂಬದಲ್ಲಿ ವಿರಸ. ಉದ್ಯೋಗ ಸ್ಥಳದಲ್ಲಿ ಅನಗತ್ಯ ಕಿರಿಕಿರಿ. ಮೌನ ವಹಿಸುವುದು ಉತ್ತಮ.
ಮಿಥುನ
ಕೆಲಸದ ಸ್ಥಳದಲ್ಲಿ ಅತ್ಯಂತ ಒತ್ತಡವಿರಲಿದೆ. ಇದರಿಂದ ಮಾನಸಿಕ ಶಾಂತಿ ಕದಡಲಿದೆ. ಮನೆಯಲ್ಲಿ ವಿನಾಕಾರಣ ಅಸಮಾಧಾನ. ಸಂಗಾತಿಯಿಂದ ನೆರವು.
ಕರ್ಕಾಟಕ
ಕೆಲಸದ ನಡುವೆ ವಿಶ್ರಾಂತಿ ಲಭಿಸಲಿದೆ. ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರೆ ಮನಸಿಗೆ ನೆಮ್ಮದಿ. ಸಂಬಂಧಿಗಳ ಮನೆಗೆ ಭೇಟಿ ನೀಡುತ್ತೀರಿ.
ಸಿಂಹ
ದೀರ್ಘಕಾಲದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಸಿಗಲಿದೆ. ಕುಟುಂಬದ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತೀರಿ. ಸಂತೋಷದಿಂದ ಇರುವಿರಿ. ಸಂಗಾತಿಯೊಂದಿಗೆ ನೆಮ್ಮದಿ.
ಕನ್ಯಾ
ಸ್ವಲ್ಪ ಪ್ರಮಾಣದ ಸಾಲ ತೀರಲಿದೆ. ಅವಕಾಶಗಳನ್ನು ಕೈ ಚೆಲ್ಲುತ್ತೀರಿ. ಅನೇಕರಿಂದ ಟೀಕೆ ಎದುರಿಸಬೇಕಾಗುತ್ತದೆ. ಮಾತಿನಲ್ಲಿ ನೈಜತೆ ಇರಲಿ.
ತುಲಾ
ಖರ್ಚು, ವೆಚ್ಚದ ಮೇಲೆ ನಿಗಾ ಇರಲಿ. ಹಣದ ಅಪವ್ಯಯ ಆಗಲಿದೆ. ಯಾವುದೋ ಕಾರಣಕ್ಕೆ ಗಾಯಗೊಳ್ಳುವ ಸಾಧ್ಯತೆ ಇದೆ. ದೂರ ಪ್ರಯಾಣ. ನಿಮಗಾಗಿ ಹೆಚ್ಚಿನ ಸಮಯ ಮೀಸಲಿಡಿ.
ವೃಶ್ಚಿಕ
ವಾಹನ ಚಾಲನೆ ವೇಳೆ ರಸ್ತೆ ಮೇಲೆ ಹೆಚ್ಚು ಗಮನವಿರಲಿ. ಹಣದ ಹರಿವು ಇರಲಿದೆ. ಇದರಿಂದ ದೊಡ್ಡ ಸಮಸ್ಯೆ ಪರಿಹಾರವಾಗಲಿದೆ. ಸ್ನೇಹಿತರೊಂದಿಗೆ ಸುಸಮಯ ಕಳೆಯುತ್ತೀರಿ.
ಧನು
ಮನೆಗೆ ಸಂಬಂಧಿ ಆಗಮನ. ಮಕ್ಕಳ ಸಾಧನೆಯಿಂದ ನಿಮಗೆ ಸಂತೋಷ ಉಂಟಾಗಲಿದೆ. ಕುಟುಂಬದಲ್ಲಿಯು ನೆಮ್ಮದಿ. ಸಂಜೆ ವೇಳೆಗೆ ಸಂಗಾತಿಯೊಂದಿಗೆ ಮುನಿಸು.
ಮಕರ
ಯೋಗ, ಧ್ಯಾನ, ಕ್ರೀಡೆಯ ಮೇಲೆ ಆಸಕ್ತಿ ಮೂಡಲಿದೆ. ನಿಮ್ಮ ಇಷ್ಟದ ಸಂಗೀತವನ್ನು ಕೇಳುವುದರಿಂದ ಮನಸಿಗೆ ನೆಮ್ಮದಿ. ನಿರುದ್ಯೋಗಿಯಾಗಿದ್ದರೆ ಇವತ್ತು ಉದ್ಯೋಗ ದೊರೆಯಲಿದೆ.
ಕುಂಭ
ಹಣ ಉಳಿತಾಯ ಮತ್ತು ಹೂಡಿಕೆಯತ್ತ ಗಂಭೀರವಾಗಿ ಯೋಚಿಸಿ. ಇದು ದೀರ್ಘಕಾಲದ ಲಾಭ ತರಲಿದೆ. ಸ್ನೇಹಿತರು, ಸಂಗಾತಿಯ ಕಾರಣಕ್ಕೆ ದುಂದುವೆಚ್ಚ ಆಗಬಹುದು. ಮನೆಯಲ್ಲಿ ಸ್ವಲ್ಪ ಕಿರಿಕಿರಿ.
ಮೀನ
ಆಹಾರ ಸೇವನೆ ನಿಯಂತ್ರಣದಲ್ಲಿರಲಿ. ವೈದ್ಯರನ್ನು ಕಾಣುವ ಸಂದರ್ಭ ಎದುರಾಗಲಿದೆ. ಸಣ್ಣಪುಟ್ಟ ಸಮಸ್ಯೆ ಹೊರತು ಇಡೀ ದಿನ ನೆಮ್ಮದಿಯಿಂದ ಇರುತ್ತೀರಿ.
ಇದನ್ನೂ ಓದಿ » ಅಡಿಕೆ ಧಾರಣೆ | 3 ಡಿಸೆಂಬರ್ 2024 | ಶಿವಮೊಗ್ಗದಲ್ಲಿ ಇವತ್ತು ಎಷ್ಟಿದೆ ಅಡಿಕೆ ರೇಟ್?
ಈಗ ಸುಲಭಕ್ಕೆ ಸಿಗಲಿದೆ ಸಾಲ ತುರ್ತು ಸಾಲದ ಅವಶ್ಯಕತೆ ಇದೆಯೇ? ಶಿವಮೊಗ್ಗದಲ್ಲಿ ಗೃಹ ನಿರ್ಮಾಣ ಸಾಲ ಮತ್ತು ಇತರೆ ಸಾಲಗಳು ಸುಲಭಕ್ಕೆ ಸಿಗಲಿದೆ. ಕೂಡಲೆ ಕರೆ ಮಾಡಿ 9972194422