ದಿನ ಭವಿಷ್ಯ | ಇವತ್ತು ಈ ರಾಶಿಯವರಿಗೆ ಹಣ ಖರ್ಚು ಹೆಚ್ಚು, ಯಾವ್ಯಾವ ರಾಶಿಯವರ ಭವಿಷ್ಯ ಹೇಗಿದೆ?

DINA-BHAVISHYA

ಸುದ್ದಿಯ ಮುಂದಿನ ಭಾಗ ಕೆಳಗಿದೆ

Meshaಮೇಷ

ಇವತ್ತು ಜನರೊಂದಿಗೆ ಭೇಟಿಯಾಗುವುದಕ್ಕಿಂತಲೂ ಒಂಟಿಯಾಗಿ ಸಮಯ ಕಳೆಯಲು ಇಷ್ಟ ಪಡುತ್ತೀರ. ಸಂಗಾತಿಯೊಂದಿಗೆ ಸಂತಸದಿಂದ ಸಮಯ ಕಳೆಯುತ್ತೀರಿ.

Vrushabaವೃಷಭ

ಹೆಚ್ಚು ಆಶಾವಾದಿಯಾಗಿರಲು ಪ್ರಯತ್ನಿಸಿ. ಇದರಿಂದ ನಿಮ್ಮ ವಿ‍ಶ್ವಾಸ ಹೆಚ್ಚಲಿದೆ. ನಿಮ್ಮ ಬಳಿ ಹಣ ಕೇಳಿ ಪಡೆಯುವವರಿದ್ದಾರೆ. ಅದರೆ ಅವರು ಮರು ಪಾವತಿ ಮಾಡುವುದು ವಿರಳ.

Nanjappa Hospital Advertisement

Mithunaಮಿಥುನ

ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು ಆಹ್ಲಾದಕರವಾಗಿರುತ್ತದೆ. ಮಕ್ಕಳು ಒಳ್ಳೆಯ ಸುದ್ದಿ ತರಲಿದ್ದಾರೆ. ಬಿಡುವಿನ ವೇಳೆ ಆಧ್ಯಾತ್ಮಿಕ ಪುಸ್ತಕ ಓದಿ.

Karkatakaಕರ್ಕಾಟಕ

ಕುಟುಂಬದವರು, ಸ್ನೇಹಿತರಿಗಾಗಿ ಇಂದು ಹೆಚ್ಚು ಹಣ ಖರ್ಚು ಮಾಡಲಿದ್ದೀರಿ. ಸಂಗಾತಿಯಿಂದ ಶುಭ ಸುದ್ದಿ.

Simhaಸಿಂಹ

ಸೃಜನಶೀಲ ಪ್ರತಿಭೆಯನ್ನು ಬಳಸಿದಲ್ಲಿ ಲಾಭದಾಯಕ. ನಿಮ್ಮ ದೃಢತೆ, ನಿರ್ಭಯತೆಯಿಂದ ಆತ್ಮವಿ‍ಶ್ವಾಸ ಹೆಚ್ಚಲಿದೆ.

Kanyaಕನ್ಯಾ

ಮನೆಯ ಹಿರಿಯರೊಂದಿಗೆ ಚರ್ಚೆ ಮಾಡಿದರೆ ಹಣಕಾಸು ಸಮಸ್ಯೆಗೆ ಪರಿಹಾರ ಲಭಿಸಲಿದೆ. ವೈವಾಹಿಕ ಜೀವನ ಸುಂದರವಾಗಿರಲಿದೆ.

Thulaತುಲಾ

ಹೂಡಿಕೆ ಮಾಡುವತ್ತ ಆಸಕ್ತಿ ಮೂಡುತ್ತದೆ. ದೀರ್ಘ ಕಾಲದ ಹೂಡಿಕೆಯತ್ತ ಯೋಚಿಸಿದರೆ ಅನುಕೂಲ. ಸ್ನೇಹಿತರ ಜೊತೆಗೆ ಸುತ್ತಾಡಲಿದ್ದೀರಿ.

Vrushikaವೃಶ್ಚಿಕ

ಪ್ರೀತಿಯ ವಿಚಾರದಲ್ಲಿ ಮಹತ್ವದ ತಿರುವು ಸಿಗಲಿದೆ. ಮದುವೆ ಯೋಗ ಕೂಡಿ ಬರಬಹುದು. ಮಕ್ಕಳೊಂದಿಗೆ ಸಮಯ ಕಳೆಯುವುದು ಉಚಿತ.

Dhanuಧನು

ಉಳಿತಾಯದ ಹಣ ಇವತ್ತು ನೆರವಿಗೆ ಬರಲಿದೆ. ಕುಟುಂಬಕ್ಕೆ ಸಂತೋಷದ ಸುದ್ದಿ ತಲುಪಲಿದೆ. ಒತ್ತಡಕ್ಕೆ ಒಳಗಾಗಬಾರದು.

Makaraಮಕರ

ಮನರಂಜನೆಗೆ ಹೆಚ್ಚು ಹಣ ಮತ್ತು ಸಮಯ ಕಳೆಯುವುದನ್ನು ನಿಲ್ಲಿಸಿ. ನಗು ಮುಖವಿದ್ದರೆ ಎಲ್ಲ ಸಮಸ್ಯೆಗಳಿಗೆ ಪರಿಹಾರ ಲಭಿಸಲಿದೆ.

DINA-BHAVISHYA-MITHUN-AUTHOR1

Kumbaಕುಂಭ

ಪ್ರೀತಿ ಪಾತ್ರರು ದ್ವೇಷ ಮಾಡಿದರೂ ನೀವು ಅವರಿಗೆ ಪ್ರೀತಿ ತೋರಿಸಬೇಕು. ಹೆಚ್ಚು ಹಣ ಖರ್ಚಾಗಲಿದೆ. ಕುಟುಂಬ ಸದಸ್ಯರೊಂದಿಗೆ ಹೆಚ್ಚು ಸಮಯ ಕಳೆಯಿರಿ.

Meenaಮೀನ

ಅಪರಿಚಿತ ವ್ಯಕ್ತಿಯೊಂದಿಗೆ ವಿವಾದ. ಇಡೀ ದಿನ ಮನಸು ಕೆಡುವ ಸಾಧ್ಯತೆ. ಮಕ್ಕಳು, ಕುಟುಂಬದವರಿಂದ ಸ್ವಲ್ಪ ನೆಮ್ಮದಿ.

📍 ನಿಮ್ಮೂರ ಸುದ್ದಿ
ಶಿವಮೊಗ್ಗ ಜಿಲ್ಲೆಯ ಯಾವುದೇ ಊರಿನ ಸುದ್ದಿಯನ್ನು ವಾಟ್ಸಪ್‌ ಮಾಡಬಹುದು. ಉಚಿತವಾಗಿ ಪ್ರಕಟಿಸುತ್ತೇವೆ.
Shivamogga Live Promotion

Leave a Comment