ದಿನ ಭವಿಷ್ಯ | ಯಾವ್ಯಾವ ರಾಶಿಗೆ ಇವತ್ತು ಹೇಗಿದೆ?

DINA-BHAVISHYA

SHIVAMOGGA LIVE | 28 MAY 2023

Meshaಮೇಷ

ಅನಗತ್ಯ ಆಲೋಚನೆಗಳಿಂದ ಸಮಯ ವ್ಯರ್ಥ. ಪ್ರಮುಖ ಪ್ರಕರಣಗಳಲ್ಲಿ ಜಯ ಸಿಗಲಿದೆ. ಮಾತಿನ ಮೇಲೆ ನಿಗಾ ಇರಲಿ. ತಾಳ್ಮೆಯಿಂದ ಇರುವುದು ಉಚಿತ.

Vrushabaವೃಷಭ

ವ್ಯಾಪಾರ ಉದ್ದೇಶಕ್ಕೆ ದೂರ ಪ್ರಯಾಣ. ದೀರ್ಘಾವಧಿ ಲಾಭ ದೊರೆಯಲಿದೆ. ಇಂದಿನಿಂದಲೆ ಹಣ ಕೂಡಿಡುವುದನ್ನು ಆರಂಭಿಸಿ. ಭವಿಷ್ಯದಲ್ಲಿ ಉಪಯೋಗಕ್ಕೆ ಬರಲಿದೆ.

Mithunaಮಿಥುನ

ಸಂಜೆ ವೇಳೆಗೆ ಶುಭ ಸುದ್ದಿ ಸಿಗಲಿದೆ. ಕುಟುಂಬದವರಿಗಾಗಿ ವಿಶೇಷ ಯೋಜನೆ ರೂಪಿಸುತ್ತೀರಿ. ಮನೆಯಲ್ಲಿ ನಿಮ್ಮ ಗುಣಗಳ ಬಗ್ಗೆ ಚರ್ಚೆಯಾಗಲಿದೆ. ನೆಮ್ಮದಿ ಇರಲಿದೆ.

Karkatakaಕರ್ಕಾಟಕ

ಧಾರ್ಮಿಕ ಕಾರ್ಯಗಳಿಂದ ಮಾನಸಿಕ ನೆಮ್ಮದಿ. ಮಕ್ಕಳಿಂದ ಖುಷಿ ಮತ್ತು ನೆಮ್ಮದಿ ಲಭಿಸಲಿದೆ. ನಿರೀಕ್ಷೆಗು ಮೀರಿ ಆದಾಯ ದೊರೆಯಲಿದೆ. ಆದರೂ ಚಿಂತೆ ಕಡಿಮೆಯಾಗುವುದಿಲ್ಲ.

Simhaಸಿಂಹ

ಕೋಪದ ಸ್ವಭಾವದಿಂದ ಹಣ ಸಂಪಾದನೆಗೆ ತೊಡಕಾಗಲಿದೆ. ಸ್ಪಷ್ಟ ಕಾರಣವೇ ಇಲ್ಲದೆ ಮಾನಸಿಕ ನೆಮ್ಮದಿ ಹಾಳಾಗುತ್ತದೆ. ಸ್ನೇಹಿತರೊಂದಿಗೆ ಮಾತುಕತೆ ಹಿತ ನೀಡಲಿದೆ.

Kanyaಕನ್ಯಾ

ಯಾವುದೆ ಹೂಡಿಕೆಗೆ ಇಂದು ಒಳ್ಳೆಯ ದಿನವಲ್ಲ. ಜೊತೆಗಿರುವವರ ಹೊಗಳಿಕೆಯಿಂದ ಹಿಗ್ಗುತ್ತೀರಿ. ಇದರಿಂದ ತುಸು ನೆಮ್ಮದಿಯ ಭಾವ ಮೂಡಲಿದೆ. ಒತ್ತಡದ ದಿನವಾದರೂ ಆರೋಗ್ಯದ ಮೇಲೆ ಗಮನವಿರಲಿ.

Thulaತುಲಾ

ದುಂದು ವೆಚ್ಚಕ್ಕೆ ಕಡಿವಾಣ ಹಾಕಿ. ಅತಿಯಾದ ಖರ್ಚಿನಿಂದಾಗಿ ಕುಟುಂಬದವರು ಚಿಂತೆಗೀಡಾಗುತ್ತಾರೆ. ಆರೋಗ್ಯದ ಮೇಲೆ ಹೆಚ್ಚು ಮುತುವರ್ಜಿ ವಹಿಸಿ.

Vrushikaವೃಶ್ಚಿಕ

ಹಣದ ಅವಶ್ಯಕತೆ ಉಂಟಾಗಲಿದೆ. ಆದರೆ ಯಾರೊಬ್ಬರು ನಿಮ್ಮ  ನೆರವಿಗೆ ಬರುವುದಿಲ್ಲ. ಹೊರಗಿನವರ ಕಾರಣಕ್ಕಾಗಿ ಸಂಗಾತಿಯೊಂದಿಗೆ ಜಗಳ ಮಾಡುವ ಪರಿಸ್ಥಿತಿ ನಿರ್ಮಾಣವಾಗಲಿದೆ.

Dhanuಧನು

ಮಹತ್ವದ ನಿರ್ಧಾರ ಕೈಗೊಳ್ಳಲು ಸುಸಮಯ. ಪೋಷಕರ ಅಭಿಪ್ರಾಯ ಮುಖ್ಯವಾಗಲಿದೆ. ಆಸಕ್ತಿದಾಯ ವಿಷಯಗಳತ್ತ ಹೆಚ್ಚು ಸಮಯ ಕಳೆಯುತ್ತೀರಿ. ಧಾರ್ಮಿಕ ಕಾರ್ಯದಲ್ಲಿ ತೊಡಗುತ್ತೀರಿ.

Makaraಮಕರ

ಬಾಕಿ ಇರುವ ಸಾಲದ ಹಣ ಹಿಂತಿರುಗಲಿದೆ. ಕೈಗೊಂಡ ಯೋಜನೆಗಳು ಅರ್ಧಕ್ಕೆ ಸ್ಥಗಿತವಾಗಲಿದೆ. ಮನೆಯಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಸಾಧ್ಯತೆ.

Kumbaಕುಂಭ

ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ನಿಮ್ಮ ಸಾಮರ್ಥ್ಯದ ಕುರಿತು ಏಕಾಂತದಲ್ಲಿ ಕುಳಿತು ಯೋಚಿಸಿ. ವ್ಯಕ್ತಿತ್ವದಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿದೆ.

Meenaಮೀನ

ಆಸ್ತಿ ವ್ಯವಹಾರದಲ್ಲಿ ಲಾಭ ದೊರೆಯಲಿದೆ. ನೆರೆ ಹೊರೆಯವರಿಂದ ತೊಂದರೆ. ಮನೆಯಲ್ಲಿ ಸಮಯ ಕಳೆಯಲು ಬಯಸುತ್ತೀರಿ. ಆದರೆ ಶಾಂತಿಯುತವಾಗಿ ಇರಲು ಸಾಧ್ಯವಾಗುವುದಿಲ್ಲ.

WATCH VIDEO

ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ

ಚಿತ್ರದ ವಿವರಣೆ
Shaki Toyota, Shivamogga
ನಿತಿನ್ ಆರ್‌.ಕೈದೊಟ್ಲು
ನಿತಿನ್ ಆರ್‌.ಕೈದೊಟ್ಲು

Published : May 28, 2023 at 7:39 AM IST

JNN College of Engineering Admissions started

© ಶಿವಮೊಗ್ಗ ಲೈವ್‌ : ಮೇ 28, 2023

Leave a Comment