ಮೇಷ
ಇಂದು ಯಾವುದೆ ನಿರ್ಧಾರ ಕೈಗೊಳ್ಳುವಾಗ ಗಡಿಬಿಡಿ ಮಾಡಬೇಡಿ. ವೈಯಕ್ತಿಕ ಮತ್ತು ಗೌಪ್ಯ ವಿಚಾರಗಳನ್ನು ಯಾರ ಮುಂದೆಯೂ ಬಹಿರಂಗಪಡಿಸಬೇಡಿ. ಹೆಂಡತಿಯೊಂದಿಗೆ ವಿರಸ.
ವೃಷಭ
ತುಂಬಾ ದಣಿದಿದ್ದೀರ. ವಿಶ್ರಾಂತಿ ಪಡೆಯಿರಿ. ಅನ್ಯರ ದೋಷ ಕಂಡು ಹಿಡಿಯಲು ಹೋಗಬೇಡಿ. ವಾದ, ಜಗಳಕ್ಕೆ ಮುಂದಾಗಬೇಡಿ. ನಿರೀಕ್ಷೆಯಂತೆ ಕೆಲಸಗಳು ಆಗದಿರುವುದರಿಂದ ಅಸಮಾಧಾನ.
![]() |
ಮಿಥುನ
ಕೆಲಸದ ಸ್ಥಳ ಮತ್ತು ಮನೆಯಲ್ಲಿ ನಿಮ್ಮ ಸಹನೆ ಪರೀಕ್ಷೆ ಮಾಡುವ ಪರಿಸ್ಥಿತಿ ಎದುರಾಗಲಿದೆ. ಆರೋಗ್ಯ ಏರುಪೇರು. ಮದ್ಯ ಸೇವನೆ ತ್ಯಜಿಸಲು ಇದ ಸಾಕಾಲ.
ಕರ್ಕಾಟಕ
ಆಹಾರದ ಮೇಲೆ ನಿಗಾ ಇರಲಿ. ಪ್ರೀತಿ ಪಾತ್ರರಿಂದ ಉಡುಗೊರೆ ಲಭಿಸಲಿದೆ. ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುತ್ತೀರಿ. ದುರಭ್ಯಾಸಗಳಿಂದ ದೂರವಿರಿ.
ಸಿಂಹ
ಭವಿಷ್ಯದ ಹೆಜ್ಜೆಯ ಕುರಿತು ಗೌಪ್ಯತೆ ಕಾಪಾಡಿ. ಆಪ್ತರಿಂದಲೆ ಅಪಾಯ ಸಾಧ್ಯತೆ. ಕುಟುಂಬದಲ್ಲಿ ವಿರಸ ಮೂಡಿಸಲು ಸುತ್ತಲು ಇರುವವರಿಂದಲೆ ಪ್ರಯತ್ನ.
ಕನ್ಯಾ
ಉದ್ಯಮಿಗಳಿಗೆ ಒಳ್ಳೆಯ ದಿನ. ವ್ಯಾಪಾರದ ಉದ್ದೇಶಕ್ಕೆ ಕೈಗೊಂಡ ಪ್ರವಾಸದಿಂದ ಲಾಭವಾಗಲಿದೆ. ಯೋಗ, ಧ್ಯಾನದಿಂದ ಇನ್ನಷ್ಟು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸುತ್ತೀರಿ.
ತುಲಾ
ನಿಮ್ಮಿಂದ ಸಾಲ ಪಡೆದವರು ದಿಢೀರನೆ ಹಣವನ್ನು ಹಿಂತಿರುಗಿಸುತ್ತಾರೆ. ಮುಂಗೋಪದಿಂದ ನಿಮಗೆ ಸಮಸ್ಯೆಯಾಗಲಿದೆ. ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯಿರಿ.
ವೃಶ್ಚಿಕ
ಬಿಡುವಿರದ ಕೆಲಸದಿಂದ ದಣಿಯುತ್ತೀರಿ. ಸ್ವಲ್ಪ ವಿಶ್ರಾಂತಿ ಪಡೆಯುವುದು ಸೂಕ್ತ. ಉದ್ಯಮಿಗಳಿಗೆ ಅನುಭವಿಗಳಿಂದ ವ್ಯವಹಾರದ ಕುರಿತು ಸೂಕ್ತ ಮಾಹಿತಿ ಲಭಿಸಲಿದೆ. ನಿಮ್ಮ ಕೆಲಸಕ್ಕೆ ಪ್ರಶಂಸೆ ಲಭಿಸಲಿದೆ.
ಧನು
ಕುಟುಂಬದೊಂದಿಗೆ ಸಮಯ ಕಳೆಯುವುದು ಉಚಿತ. ಒತ್ತಡ ನಿವಾರಣೆಯಾಗಲಿದೆ. ಸಂಗಾತಿಯೊಂದಿಗೆ ಮಾತುಕತೆ ನಡೆಸುವುದರಿಂದ ಸಮಾಧಾನ ಲಭಿಸಲಿದೆ.
ಮಕರ
ನಿಮ್ಮ ವಾಹನ ಕಳ್ಳತನವಾಗಬಹುದು. ಅತ್ಯಗತ್ಯ ಕೆಲಸಗಳನ್ನು ಇವತ್ತು ತಪ್ಪದೆ ಮಾಡುತ್ತೀರಿ. ಮನೆಯವರೊಂದಿಗೆ ಖುಷಿಯಿಂದ ಸಮಯ ಕಳೆಯುತ್ತೀರಿ.
ಕುಂಭ
ಹಣವನ್ನು ಹೂಡಿಕೆ ಮಾಡಿ ಅಥವಾ ಸುರಕ್ಷಿತ ಸ್ಥಳದಲ್ಲಿರಿಸಿ. ಭವಿಷ್ಯದಲ್ಲಿ ಅನುಕೂಲವಾಗಲಿದೆ. ಹಠಾತ್ ಕೆಲಸದಿಂದಾಗಿ ಸಂಜೆ ವೇಳೆ ಕುಟುಂಬವನ್ನು ನಿರ್ಲಕ್ಷಿಸುತ್ತೀರಿ. ಇದರಿಂದ ಸಮಸ್ಯೆಗೆ ಸಿಲುಕುತ್ತೀರಿ.
ಮೀನ
ಮನೆಗೆ ಸಂಬಂಧಿಸಿದ ಹೂಡಿಕೆಯಿಂದ ಲಾಭ. ಏಕಾಗ್ರತೆ ಸಾಧಿಸಿ. ಪಟ್ಟು ಬಿಡದೆ ಕೆಲಸ ಮುಂದುವರೆಸಿ. ಒಂಟಿಯಾಗಿ ಸಮಯ ಕಳೆಯಬೇಕು ಎಂದನಿಸಲಿದೆ.
ಈರುಳ್ಳಿ ಅಡುಗೆಗೆ ಅತ್ಯಂತ ಅವಶ್ಯ. ಆರೋಗ್ಯ ಕಾಪಾಡುವಲ್ಲಿಯು ಈರುಳ್ಳಿ ಮಹತ್ವದ ಪಾತ್ರ ವಹಿಸಲಿದೆ. ಹಸಿ ಈರುಳ್ಳಿಯನ್ನು ನಿತ್ಯ ಊಟದೊಂದಿಗೆ ಸೇವಿಸಿದರೆ ಹೃದಯ ರೋಗ ಬರುವುದಿಲ್ಲ.
WATCH VIDEO
ಹೆಚ್ಚಿನ ಮಾಹಿತಿಗೆ ಇಲ್ಲಿ CLICK ಮಾಡಿ
ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» ಶಿವಮೊಗ್ಗ ಲೈವ್ gmail
» Whatsapp Number
7411700200